Chaitra Kundapur, Rajashekarananda Swamiji, Vajradehi Math: ಚೈತ್ರಾ ಕೇಸ್ ಮತ್ತೊಂದು ಲೆಟರ್ ಬಹಿರಂಗ ; ರಾಜಶೇಖರಾನಂದ ಸ್ವಾಮೀಜಿ ಹೆಸರು ಉಲ್ಲೇಖ, ತನಗೇನೂ ಸಂಬಂಧ ಇಲ್ಲವೆಂದು ಸ್ವಾಮೀಜಿ ಸ್ಪಷ್ಟನೆ

18-09-23 01:32 pm       Bangalore Correspondent   ಕರ್ನಾಟಕ

ಬಿಜೆಪಿ ಟಿಕೆಟ್ ವಿಚಾರದಲ್ಲಿ ಡೀಲ್ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.

ಬೆಂಗಳೂರು, ಸೆ.18: ಬಿಜೆಪಿ ಟಿಕೆಟ್ ವಿಚಾರದಲ್ಲಿ ಡೀಲ್ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ದಕ್ಷಿಣ ವಲಯ ಆದಾಯ ತೆರಿಗೆ ಇಲಾಖೆಯ ಆಯುಕ್ತರಿಗೆ ಎಂದು ಬರೆದಿರುವ ಪತ್ರ ಹೊರಬಂದಿದ್ದು, ಅದರಲ್ಲಿ ಗೋವಿಂದ ಬಾಬು ಪೂಜಾರಿಯ ಹಣಕಾಸು ಹಿನ್ನೆಲೆಯ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಐದು ಕೋಟಿ ದುಡ್ಡಿನ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕು ಎಂದಿದ್ದಾರೆ.

ಈ ಪತ್ರ ಆದಾಯ ತೆರಿಗೆ ಇಲಾಖೆಗೆ ತಲುಪಿದ್ಯಾ ಅನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ರೀತಿ ಬರೆದಿಟ್ಟಿರುವ ಪತ್ರ ಈಗ ವೈರಲ್ ಆಗಿದ್ದು ಹೇಗೆ ಎನ್ನುವ ಮಾಹಿತಿಯೂ ಇಲ್ಲ. ಬೈಂದೂರು ಟಿಕೆಟ್ ವಿಚಾರದಲ್ಲಿ ತನ್ನೊಂದಿಗೆ ಸಂಪರ್ಕ ಮಾಡಿರುವ ಕೆಲವು ವ್ಯಕ್ತಿಗಳ ಬಗ್ಗೆ ಆ ಪತ್ರದಲ್ಲಿ ಉಲ್ಲೇಖ ಆಗಿದೆ. ಅಲ್ಲದೆ, ತಾನೊಬ್ಬ ಮೂಲತಃ ಪತ್ರಕರ್ತೆ ಆಗಿರುವುದರಿಂದ ಟಿಕೆಟ್ ವಿಚಾರದಲ್ಲಿ ಡೀಲ್ ಆಗಿರುವ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಗೋವಿಂದ ಬಾಬು ಪೂಜಾರಿ ಮತ್ತು ಅವರ ಆಪ್ತರ ಜೊತೆಗೆ ಸಂಪರ್ಕದಲ್ಲಿದ್ದೆ ಎಂದು ಆ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಬಂಧನ ಆಗುವುದಕ್ಕೂ ಮುನ್ನ ರೆಡಿ ಮಾಡಿಕೊಂಡಿರುವ ಪತ್ರದಂತೆ ಇದು ಕಂಡುಬರುತ್ತಿದ್ದು, ಈ ಪತ್ರದ ಬಗ್ಗೆಯೇ ಸಂಶಯ ಕಂಡುಬರುತ್ತಿದೆ. ಚೈತ್ರಾ ತಾನು ಹಣ ಪಡೆದು ಪ್ರಕರಣದಿಂದ ಪಾರಾಗುವುದಕ್ಕಾಗಿಯೇ ಈ ರೀತಿ ಪತ್ರ ಬರೆದಿಟ್ಟಿರುವ ಸಂಶಯ ಬರುತ್ತಿದೆ. ಅಲ್ಲದೆ, ಟಿಕೆಟ್ ವಿಚಾರದಲ್ಲಿ ಗೋವಿಂದ ಪೂಜಾರಿ ಜೊತೆಗೆ ಸಂಪರ್ಕದಲ್ಲಿದ್ದೆ, ಅವರು ಟಿಕೆಟ್ ಪಡೆಯಲು ವಿವಿಧ ವ್ಯಕ್ತಿಗಳಿಗೆ ಐದು ಕೋಟಿ ಹಣ ನೀಡಿದ್ದ ಬಗ್ಗೆ ಹೇಳಿದ್ದರು. ನಾನು ಪೊಲೀಸ್ ದೂರು ನೀಡಲು ಸಲಹೆ ಮಾಡಿದ್ದೆ. ಈಗ ಅವರೇ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗುತ್ತಿದೆ. ಯಾಕೆ ಇವರು ಪೊಲೀಸ್ ದೂರು ನೀಡಿಲ್ಲ. ಹಣ ಕಳೆದುಕೊಂಡಿದ್ದರೆ ದೂರು ನೀಡಬೇಕಿತ್ತು ಎಂಬಿತ್ಯಾದಿ ವಿಚಾರಗಳು ಪತ್ರದಲ್ಲಿವೆ. ಅಲ್ಲದೆ, ಪತ್ರದಲ್ಲಿ ಒಂದು ಕಡೆ ರಾಜಶೇಖರಾನಂದ ಸ್ವಾಮೀಜಿ ನನಗೆ ಫೋನ್ ಮಾಡಿದ್ದರು ಎನ್ನುವ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಮೇಲ್ನೋಟಕ್ಕೆ ಈ ಪತ್ರವೇ ಮತ್ತೊಂದು ಬೃಹನ್ನಾಟಕ ಎನ್ನುವಂತೆ ಕಂಡುಬರುತ್ತಿದೆ.

mangalore vajradehi swamiji receives threat calls for interfering in love  jihad case of asiya | Love Jihad: ಬಲಿಪಶು ಆಸಿಯಾ ಮತ್ತೆ ಬೀದಿಗೆ ; ನ್ಯಾಯ ಕೇಳಿದ  ವಜ್ರದೇಹಿ ಸ್ವಾಮೀಜಿಗೆ ಜೀವ ಬೆದರಿಕೆ ! | Headline ...

ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಸ್ವಾಮೀಜಿ

ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ತನ್ನ ಹೆಸರು ಉಲ್ಲೇಖ ಆಗಿರುವ ಬಗ್ಗೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ತನಗೂ ಆಕೆಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಕಳೆದ ಜುಲೈ ತಿಂಗಳಲ್ಲಿ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿ, ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ಹಣ ಪಡೆದ ಬಗ್ಗೆ ಪ್ರಶ್ನೆ ಮಾಡಿದ್ದರು. ನನಗೇನೂ ಗೊತ್ತಿಲ್ಲ ಎಂದು ಹೇಳಿ ಸಿಟ್ಟಾಗಿದ್ದೆ. ಬಳಿಕ ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರನ್ನು ಅವರೇ ಹೇಳಿದ್ದರು. ನಾವು ವಿಶ್ವ ಹಿಂದು ಪರಿಷತ್ತಿನಲ್ಲಿ ಇರುವುದರಿಂದ ಸಂಘಟನೆಗೆ ಕೆಟ್ಟ ಹೆಸರು ಬರಬಾರದೆಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರಿಗೂ ತಿಳಿಸಿದ್ದೆ. ಅಲ್ಲದೆ, ಅಭಿನವ ಹಾಲಶ್ರೀ, ಚಕ್ರವರ್ತಿ ಸೂಲಿಬೆಲೆ ಜೊತೆಗೆ ಗುರುತಿಸಿದ್ದರಿಂದ ಸೂಲಿಬೆಲೆಗೂ ವಿಷಯ ತಿಳಿಸಿದ್ದೆ.

ಆನಂತರ, ಚೈತ್ರಾಳಲ್ಲಿ ಸತ್ಯ ಹೇಳುವಂತೆ ಫೋನ್ ಮಾಡಿದ್ದೆ. ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ನಿಮ್ಮ ಬಳಿ ಬಂದಾಗ ಮೂರು ಕೋಟಿ ಆಯ್ತಾ.. ಅದಿನ್ನು ನಾಲ್ಕು- ಐದು ಕೋಟಿ ಆಗಬಹುದೆಂದು ಹೇಳಿದ್ದಳು. ತನಗೇನೂ ಗೊತ್ತಿಲ್ಲ, ದೂರು ಕೊಡುತ್ತೇನೆ ಎಂದಿದ್ದಳು. ಆಕೆಯ ಜೊತೆಗೆ ಸಂಪರ್ಕ ಇದ್ದಿದ್ದು ಹೌದು. ಹಾಗೆಂದು ಆಕೆಯ ಯಾವುದೇ ವ್ಯವಹಾರದ ಬಗ್ಗೆ ಗೊತ್ತಿಲ್ಲ. ಈಗ ನನ್ನ ಹೆಸರು ಬಂದಿರುವ ಬಗ್ಗೆ ಬೇಸರ ಇದೆ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

Chaitra Kundapur fraud case, letter to Rajashekarananda Swamiji of Vajradehi Math goes viral, clarification.