Chaitra Kundapura fraud case, Congress Lakshman: ಚೈತ್ರಾ ಡೀಲ್ ಪ್ರಕರಣ ; ಎರಡು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ಆಸ್ತಿ ಜಪ್ತಿ, 185 ಕೋಟಿ ಹಗರಣ ಎಂದಿದ್ದ ಕೆಪಿಸಿಸಿ ವಕ್ತಾರಗೆ ಸಿಸಿಬಿ ನೋಟಿಸ್, ದೊಡ್ಡವರ ಹೆಸರು ನೀಡ್ತಾರಾ ಲಕ್ಷ್ಮಣ್ !

21-09-23 08:49 pm       Bangalore Correspondent   ಕರ್ನಾಟಕ

ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮತ್ತು ಇತರ ಆರೋಪಿಗಳಿಂದ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಇತರ ಆಸ್ತಿ ಹಾಗೂ 76 ಲಕ್ಷ ರೂಪಾಯಿ ನಗದು ಮೊತ್ತವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ಸೆ.21: ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮತ್ತು ಇತರ ಆರೋಪಿಗಳಿಂದ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಇತರ ಆಸ್ತಿ ಹಾಗೂ 76 ಲಕ್ಷ ರೂಪಾಯಿ ನಗದು ಮೊತ್ತವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ. ಹಾಲಶ್ರೀ ಮಠದಲ್ಲಿ 56 ಲಕ್ಷ ರೂ. ನಗದು ಪತ್ತೆಯಾಗಿದೆ. ಆನಂತರ, ಸ್ವಾಮೀಜಿಗೆ ಸಂಬಂಧಪಟ್ಟ ವ್ಯಕ್ತಿಯ ಬಳಿಯಲ್ಲಿದ್ದ 20 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಈವರೆಗೆ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸೇರಿದಂತೆ ನಾಲ್ಕು ಮಂದಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹಿರೇಹಡಗಲಿ ಮಠದ ಬಳಿಯೇ ಸ್ವಾಮೀಜಿ ಕೃಷಿ ಭೂಮಿ ಖರೀದಿಸಿದ್ದು ಅದಕ್ಕಾಗಿ 20 ಲಕ್ಷ ಅಡ್ವಾನ್ಸ್ ನೀಡಿದ್ದರು. ಆ ಮೊತ್ತವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲ ಇತ್ತೀಚೆಗೆ ಐಷಾರಾಮಿ ಜೀವನ ನಡೆಸುತ್ತಿರುವುದು ಆಪ್ತರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಅವರ ಖಾತೆಗಳನ್ನು ಜಪ್ತಿ ಮಾಡಿದ್ದು ಬೇರೆಯವರ ಹೆಸರಲ್ಲಿ ಬೇನಾಮಿ ಆಸ್ತಿ ಖರೀದಿಸಿದ್ದರೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಚೈತ್ರಾ ಕುಂದಾಪುರ ವಂಚನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣಗೆ ನೋಟಿಸ್ ನೀಡಲು ಮುಂದಾದ  ಸಿಸಿಬಿ - Chaitra kundapur fraud ccb to issue notice to kpcc spokesperson m  lakshman ggs Kannada News

Even my corpse will not go to BJP, says Karnataka CM Siddaramaiah |  Bengaluru - Hindustan Times

ಇತ್ತೀಚೆಗೆ ಇದೇ ಪ್ರಕರಣದ ಬಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಒಟ್ಟು 185 ಕೋಟಿ ರೂಪಾಯಿ ಅವ್ಯವಹಾರ ಆಗಿದ್ದು, ಇದರಲ್ಲಿ ಬಿಜೆಪಿಯ ದೊಡ್ಡ ದೊಡ್ಡವರು ಶಾಮೀಲಾಗಿದ್ದಾರೆ. ಚೈತ್ರಾ ಕುಂದಾಪುರ ಮತ್ತು ತಂಡ ವ್ಯವಸ್ಥಿತವಾಗಿ ಹಲವರನ್ನು ಮೋಸಕ್ಕೆ ಬೀಳಿಸಿದೆ. 17 ಮಂದಿ ಮೋಸಕ್ಕೆ ಒಳಗಾಗಿದ್ದರೆ, ಇವರ ತಂಡದಿಂದ ಹಣ ಕೊಟ್ಟಿದ್ದ 23 ಮಂದಿಗೆ ಟಿಕೆಟ್ ಸಿಕ್ಕಿತ್ತು ಎಂದಿದ್ದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಬಳಿಗೆ ನಿಯೋಗ ತೆರಳಿ ಈ ಹಗರಣದ ಬಗ್ಗೆ ಪ್ರತ್ಯೇಕ ತಂಡದಿಂದ ತನಿಖೆ ನಡೆಸುವಂತೆ ಕೋರುತ್ತೇವೆ ಎಂದಿದ್ದರು. ಡೀಲ್ ಪ್ರಕರಣದಲ್ಲಿ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಸೂಚಿಸಿ ಸಿಸಿಬಿ ಪೊಲೀಸರು ಈಗ ನೋಟೀಸ್ ಜಾರಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 72 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಕೊನೆಯ ಕ್ಷಣದಲ್ಲಿ ಇವೆಲ್ಲ ಬದಲಾವಣೆ ಆಗಿದ್ದು, ಇದರಿಂದಾಗಿಯೇ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಟಿಕೆಟ್ ಡೀಲ್ ಪ್ರಕರಣ ಹೊರ ಬಿದ್ದಿರುವುದರಿಂದ ಬಿಜೆಪಿ ನಾಯಕರು ತೀವ್ರ ಮುಜುಗರ ಅನುಭವಿಸಿದ್ದಾರೆ.

Chaitra Kundapura fraud case, two crores worth gold seized, Lakshman gets notice by CCB for alleging 185 crore fraud