Yatnal, Siddaramaiah, BJP: ಸಿದ್ದರಾಮಯ್ಯ ಅವರು ಜೀವಂತವಾಗಿ ಬಂದ್ರೂ ಬಿಜೆಪಿಗೆ ಸೇರಿಸಿಕೊಳ್ಳಕ್ಕೆ ನಾವು ತಯಾರಿಲ್ಲ ; ಡಿಕೆಶಿವಕುಮಾರ್ ಗೆ ಗಂಡಸ್ತನ ಇದ್ರೆ ಬಿ.ಕೆ ಹರಿಪ್ರಸಾದ್ ಮೇಲೆ ಕ್ರಮ ಕೈಗೊಳ್ಳಲಿ ನೋಡೋಣ !!

12-09-23 06:48 pm       HK News Desk   ಕರ್ನಾಟಕ

``ಸಿದ್ದರಾಮಯ್ಯ ಜೀವಂತವಾಗಿ ಬಂದರು ಬಿಜೆಪಿಗೆ ಸೇರಿಸಿಕೊಳ್ಳಲ್ಲ. ಸಿದ್ದರಾಮಯ್ಯ ಅಂಗಲಾಚಿದರೂ ಬಿಜೆಪಿಗೆ ತೆಗೆದುಕೊಳ್ಳಲು ನಾವು ತಯಾರಿಲ್ಲ. ನಮಗೆ ಅವರ ಅವಶ್ಯಕತೆ ಇಲ್ಲ. ಅವರ ಹೆಣ ತೆಗೆದುಕೊಳ್ಳೋದು ದೂರವಿರಲಿ''

ವಿಜಯಪುರ, ಸೆ.12: ``ಸಿದ್ದರಾಮಯ್ಯ ಜೀವಂತವಾಗಿ ಬಂದರು ಬಿಜೆಪಿಗೆ ಸೇರಿಸಿಕೊಳ್ಳಲ್ಲ. ಸಿದ್ದರಾಮಯ್ಯ ಅಂಗಲಾಚಿದರೂ ಬಿಜೆಪಿಗೆ ತೆಗೆದುಕೊಳ್ಳಲು ನಾವು ತಯಾರಿಲ್ಲ. ನಮಗೆ ಅವರ ಅವಶ್ಯಕತೆ ಇಲ್ಲ. ಅವರ ಹೆಣ ತೆಗೆದುಕೊಳ್ಳೋದು ದೂರವಿರಲಿ''

ಇದು ಬಿಜೆಪಿಗೆ ನನ್ನ ಹೆಣವೂ ಹೋಗಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಖಾರ ಪ್ರತಿಕ್ರಿಯೆ.

Even my corpse will not go to BJP, says Karnataka CM Siddaramaiah |  Bengaluru - Hindustan Times

ಇದೇ ವೇಳೆ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ದ ಗುಡುಗಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಯತ್ನಾಳ್, ತಾಕತ್ತಿದ್ರೆ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಉಚ್ಚಾಟನೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

Karnataka keen to strengthen ties with Netherlands, says Deputy CM DK  Shivakumar

ಬಿ ಕೆ ಹರಿಪ್ರಸಾದ ಕಾಂಗ್ರೆಸ್ ನ ಹಿರಿಯ ನಾಯಕರು. ಅವರನ್ನ ಧಮ್ಮ ಇದ್ರೆ, ತಾಕತ್ ಇದ್ರೆ, ಗಂಡಸ್ತನ ಇದ್ರೆ ಡಿಕೆ ಶಿವಕುಮಾರ್ ಉಚ್ಚಾಟನೆ ಮಾಡಲಿ. ನನಗೆ ಡಿಕೆಶಿ ಮಾತನಾಡಿದ್ದ, ಈಗ ಕ್ರಮ ಕೈಗೊಳ್ಳಲಿ ನೋಡೋಣ. ಅದು ಸಾಧ್ಯ ಆಗಲ್ಲ ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

D Sudhakar: ರಾಜ್ಯ ಸರ್ಕಾರದ ಹಾಲಿ ಸಚಿವ ಡಿ ಸುಧಾಕರ್​ ವಿರುದ್ಧ ಎಫ್ಐಆರ್; ಏನಿದು  ಪ್ರಕರಣ? | FIR against minister D Sudhakar in yelahanka police station  bengaluru sns– News18 Kannada

ಸುಧಾಕರ್ ರಾಜೀನಾಮೆ ಕೊಡಬೇಕು ;

ಇನ್ನು ಸಚಿವ ಡಿ ಸುಧಾಕರ ಮೇಲೆ FIR ವಿಚಾರವಾಗಿಯೂ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ದಲಿತರ ಮೇಲೆ ದೌರ್ಜನ್ಯವೆಸಗಿದ ಡಿ ಸುಧಾಕರ್ ರಾಜೀನಾಮೆ ಕೊಡಬೇಕು ಇಲ್ಲವೆ ವಜಾ ಮಾಡಿ ಎಂದು ಆಗ್ರಹಿಸಿದರು.

ಈ ಪ್ರಕರಣದಿಂದ ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಎಷ್ಟು ಗೌರವ ಇದೆ, ಕಾಳಜಿ ಇದೆ ಅನ್ನೋದು ಇದರಲ್ಲೇ ಗೊತ್ತಾಗುತ್ತೆ ಎಂದು ಲೇವಡಿ ಮಾಡಿದ್ರು. 

"Siddaramaiah will not join the BJP even if he comes alive. "We are not ready to take siddaramaiah to the BJP even if he pleads. We don't need them. Vijayapura MLA Basanagouda Patil Yatnal reacted sharply to Chief Minister Siddaramaiah's statement that his dead body will not go to the BJP.