ಬ್ರೇಕಿಂಗ್ ನ್ಯೂಸ್
21-09-23 08:42 pm HK News Desk ಕರ್ನಾಟಕ
ಹುಬ್ಬಳ್ಳಿ, ಸೆ.21: 2024ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ. ಆನಂತರ ಪಾಕಿಸ್ತಾನದ ಲಾಹೋರಿನಲ್ಲಿ ಗಣಪತಿ ಕೂರಿಸ್ತೀವಿ. ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ವಿವಾದದ ನಡುವೆ ಪೂಜಿಸಲ್ಪಟ್ಟ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಯತ್ನಾಳ್ ಆವೇಶದ ಭಾಷಣ ಮಾಡಿದ್ದಾರೆ. ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದೀವಿ. ಇದೇ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ. ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನ ಇಲ್ಲಾ, ಪಾಕಿಸ್ತಾನ್ ಜಿಂದಾಬಾದ್ ಅಂತಾರೆ. ಮೋದಿಯವರು ಇನ್ನೊಮ್ಮೆ ಪ್ರಧಾನಿ ಆಗ್ತಾರೆ, ಪಾಕಿಸ್ತಾನ ದಾಟಿ ಅಪ್ಘಾನಿಸ್ತಾನ್ ಬಾರ್ಡರ್ ವರೆಗೆ ಹೋಗ್ತೀವಿ.
ಹುಬ್ಬಳ್ಳಿಯ ಈ ಮೈದಾನಕ್ಕೆ ಈದ್ಗಾ ಮೈದಾನ ಅಂದ್ರೆ ಸಾಬರಿಗೆ ಹುಟ್ಟಿದಂತೆ. ಈ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಅನ್ಬೇಕು ಎಂದು ಹೇಳಿದ ಯತ್ನಾಳ್, ಡಿಎಂಕೆ ಮುಖಂಡ ಹೇಳ್ತಾನ, ಸನಾತನ ಧರ್ಮಕ್ಕೆ ರೋಗ ಅಂತ. ಸನಾತನ ಧರ್ಮವನ್ನು ವಿರೋಧಿಸುವವರೆಲ್ಲರಿಗೆ ಏಡ್ಸ್ ಬರುತ್ತೆ ಅಂತೀನಿ. ನರೇಂದ್ರ ಮೋದಿಯವರನ್ನು ವಿರೋಧಿಸುವವರೆಲ್ಲಾ ದೇಶದ್ರೋಹಿಗಳು. ಮೋದಿಯವರು ಪ್ರಧಾನಿಯಾಗಿರುವ ಕಾರಣ ದೇಶ ಶಾಂತವಾಗಿದೆ. ವಿಘ್ನಗಳು ನಾಶವಾಗಲಿ ಅಂತಾನೇ ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದಲ್ಲಿ ಮೋದಿ ಅಧಿವೇಶನ ಮಾಡ್ತಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿಯೂ ಅಲ್ಲ. ಅಂಜುಮನ್ ಆಸ್ತಿನೂ ಅಲ್ಲ, ಪಾಕಿಸ್ತಾನದ ಆಸ್ತಿಯೂ ಅಲ್ಲ. ರಾಜ್ಯದ ವಕ್ಫ್ ಆಸ್ತಿ ಸರ್ಕಾರದ ವಶಕ್ಕೆ ಪಡೆಯಲು ಹೋರಾಡುತ್ತಿದ್ದೇವೆ.
ಶೆಟ್ಟರ್ ಹೆಸರೆತ್ತದೆ ಹಿಂದಿನಿಂದ ಕುತಂತ್ರ ನಡೆಸುತ್ತಿದ್ದಾರೆ ಎಂದು ಪರೋಕ್ಷ ವಾಗ್ದಾಳಿ ನಡೆಸಿದ ಅವರು, ನೀವು ಎಂಪಿ ಎಲೆಕ್ಷನ್‌ಗೆ ನಿಲ್ಲಿ ನೋಡಿ, ಜನ ಲಗಾ ಹೊಡಿಸ್ತಾರೆ. ಈದ್ಗಾ ಮೈದಾನದಲ್ಲಿ ಶೋಕಾಚರಣೆ ಮಾಡ್ತಾರಂತೆ. ನೀವು ಶೋಕಾಚರಣೆ ಮಾಡಿದ್ರೆ ಇದೇ ಮೈದಾನದಲ್ಲಿ ನಾವು ಹನುಮಾನ್ ಚಾಲಿಸಾ ಪಠಣ ಮಾಡ್ತೀವಿ ಎಂದು ತೆರೆದ ವಾಹನದಲ್ಲೇ ಹನುಮಾನ್ ಚಾಲೀಸಾ ಪಠಣ ಮಾಡಿ ಯತ್ನಾಳ್ ತಿರುಗೇಟು ನೀಡಿದ್ದಾರೆ.
Prime Minister Narendra Modi will once again become the Prime Minister in 21. Then we will make to sit Ganapati in Lahore, Pakistan. Bjp MLA Basanagouda Patil Yatnal said that the permission of these children is required to hoist the national flag in our country.
16-07-25 07:05 pm
Bangalore Correspondent
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 04:37 pm
HK News Desk
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm