ಬ್ರೇಕಿಂಗ್ ನ್ಯೂಸ್
21-09-23 10:38 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.21: ಬೈಂದೂರು ಬಿಜೆಪಿ ಟಿಕೆಟ್ ಹೆಸರಲ್ಲಿ ಉದ್ಯಮಿಯಿಂದ ಹಣ ಪಡೆದು ವಂಚಿಸಿರುವ ಪ್ರಕರಣದಲ್ಲಿ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ. ಚೈತ್ರಾ ತಪ್ಪೊಪ್ಪಿಗೆಯಿಂದ ಪ್ರಕರಣಕ್ಕೆ ಅತಿದೊಡ್ಡ ತಿರುವು ಸಿಕ್ಕಿದೆ.
ಪ್ರಕರಣದಲ್ಲಿ ಬಂಧನ ಆದಂದಿನಿಂದಲೂ ಚೈತ್ರಾ ಡ್ರಾಮಾ ಮಾಡ್ತಿದ್ದರು. ಊಟ ಬಿಟ್ಟು ಆಸ್ಪತ್ರೆಯನ್ನೂ ಸೇರಿದ್ದರು. ಹಾಲಶ್ರೀ ಸಿಗಲಿ ದೊಡ್ಡ ದೊಡ್ಡವರ ಹೆಸರೇ ಹೊರಬರುತ್ತೆ ಎಂದು ಹೇಳಿ ಅಚ್ಚರಿ ಸೃಷ್ಟಿಸಿದ್ದರು. ಉದ್ಯಮಿ ಇಂದಿರಾ ಕ್ಯಾಂಟೀನ್ ಹಣಕ್ಕಾಗಿ ತನ್ನನ್ನು ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ, ಹಾಲಶ್ರೀ ಸ್ವಾಮೀಜಿ ಕಡೆ ಬೊಟ್ಟು ಮಾಡ್ತಿದ್ದ ಚೈತ್ರಾ, ಸಿಸಿಬಿ ಮುಂದೆಯೂ ಇದನ್ನೇ ಹೇಳಿದ್ದರು. ಯಾಕಂದ್ರೆ, ಹಾಲಶ್ರೀ ಎಸ್ಕೇಪ್ ಆಗಿದ್ದಾರೆ. ಅವರು ಸಿಗಲ್ಲ ಅಂತಾ ಚೈತ್ರಾ ಅಂದುಕೊಂಡಿದ್ದರು. ಆದ್ರೆ, ಯಾವಾಗ ಹಾಲಶ್ರೀ ಒಡಿಶಾ ಕಟಕ್‌ನಲ್ಲಿ ಬಂಧನಕ್ಕೊಳಗಾದರೋ ಇತ್ತ ಚೈತ್ರಾ ನಡುಗಿ ಹೋಗಿದ್ದರು. ಇದೀಗ ಹಾಲಶ್ರೀ ಮುಂದೆ ಚೈತ್ರಾರನ್ನ ಕೂರಿಸಿಯೇ ಪೊಲೀಸರು ವಿಚಾರಣೆ ನಡೆಸಿದ್ದು ನಿಜ ಬಾಯಿ ಬಿಡುವಂತೆ ಮಾಡಿಸಿದ್ದಾರೆ. ಶ್ರೀಕಾಂತ್ ಪೂಜಾರಿ ಜೊತೆ ಸೇರಿ ವಂಚನೆಗೆ ಪ್ಲ್ಯಾನ್ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಕೂರಿಸಿ ಸಿಸಿಬಿ ತಂಡ ವಿಚಾರಣೆ ನಡೆಸಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ. ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ ಮೊಬೈಲ್ ಕರೆಗಳು, ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್ ಠೇವಣಿ, ಜಪ್ತಿ ಮಾಡಿದ್ದ ಕಾರು, ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ತಂಡ ಪ್ರಶ್ನೆ ಮಾಡಿದಾಗ, ನಿರಾಕರಿಸುವುದಕ್ಕೆ ಆಗದೇ ಸಿಕ್ಕಿಬಿದ್ದಿದ್ದಾರೆ. ಸಿಸಿಬಿ ಇಟ್ಟ ದಾಖಲೆ ಕಂಡು ಎಲ್ಲವನ್ನೂ ಬಾಯ್ಬಿಟ್ಟ ಚೈತ್ರಾ, ತಾನು ಹಣ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪರಿಚಿತರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನಲೆಗೆ ತರುವುದು, ಟಿಕೆಟ್ ವಿಚಾರವಾಗಿ ನಂಬಿಕೆ ಬರುವಂತಹ ಸನ್ನಿವೇಶ ಸೃಷ್ಟಿಸುವುದು, ಒಂದು ವೇಳೆ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಚೈತ್ರಾ ಪ್ಲ್ಯಾನ್ ಮಾಡಿದ್ದರು.
ಟಿಕೆಟ್ ಸಿಗದೇ ಹೋದರೆ, ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ್ ಜೀಗೆ ಕೊಟ್ಟಿದ್ದಾಗಿ ಹೇಳಿಕೆ ನೀಡಲು ತಂಡ ನಾಟಕ ಹೆಣೆದಿತ್ತು. ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ, ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಮತ್ತು ವಿಶ್ವನಾಥ್ ಜೀ ಮೃತಪಟ್ಟಿದ್ದಾರೆ, ನಮಗೇ ಗೊತ್ತೇ ಇಲ್ಲ ಎಂದು ಹೇಳಲು ತಂಡ ಸಂಚು ರೂಪಿಸಿದ್ದನ್ನೂ ಆರೋಪಿಗಳು ಒಪ್ಪಿದ್ದಾರೆ. 5 ಕೋಟಿ ರೂ. ಪೈಕಿ ಸುಮಾರು ಮೂರುವರೆ ಕೋಟಿ ಚೈತ್ರಾ ಕೈಸೇರಿತ್ತು. ಒಂದೂವರೆ ಕೋಟಿ ರೂಪಾಯಿ ಹಾಲಶ್ರೀ ಪಡೆದುಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು ಚೈತ್ರಾ ಸಿಸಿಬಿಗೆ ತಿಳಿಸಿದ್ದಾರೆಂದು ಟಿವಿ ನೈನ್ ವರದಿ ಮಾಡಿದೆ.
CCB collects all evidence of Chaitra Kundapura, Chaitra and Halashree in fear.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm