ಬ್ರೇಕಿಂಗ್ ನ್ಯೂಸ್
13-09-23 11:24 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.13: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪದಲ್ಲಿ ಹಿಂದೂ ಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಬಂಧನ ಕುರಿತಂತೆ ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ವಾಗ್ದಾಳಿ ನಡೆಸಿದೆ. ''ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್ಗಳೂ ಮಾರಾಟವಾಗಿದೆಯೇ?'' ಎಂದು ಪ್ರಶ್ನೆ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಟ್ವಿಟರ್) ಖಾತೆಯಲ್ಲಿ ಟೀಕಿಸಿದ್ದು, ''ಭಾಷಣಕಾರ್ತಿಯು ಬಿಜೆಪಿಯ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಸುಮಾರು 7 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಕುಂದಾಪುರದ ಉದ್ಯಮಿಯೊಬ್ಬರು ದೂರಿದ್ದಾರೆ. ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್ಗಳೂ ಮಾರಾಟವಾಗಿದೆಯೇ? ಈ ವಂಚನೆ ಪ್ರಕರಣ ಹಲವು ತಿಂಗಳ ಹಿಂದೆಯೇ ಬೆಳಕಿಗೆ ಬಂದಿದ್ದರೂ ಬಿಜೆಪಿ ಪಕ್ಷ ದೂರು ಕೊಡದೇ ಸುಮ್ಮನಿರುವುದೇಕೆ? ಈ 7 ಕೋಟಿ ವಂಚನೆಯಲ್ಲಿ ಬಿಜೆಪಿಗರ ಪಾಲೆಷ್ಟು? RSS ನ ಪಾಲೆಷ್ಟು? ಈ ಮಹಾ ವಂಚನೆಯ ಬಗ್ಗೆ ಕರ್ನಾಟಕ ಬಿಜೆಪಿ ಮೌನ ವಹಿಸಿರುವುದೇಕೆ?'' ಎಂದು ಪ್ರಶ್ನೆ ಮಾಡಿದೆ.
ಬಿಜೆಪಿ ಹಾಗೂ ಅದರ ಬಾಡಿಗೆ ಭಾಷಣಕಾರರ ಅಸಲಿ ಬಂಡವಾಳ ಬಯಲಾಗುತ್ತಿದೆ. ಹಿಂದುತ್ವದ ಹೆಸರಲ್ಲಿ ಹಿಂದುಗಳನ್ನೇ ವಂಚಿಸುವುದು ಬಿಜೆಪಿ ಹಾಗೂ ಅದರ ಪರಿವಾರದ ಹಳೇ ಚಾಳಿ. ವಂಚನೆ ಪ್ರಕರಣದಲ್ಲಿ ಬಂಧನವಾದ ಚೈನ್ ಚೈತ್ರ ಎಂಬಾಕೆಯ ಪ್ರಕರಣದಲ್ಲಿ ಬಿಜೆಪಿ ಮೌನ ವಹಿಸಿದ್ದೇಕೆ ? "ಟಿಕೆಟ್ ಮಾರಾಟ" ಬೆಳಕಿಗೆ ಬಂದಿರುವಾಗ ಬಿಜೆಪಿಯ ಸ್ಪಷ್ಟನೆ ಏನಿರಬಹುದು? ಆಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಿದ್ಧ ವರಸೆ ಪ್ರದರ್ಶಿಸಬಹುದೇ? "ಆಕೆ ಬಿಜೆಪಿಯ ಸದಸ್ಯೆ ಅಲ್ಲ" ಎಂದು ಹೇಳಿಕೆ ಹೊರಡಿಸಬಹುದೇ?'' ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಪ್ರಾಮಾಣಿಕವಾಗಿದ್ದರೆ ಪಕ್ಷದ ಹೆಸರಲ್ಲಿ ವಂಚಿಸಿದ ಆಕೆಯ ವಿರುದ್ದ ಈ ಹಿಂದೆಯೇ ದೂರು ನೀಡಲಿಲ್ಲ ಏಕೆ? ಬಿಜೆಪಿ ತನ್ನ ಆಡಳಿತದಲ್ಲಿ ಕುಮಾರಕೃಪಾ ಅತಿಥಿಗೃಹವನ್ನು ಭ್ರಷ್ಟರು, ಲಂಪಟರು, ದಗಾಕೋರರ ಅಡ್ಡೆಯಾಗಿ ಬದಲಾಯಿಸಿತ್ತೇ? ಸ್ಯಾಂಟ್ರೋ ರವಿಯೂ ವಂಚನೆಯ ಕೆಲಸಗಳಿಗೆ ಕುಮಾರಕೃಪಾವನ್ನೇ ಕಾಯಂ ಕಾರಸ್ಥಾನ ಮಾಡಿಕೊಂಡಿದ್ದ, ಚೈತ್ರ ಕೂಡ ಟಿಕೆಟ್ ವಂಚನೆಗೆ ಕುಮಾರಕೃಪಾವನ್ನೇ ಆಶ್ರಯಿಸಿದ್ದಳು. ಕುಮಾರಕೃಪಾ ಅತಿಥಿಗೃಹವನ್ನು ಥರ್ಡ್ ಗ್ರೇಡ್ ಲಾಡ್ಜ್ ನಂತೆ ವ್ಯವಸ್ಥೆ ಮಾಡಿಕೊಡುವುದರ ಹಿಂದೆ ಯಾರ ಕೃಪೆ ಇತ್ತು, ಬಿಜೆಪಿ'' ಎಂದು ಪ್ರಶ್ನಿಸಿದೆ.
ಹಿಂದೆ ಗೃಹಮಂತ್ರಿಯಾಗಿದ್ದಾಗ ಪಿಎಸ್ಐ ಹಗರಣದ ಪ್ರಮುಖ ಆರೋಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮಾಜಿ ಗೃಹ ಸಚಿವರು ಈಗ ವಂಚನೆ ಆರೋಪಿಯ ರಕ್ಷಣೆಗೆ ಬ್ಯಾಟ್ ಬೀಸುತ್ತಿದ್ದಾರೆ. ಆರಗ ಜ್ಞಾನೇಂದ್ರ ಅವರೇ, ಆಕೆ ವಂಚಿಸಿದ್ದು ನಿಮ್ಮದೇ ಪಕ್ಷದಲ್ಲಿರುವ ಹಿಂದೂಪರ ಉದ್ಯಮಿಗೆ, ಆಕೆಯ ವಿರುದ್ದ ದೂರು ನೀಡಿದ್ದು ಅದೇ ನಿಮ್ಮದೇ ಪಕ್ಷದ ಮುಖಂಡ, ಆದರೂ ಆಕೆಯ ಪರ ನಿಂತಿದ್ದೀರಿ ಅಂದರೆ 7 ಕೋಟಿಯಲ್ಲಿ ನಿಮಗೂ ಪಾಲಿದೆಯೇ? ಬಿಜೆಪಿ ಅಂದರೆ ಭ್ರಷ್ಟರು, ವಂಚಕರಿಗೆ ಬಲು ಪ್ರೀತಿ ಏಕೆ?'' ಎಂದಿದೆ.
ಮಾಜಿ ಗೃಹ ಸಚಿವರು ಆರೋಪಿ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ ಆರಗ ಜ್ಞಾನೇಂದ್ರ ಅವರೇ'. ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರ ಜ್ಞಾನೇಂದ್ರರಿಗೆ ಪರಮಾಪ್ತರು. ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ? ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ?'' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿ ಪಕ್ಷದಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಟಿಕೆಟ್ ವಂಚನೆಯ ಪ್ರಕರಣದಲ್ಲಿ ಬಿಜೆಪಿಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಪ್ರಮುಖ ಆರೋಪಿ. ಈತನ ವಂಚನೆಯ ಬಗ್ಗೆ ಒಂದು ತಿಂಗಳ ಹಿಂದೆಯೇ ಪಕ್ಷಕ್ಕೆ ದೂರು ಬಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಏಕೆ ಬಿಜೆಪಿ? ವಂಚಕರಿಗೆ, ಭ್ರಷ್ಟರಿಗೆ ಬಿಜೆಪಿ ತವರು ಮನೆಯಾಗಿದೆಯೇ? ಬಿಜೆಪಿಯಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 - 80 ಕೋಟಿ, MLA ಟಿಕೆಟ್ ಗೆ 7 ಕೋಟಿ!! ಇದೆಲ್ಲವೂ ಬಿಜೆಪಿಯವರಿಂದಲೇ ಬಯಲಾದ ಸತ್ಯಗಳು. ಯತ್ನಾಳ್ ಆಣೆಗೂ ಇದನ್ನು ನಾವು ಹೇಳಿದ್ದಲ್ಲ! ಈ ಮಾರಾಟದ ಆಟದಲ್ಲಿ “ವಿರೋಧ ಪಕ್ಷದ ನಾಯಕ”ನ ಹುದ್ದೆಗೆ ಇನ್ನೂ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲವೇ ಬಿಜೆಪಿ? ಎಂದು ಕಾಂಗ್ರೆಸ್ ಮೊನಚು ಮಾತುಗಳಿಂದ ಟೀಕಿಸಿದೆ.
ಉಗ್ರ ಭಾಷಣಕಾರ್ತಿ ಬಿಜೆಪಿಯ MLA ಟಿಕೆಟ್ ಕೊಡಿಸುವುದಾಗಿ ಸುಮಾರು 7 ಕೋಟಿ ಪಡೆದು ವಂಚಿಸಿದ್ದಾರೆಂದು ಕುಂದಾಪುರದ ಉದ್ಯಮಿಯೊಬ್ಬರು ದೂರಿದ್ದಾರೆ.
— Karnataka Congress (@INCKarnataka) September 13, 2023
ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್ ಗಳೂ ಮಾರಾಟವಾಗಿದೆಯೇ?
ಈ ವಂಚನೆ ಪ್ರಕರಣ ಹಲವು ತಿಂಗಳ ಹಿಂದೆಯೇ ಬೆಳಕಿಗೆ ಬಂದಿದ್ದರೂ ಬಿಜೆಪಿ ಪಕ್ಷ ದೂರು ಕೊಡದೆ…
ಮಾಜಿ ಗೃಹಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ?
— Karnataka Congress (@INCKarnataka) September 13, 2023
ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ @JnanendraAraga ಅವರೇ?
ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ
ಸ್ಯಾಂಟ್ರೋ ರವಿ, ಚೈನ್ ಚೈತ್ರ ಜ್ಞಾನೇಂದ್ರರಿಗೆ ಪರಮಾಪ್ತರು.
ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ… pic.twitter.com/BnyxRkkmz8
ಬಿಜೆಪಿ ತನ್ನ ಆಡಳಿತದಲ್ಲಿ ಕುಮಾರಕೃಪಾ ಅತಿಥಿಗೃಹವನ್ನು ಭ್ರಷ್ಟರು, ಲಂಪಟರು, ದಗಾಕೋರರ ಅಡ್ಡೆಯಾಗಿ ಬದಲಾಯಿಸಿತ್ತೇ?
— Karnataka Congress (@INCKarnataka) September 13, 2023
ಸ್ಯಾಂಟ್ರೋ ರವಿಯೂ ವಂಚನೆಯ ಕೆಲಸಗಳಿಗೆ ಕುಮಾರಕೃಪಾವನ್ನೇ ಕಾಯಂ ಕಾರ್ಯಸ್ಥಾನ ಮಾಡಿಕೊಂಡಿದ್ದ,
ಚೈನ್ ಚೈತ್ರ ಕೂಡ ಟಿಕೆಟ್ ವಂಚನೆಗೆ ಕುಮಾರಕೃಪಾವನ್ನೇ ಆಶ್ರಯಿಸಿದ್ದಳು.
ಕುಮಾರಕೃಪಾ ಅತಿಥಿಗೃಹವನ್ನು ಥರ್ಡ್ ಗ್ರೇಡ್…
ಬಿಜೆಪಿ ಹಾಗೂ ಅದರ ಬಾಡಿಗೆ ಭಾಷಣಕಾರರ ಅಸಲಿ ಬಂಡವಾಳ ಬಯಲಾಗುತ್ತಿದೆ.
— Karnataka Congress (@INCKarnataka) September 13, 2023
ಹಿಂದುತ್ವದ ಹೆಸರಲ್ಲಿ ಹಿಂದುಗಳನ್ನೇ ವಂಚಿಸುವುದು ಬಿಜೆಪಿ ಹಾಗೂ ಅದರ ಪರಿವಾರದ ಹಳೆ ಚಾಳಿ.
ವಂಚನೆ ಪ್ರಕರಣದಲ್ಲಿ ಬಂಧನವಾದ ಚೈನ್ ಚೈತ್ರ ಎಂಬಾಕೆಯ ಪ್ರಕರಣದಲ್ಲಿ ಬಿಜೆಪಿ ಮೌನವಹಿಸಿದೆ.
"ಟಿಕೆಟ್ ಮಾರಾಟ" ಬೆಳಕಿಗೆ ಬಂದಿರುವಾಗ @BJP4Karnataka ಯ ಸ್ಪಷ್ಟನೆ…
A businessman from Kundapur has alleged that the bjp MLA had cheated him of rs 7 crore by promising him a ticket. The Congress has asked if tickets have been sold just as the CM's post and ministerial posts have been sold in the BJP.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
13-02-25 10:08 am
Mangalore Correspondent
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm