ಬ್ರೇಕಿಂಗ್ ನ್ಯೂಸ್
11-09-23 10:45 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.11: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ರಾಜ್ಯ ಬಿಜೆಪಿ ನಾಯಕರನ್ನು ಕೇಂದ್ರ ವರಿಷ್ಠರು ಪೂರ್ತಿಯಾಗಿ ಸೈಡ್ ಲೈನ್ ಮಾಡಿದ್ದರು. ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡದೆ ರಾಜ್ಯ ಬಿಜೆಪಿ ತಂಡದ ಬಗ್ಗೆ ನಂಬಿಕೆಯನ್ನೇ ಕಳಕೊಂಡಂತಿದ್ದರು. ಈ ನಡುವೆ, ವಿಪಕ್ಷ ನಾಯಕ ಸ್ಥಾನಕ್ಕೆ ಜೆಡಿಎಸ್ಸಿನ ಎಚ್.ಡಿ.ಕುಮಾರಸ್ವಾಮಿ ಅವರನ್ನು ನೇಮಿಸುತ್ತಾರೆ ಎನ್ನುವ ವದಂತಿಯೂ ಹರಡಿತ್ತು. ಇವೆಲ್ಲ ಊಹಾಪೋಹ, ವದಂತಿಗಳ ಬಳಿಕ ಕೇಂದ್ರ ವರಿಷ್ಠರು ಕಡೆಗೂ ಒಂದು ನಿರ್ಧಾರಕ್ಕೆ ಬಂದಂತಿದ್ದಾರೆ.
ಇತ್ತೀಚೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ಫೋಟೋಗಳು ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಕರ್ನಾಟಕದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಾಗಲಿದೆ ಎನ್ನುವ ಸುದ್ದಿಗಳು ಬಂದಿದ್ದವು. ಅದಕ್ಕೆ ಪೂರಕ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಮಾತುಕತೆ ಫೈನಲ್ ಆಗಿದೆ ಎಂದು ಹೇಳಿಕೆ ನೀಡಿದ್ದರು. ಸೆ.10ರಂದು ಬೆಂಗಳೂರಿನಲ್ಲಿ ಪಕ್ಷದ ಸಭೆ ನಡೆಸಿರುವ ಎಚ್.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರೂ ಮೈತ್ರಿ ಮಾತುಕತೆ ಆಗಿರುವುದನ್ನು ದೃಢಪಡಿಸಿದ್ದಾರೆ. ಎಷ್ಟು ಸೀಟು ಅನ್ನುವುದರ ಬಗ್ಗೆಯಷ್ಟೇ ಚರ್ಚೆ ಬಾಕಿಯಿದೆ ಎಂದು ಹೇಳಿದ್ದರು.
ಈಗ ಬಂದಿರುವ ಮಾಹಿತಿ ಪ್ರಕಾರ, ಸೆ.15ರ ಬಳಿಕ ವಿಪಕ್ಷ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ವರಿಷ್ಠರು ಅಧಿಕೃತ ನೇಮಕ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್ ಪಕ್ಷವನ್ನು ಎನ್ ಡಿಎ ಮೈತ್ರಿಕೂಟಕ್ಕೆ ಸೆಳೆದುಕೊಂಡು ವಿಪಕ್ಷ ನಾಯಕ ಸ್ಥಾನವನ್ನೇ ಕುಮಾರಸ್ವಾಮಿಗೆ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸಿಗೆ ಠಕ್ಕರ್ ನೀಡಲು ಬಿಜೆಪಿ ಕೇಂದ್ರ ನಾಯಕರು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸನ್ನು ಹಿಡಿದಿಡಲು ಹಾಲಿ ರಾಜ್ಯ ಬಿಜೆಪಿ ನಾಯಕರಿಂದ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಮೋದಿ ಮತ್ತು ಅಮಿತ್ ಷಾ ಜೋಡಿ, ಇದಕ್ಕಾಗಿ ಕುಮಾರಸ್ವಾಮಿ ಅವರನ್ನೇ ಅಸ್ತ್ರವಾಗಿಸಲು ನಿರ್ಧರಿಸಿದ್ದಾರೆ. ಆಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರಬಲ ಅಸ್ತಿತ್ವ ಇರುವ ಕರ್ನಾಟಕದಲ್ಲಿ ಬಿಹಾರ ಮಾದರಿಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಗಟ್ಟಿಗೊಳಿಸಲು ಪ್ಲಾನ್ ಹಾಕಿದ್ದಾರೆ.
ಇದಲ್ಲದೆ, ರಾಜ್ಯದಲ್ಲಿ ಬಿಜೆಪಿ ಪಾಲಿನ ಏಕಮಾತ್ರ ಮಾಸ್ ಲೀಡರ್ ಎನಿಸಿರುವ ಬಿ.ಎಸ್.ಯಡಿಯೂರಪ್ಪ ಅವರಿಗೇ ಮತ್ತೆ ಮಣೆ ಹಾಕಲು ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಬದಿಗಿಟ್ಟಿದ್ದರಿಂದ ಪಕ್ಷದ ಮತಬ್ಯಾಂಕ್ ಆಗಿದ್ದ ಲಿಂಗಾಯತರು ದೂರ ಸರಿದಿರುವುದು, ಕಾಂಗ್ರೆಸಿನತ್ತ ವಾಲುತ್ತಿರುವುದನ್ನು ಅರಿತಿರುವ ಕೇಂದ್ರ ನಾಯಕರು, ಅದಕ್ಕಾಗಿ ವಾನಪ್ರಸ್ಥದತ್ತ ತೆರಳಿದ್ದ ಯಡಿಯೂರಪ್ಪ ಅವರನ್ನೇ ಕರೆಸಿ ರಥ ಸಾರಥ್ಯ ವಹಿಸಲು ನಿರ್ಧರಿಸಿದ್ದಾರೆ. ಹಾಗಂತ, ಅವರನ್ನು ಮತ್ತೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಬದಲು ಯಡಿಯೂರಪ್ಪ ಇಚ್ಛೆಯಂತೆ ಮಗ ವಿಜಯೇಂದ್ರ ಅವರನ್ನು ಆ ಸ್ಥಾನಕ್ಕೇರಿಸಿ ಟಾಸ್ಕ್ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಪ್ರಬಲ ಜಾತಿಗಳಾದ ಲಿಂಗಾಯತ, ಒಕ್ಕಲಿಗ ಕಾಂಬಿನೇಶನ್ ಮುಂದಿಟ್ಟು ಬಿಜೆಪಿ ಲೋಕಸಭೆ ಚುನಾವಣೆ ಎದುರಿಸಲು ನಿರ್ಧರಿಸಿದ್ದು, ಗ್ಯಾರಂಟಿ ಯೋಜನೆಯಿಂದ ಬೀಗುತ್ತಿರುವ ಕಾಂಗ್ರೆಸಿಗೆ ಠಕ್ಕರ್ ನೀಡುವ ವನ್ ಲೈನ್ ಅಜೆಂಡಾ ಮಾಡ್ಕೊಂಡಿದೆ.
ಜೆಡಿಎಸ್ಸಿಗೆ ನಾಲ್ಕು ಎಂಪಿ ಸೀಟು ಖಚಿತ
ಲೋಕಸಭೆ ಚುನಾವಣೆಯಲ್ಲಿ ತಮಗೆ ಆರು ಸ್ಥಾನ ನೀಡಬೇಕೆಂದು ಜೆಡಿಎಸ್ ಡಿಮ್ಯಾಂಡ್ ಇಟ್ಟಿದೆ. ಆದರೆ ಬಿಜೆಪಿ ವರಿಷ್ಠರು ನಾಲ್ಕು ಸ್ಥಾನ ಮಾತ್ರ ನೀಡಲು ಒಪ್ಪಿಗೆ ನೀಡಿದ್ದಾರೆ. ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟು ಕೊಡಲು ಮುಂದಾಗಿದ್ದಾರೆ. ಆದರೆ ಜೆಡಿಎಸ್ ತನ್ನ ಪ್ರಬಲ ನೆಲೆ ಹೊಂದಿರುವ ಮಂಡ್ಯ ಕ್ಷೇತ್ರ ನೀಡಲೇಬೇಕೆಂದು ಬೇಡಿಕೆ ಇಟ್ಟಿದೆ. ಮಂಡ್ಯದಲ್ಲಿ ಸಂಸದೆ ಸುಮಲತಾ ಈಗಾಗಲೇ ಬಿಜೆಪಿಯತ್ತ ವಾಲಿದ್ದು, ಮುಂದಿನ ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಈ ಸ್ಥಾನವನ್ನು ಜೆಡಿಎಸ್ಸಿಗೆ ಬಿಟ್ಟು ಕೊಟ್ಟಲ್ಲಿ ಸುಮಲತಾ ಸ್ಥಾನಕ್ಕೆ ಕುತ್ತು ಬರುವುದರಿಂದ ಮಂಡ್ಯವನ್ನು ಬಿಟ್ಟುಕೊಡಲು ಬಿಜೆಪಿ ತಯಾರಿಲ್ಲ. ಈ ಕುರಿತು ಮಾತುಕತೆ ಅಂತಿಮ ಆಗಿಲ್ಲ.
ಬಿಎಲ್ ಸಂತೋಷ್ ಟೀಮ್ ಸೈಡ್ ಲೈನ್ !
ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂಬ ವಿಶ್ಲೇಷಣೆ ಚುನಾವಣೆ ಬಳಿಕ ಕೇಳಿಬಂದಿತ್ತು. ಅಲ್ಲದೆ, ರಾಜ್ಯ ಬಿಜೆಪಿಯನ್ನು ಬಿಎಲ್ ಸಂತೋಷ್ ಅಂಡ್ ಟೀಮ್ ತಮ್ಮ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದನ್ನೂ ಯಡಿಯೂರಪ್ಪ ಬೆಂಬಲಿಗರು ಆರೋಪಿಸುತ್ತ ಬಂದಿದ್ದರು. ಸಂತೋಷ್ ಮಾತು ಕೇಳಿಯೇ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗಿತ್ತು. ಅಲ್ಲದೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಂತೋಷ್ ಹೇಳಿದ್ದೇ ಫೈನಲ್ ಅನ್ನುವಂತಿತ್ತು. ಕೇಂದ್ರ ನಾಯಕರು ಕೂಡ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ನಾಯಕರನ್ನೇ ನಂಬಿದ್ದರು. ಆದರೆ ಚುನಾವಣೆ ಫಲಿತಾಂಶ ಉಲ್ಟಾ ಪಲ್ಟಾ ಆಗಿದ್ದು ಕೇಂದ್ರ ನಾಯಕರನ್ನು ತೀವ್ರ ನಿರಾಸೆಗೊಳಿಸಿದ್ದಲ್ಲದೆ, ಸಂತೋಷ್ ಮತ್ತು ಟೀಮಿನ ಬಗ್ಗೆಯೇ ನಂಬಿಕೆ ಕಳಕೊಳ್ಳುವಂತಾಗಿತ್ತು. ಇದೇ ಕಾರಣಕ್ಕೆ, ಕರ್ನಾಟಕದಲ್ಲಿ ನಮ್ಮದ್ದೇ ಫೈನಲ್ ಅನ್ನುವ ಸಂದೇಶ ನೀಡುವುದಕ್ಕಾಗಿ ಲೋಕಸಭೆ ಚುನಾವಣೆಗೆ ಮೊದಲೇ ಹೊಸ ತಂಡವನ್ನು ಕಟ್ಟಲು ಅಮಿತ್ ಷಾ ಮುಂದಾಗಿದ್ದಾರೆ.
The state BJP leaders were completely sidelined by the central leadership after the party's humiliating defeat in the assembly elections. He seemed to have lost faith in the state BJP team by not appointing anyone to the post of leader of opposition and state president. Meanwhile, there were rumours that HD Kumaraswamy of the JD(S) would be appointed as the leader of the opposition.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm