Davanagere Accident: ದಾವಣಗೆರೆ ; ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು, ರಸ್ತೆ ಮೇಲಿನಿಂದ ರೈಲ್ವೆ ಸೇತುವೆ ಮೇಲೆ ಬಿದ್ದು ಇಬ್ಬರು ಯುವಕರ ಸಾವು

07-09-23 02:36 pm       HK News Desk   ಕರ್ನಾಟಕ

ಜಾಲಿ ರೈಡ್ ಹೊರಟಿದ್ದ ಕೇರಳ ಮೂಲದ ಇಬ್ಬರು ಯುವಕರು ದಾವಣಗೆರೆಯ ಹೊರ ವಲಯದಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಸಂಭವಿಸಿದೆ.

ದಾವಣಗೆರೆ, ಸೆ.7: ಜಾಲಿ ರೈಡ್ ಹೊರಟಿದ್ದ ಕೇರಳ ಮೂಲದ ಇಬ್ಬರು ಯುವಕರು ದಾವಣಗೆರೆಯ ಹೊರ ವಲಯದಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ಸಂಭವಿಸಿದೆ.

ಕೇರಳದ ಅತುಲ್ ಮತ್ತು ಋಷಿಕೇಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. 

ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 54 ಎಸ್.ಎಸ್.ಆಸ್ಪತ್ರೆ ಬಳಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ನಂತರ ರಸ್ತೆ ಮೇಲಿನಿಂದ ರೈಲ್ವೆ ಸೇತುವೆ ಮೇಲೆ ಬಿದ್ದಿದ್ದಾರೆ.

Two youths of Kerala killed on spot at Davanagere after car rams wall.