ಬ್ರೇಕಿಂಗ್ ನ್ಯೂಸ್
08-09-23 11:06 pm HK News Desk ಕರ್ನಾಟಕ
ರಾಯಚೂರು, ಸೆ.8: ಸನಾತನ ಧರ್ಮದ ಬಗ್ಗೆ ಅವಹೇಳನ ಮಾತಾಡಿದವರಿಗೆ ಕುಷ್ಠರೋಗ ಮತ್ತು ಏಡ್ಸ್ ಹತ್ತಿದೆ. ಯಾರೋ ಒಬ್ಬ ಸಚಿವ ಸನಾತನ ಧರ್ಮದ ಹುಟ್ಟು ಎಲ್ಲಿ ಅಂತಾನೆ. ಆ ಮಂತ್ರಿ ಯಾರಿಗೆ ಹುಟ್ಟಿದ್ದು ಅಂತ ಅವರಿಗೇ ಗೊತ್ತಿಲ್ಲ. ಇಂಥವರೆಲ್ಲಾ ನಮ್ಮ ಸನಾತನ ಧರ್ಮದ ಬಗ್ಗೆ ಪ್ರಶ್ನೆ ಮಾಡ್ತಾರೆ ಎಂದು ಪರೋಕ್ಷವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಗ್ಗೆ ಮಾಜಿ ಸಚಿವ ಬಸವನಗೌಡ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಕ್ಕೆ ಮಾತನಾಡಿದ ಅವರು ಧಮ್ಮು, ತಾಕತ್ತು ಇದ್ದರೇ ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಶ್ನಿಸಿ. ಈಗ ಮಾತಡುವವರೆಲ್ಲ ಸನಾತನ ಧರ್ಮದಲ್ಲಿ ಜನಿಸಿದ್ದಾರೆ. ಮೊಘಲರು, ಔರಂಗಜೇಬ್ ಸೇರಿ ಅನೇಕರು ದಾಳಿ ಮಾಡಿದ್ದಾರೆ. ಅವರಿಂದಲೇ ನಮ್ಮ ಭಾರತವನ್ನು ಇಸ್ಲಾಮೀಕರಣ ಮಾಡಲು ಆಗಲಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನಾಶದ ಸ್ಥಿತಿಯಲ್ಲಿದೆ, ಮೊದಲಿನ ರೀತಿ ಇಲ್ಲ. ಈಗೆಲ್ಲಾ ಕೆಟ್ಟ ಹುಳುಗಳು ಹೊರಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನಾತನ ಧರ್ಮಕ್ಕೆ ಯಾರೂ ಸ್ಥಾಪಕರಿಲ್ಲ. ಇದಕ್ಕೆ ಅಂತ್ಯ ಇಲ್ಲ. ಇದು ಶಾಶ್ವತ, ಇದು ಅನಂತ. ಇದು ನಮ ದೇಶದ ಸಂಸ್ಕೃತಿ. ಐದು ಸಾವಿರ ವರ್ಷಗಳ ಹಿಂದೆ ರಾಯಾಯಣ ಆಗಿದೆ. ಮೂರುವರೆ ಸಾವಿರ ವರ್ಷಗಳ ಹಿಂದೆ ಮಹಾಭಾರತ ಆಗಿದೆ. ಅದರ ಹಿಂದೆಯೂ ಸನಾತನ ಧರ್ಮ ಇದೆ. ಮೂಲ ಹುಡುಕಲು ಸಾಧ್ಯವಿಲ್ಲ. ಇದು ದೇವರ ಸೃಷ್ಟಿ ಎಂದು ಯತ್ನಾಳ್ ಹೇಳಿದರು.
ಸಮಾನತೆ ಇಲ್ಲ ಅಂತಾರೆ, ಹಾಗಾದರೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಿಸರ್ವೇಶನ್ ಮೇಲೆಯೇ ದೇಶದ ಕಾನೂನು ಮಂತ್ರಿಗಳಾದ್ರಾ? ಅರ್ಹತೆ, ಯೋಗ್ಯತೆ ಮೇಲೆ ಆಗಿದ್ದರಲ್ಲವೇ.. ವಾಲ್ಮೀಕಿ ರಾಮಾಯಣ ಬರೆದಿದ್ದು ಹೇಗೆ.. ಅವಾಗ ಎಲ್ಲಿ ಜಾತಿ ಪದ್ದತಿ ಇತ್ತು. ವೇದವ್ಯಾಸರು ಮಹಾಭಾರತ ಬರೆದರು. ನಮ್ಮ ದೇಶದ ಸಂವಿಧಾನದ ಉಳಿಯಲು, ಸನಾತನ ಧರ್ಮ ಬೇಕೇ ಬೇಕು, ಅದು ಉಳಿಯಬೇಕು. ಇಲ್ಲದಿದ್ದರೇ ಭಾರತ ಇಸ್ಲಾಮೀಕರಣ ಆದರೆ, ಜಿಹಾದಿ ಆಗತ್ತೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಗಾಂಧೀಜಿಯವರನ್ನು ಕೊಂದ ಗೋಡ್ಸೆ ಕಡೆಯವರು ಎಂದು ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಮಾತನೇಟು ನೀಡಿದ ಅವರು ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಹಂತಕರು ಕಾಂಗ್ರೆಸ್ನವರು. ದೇಶಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದಿದ್ದೇ ಕಾಂಗ್ರೆಸ್. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವು ಈವರೆಗೂ ಪ್ರಶ್ನಾರ್ಥಕವಾಗಿದೆ. ಅವರದ್ದು ಕೊಲೆಯೋ, ವಿಮಾನದಲ್ಲಿ ಸಾವಾಯ್ತಾ ಅಂತ ಕಾಂಗ್ರೆಸ್ನವರು ಇನ್ನೂ ಮುಚ್ಚಿಟ್ಟಿದ್ದಾರೆ. ನೆಹರುನೇ ಸುಭಾಷ್ ಚಂದ್ರ ಬೋಸ್ ಅವರನ್ನ ಹತ್ಯೆ ಮಾಡಿಸಿದ್ದು ಅಂತ ಬಹಳಷ್ಟು ಜನ ಮಾತನಾಡ್ತಾರೆ ಎಂದು ಹೇಳಿದ್ದಾರೆ.
Those who spoke about Sanatan Dharma in connection with Tamil Nadu Minister Udhayanidhi Stalin's remarks on Sanatan Dharmahave contracted leprosy and AIDS. A minister asks where sanatana dharma was born. They don't know to whom that minister was born. Bjp MLA Basanagouda Patil Yatnal indirectly attacked Home Minister Dr G Parameshwara and asked what questions such people ask about our sanatan dharma.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm