ಬ್ರೇಕಿಂಗ್ ನ್ಯೂಸ್
09-09-23 08:49 pm HK News Desk ಕರ್ನಾಟಕ
ಕಲಬುರಗಿ, ಸೆ.9: ಜೆಡಿಎಸ್ - ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಒಂದಾಗಿದ್ದಾರೆ ಅನ್ನೋದನ್ನು ಕೇಳಿದ್ದೇನೆ. ದೇವೇಗೌಡರು ಮತ್ತು ಮೋದಿ ಕೈ ಕೈ ಹಿಡಕೊಂಡಿದ್ದನ್ನು ನೋಡಿದ್ದೇನೆ. ಅವರಿಬ್ಬರ ಮಧ್ಯೆ ಯಾವ ರೀತಿ ಮೈತ್ರಿ ? ಯಾರಿಗೆ ಎಷ್ಟು ಸೀಟು ಹಂಚಿಕೆ ? ಅನ್ನೋದು ಇನ್ನೂ ಸ್ಪಷ್ಟ ಆಗಿರಲಿಕ್ಕಿಲ್ಲ. ಆದರೆ ನಮ್ಮನ್ನು ಯಾರೂ ಹತ್ತಿಡಲು ಆಗೋದಿಲ್ಲ ಎಂದಿದ್ದಾರೆ.
ದೇಶದಲ್ಲಿ ವಿರೋಧ ಪಕ್ಷಗಳೆಲ್ಲರೂ ಸೇರಿ ಒಂದಾಗಿ ಚುನಾವಣೆ ಎದುರಿಸುತ್ತೇವೆ. ಮೈತ್ರಿಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಸಭೆಗಳು ಮುಗಿದಿವೆ. ನಾಲ್ಕನೇ ಮೀಟಿಂಗ್ ಉತ್ತರ ಭಾರತದಲ್ಲಿ ಮಾಡ್ತೇವೆ. ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ನಾನು ಕಮೆಂಟ್ ಮಾಡೋದಿಲ್ಲ. ಜೆಡಿಎಸ್ ನವರು ಮೊದಲಿನಿಂದಲೂ ಸೆಕ್ಯುಲರ್ ಅಂತ ಹೇಳಿಕೊಂಡವರು. ಈಗ ಯಾವ ವಿಷಯಗಳ ಮೇಲೆ ಒಂದಾಗಿದ್ದಾರೆ ಅವರೇ ಹೇಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯಗಿರಿ ಸ್ಟಾಲಿನ್ ಹೇಳಿಕೆ ಬಗ್ಗೆ ಖರ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ, ನಾನು ಧರ್ಮದಲ್ಲಿ ರಾಜಕೀಯ ಮಾಡಲಾರೆ.. ಆ ಬಗ್ಗೆ ಮಾತನಾಡಲಾರೆ. ಧರ್ಮದ ವಿಚಾರ ಬಂದಾಗ ಬಸವೇಶ್ವರ ತತ್ವ ಸರಿಯೋ, ನಾರಾಯಣಗುರು ಸರಿಯೋ, ಅಂಬೇಡ್ಕರ್ ಸಂವಿಧಾನ ಸರಿಯೋ ಅಂತ ಡಿಬೆಟ್ ಮಾಡೋಣ. ಧಾರ್ಮಿಕ ಸಂದರ್ಭ ಬಂದಾಗ ಆ ಬಗ್ಗೆ ಡಿಬೆಟ್ ಮಾಡೋಣ. ಈಗ ನಮ್ಮ ಗುರಿ ರಾಜಕೀಯವಾಗಿ ಒಂದಾಗಿ ಬಹುಮತ ಪಡೆಯೋದು. ನಾವು ಬೇರೆ ಬೇರೆ ಪಕ್ಷಗಳೊಂದಿಗೆ ರಾಜಕೀಯವಾಗಿ ಒಂದಾಗಿದ್ದೇವೆ. ಧಾರ್ಮಿಕತೆ ಬಗ್ಗೆ ಮಾತನಾಡಿದ್ದು ಅವರವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
Congress president Mallikarjun Kharge on Saturday said that he has heard that the JD(S)-BJP alliance is united. I have seen Deve Gowda and Modi holding hands. What kind of alliance is there between the two? How many seats will be allotted to whom? It may not be clear yet. But no one can hold us," he said.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 10:58 pm
Mangalore Correspondent
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm