Mandya, Cauvery water: ಕಾವೇರಿ ಕಿಚ್ಚು ; ಸೆ.26ರಂದು ರೈತ ಸಂಘಟನೆಗಳಿಗೆ ಬೆಂಗಳೂರು ಬಂದ್ ಕರೆ, ಬಿಜೆಪಿ, ಜೆಡಿಎಸ್ ನಾಯಕರ ಬೆಂಬಲ ಘೋಷಣೆ, ಸಿನಿಮಾ ದಿಗ್ಗಜರ ಬೆಂಬಲ ಕೋರಿದ ರೈತ ನಾಯಕರು

23-09-23 04:53 pm       Bangalore Correspondent   ಕರ್ನಾಟಕ

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕನ್ನಡ ಮತ್ತು ರೈತ ಪರ ಸಂಘಟನೆಗಳು ಸೆ.26ರಂದು ಬೆಂಗಳೂರು ಬಂದ್ ನಡೆಸಲು ನಿರ್ಧರಿಸಿವೆ.

ಬೆಂಗಳೂರು, ಸೆ.23: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕನ್ನಡ ಮತ್ತು ರೈತ ಪರ ಸಂಘಟನೆಗಳು ಸೆ.26ರಂದು ಬೆಂಗಳೂರು ಬಂದ್ ನಡೆಸಲು ನಿರ್ಧರಿಸಿವೆ. ಶನಿವಾರ ಫ್ರೀಡಂ ಪಾರ್ಕ್ ನಲ್ಲಿ ಸೇರಿದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ರೈತ ಸಂಘಟನೆಗಳ ನಾಯಕರು ಬೆಂಗಳೂರು ಬಂದ್ ಮಾಡಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಣಯಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಧೋರಣೆ ಹಾಗೂ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಇಂದು ಕನ್ನಡ ಪರ ಸಂಘಟನೆಗಳು, ಕಬ್ಬು ಬೆಳೆಗಾರರು, ರೈತರ ಸಂಘಟನೆಗಳು ಸಭೆ ಸೇರಿದ್ದರು. ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಿಜೆಪಿ ನಾಯಕರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅಶ್ವತ್ಥ ನಾರಾಯಣ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಆಗಮಿಸಿ ಧರಣಿಗೆ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ, ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ನಡೆಯನ್ನು ಟೀಕಿಸಿದ್ದಾರೆ.

Farmers' and pro-Kannada outfits observe bandh in Mandya over Cauvery water  sharing - India Today

Cauvery water protests spread in K'taka; Mysuru seer joins farmers' stir -  Rediff.com

Cauvery Water Dispute: Struggle to provide water from Cauvery river to Tamil  Nadu, Mandya bandh, protests at many places – karnataka mandya bandh  saturday against release kaveri water to tamil nadu

ಸಭೆಯ ಬಳಿಕ ರೈತ ಮುಖಂಡ ಕುರಬೂರು ಶಾಂತಕುಮಾರ್ ಸುದ್ದಿಗೋಷ್ಟಿ ಕರೆದು ಸೆ.26ರಂದು ಬಂದ್ ಕರೆ ನೀಡಿದ್ದನ್ನು ತಿಳಿಸಿದ್ದಾರೆ. ಅಂದು ಬೆಳಗ್ಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸೇರಲಿದ್ದು, ಮೈಸೂರು ಬ್ಯಾಂಕ್ ವರೆಗೂ ಮೆರವಣಿಗೆ ನಡೆಸಲಾಗುವುದು. ಬಂದ್, ಪ್ರತಿಭಟನೆಯಲ್ಲಿ ಐಟಿ ಕಂಪನಿಗಳು, ಬೀದಿ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಭಾಗಿಯಾಗಬೇಕು. ಸಿನಿಮಾ ರಂಗದವರೂ ಬಂದ್ ಗೆ ಬೆಂಬಲ ಕೊಟ್ಟು ಜೊತೆ ಸೇರಬೇಕು. ಸಿನಿಮಾ ರಂಗದವರನ್ನು ಜನಸಾಮಾನ್ಯರು ಬೆಳೆಸಿದ್ದಾರೆ. ಇಡೀ ಚಿತ್ರೋದ್ಯಮ ಒಂದು ದಿನ ಚಟುವಟಿಕೆ ನಿಲ್ಲಿಸಿ ಕೈಜೋಡಿಸಬೇಕು ಎಂದು ಹೇಳಿದರು.

ಈಗಾಗಲೇ ಮಂಡ್ಯ ಬಂದ್ ಆಗಿದೆ, ಮಂಗಳವಾರ ಒಂದು ದಿನ ಪೂರ್ತಿಯಾಗಿ ಬೆಂಗಳೂರು ಬಂದ್ ಮಾಡುತ್ತೇವೆ. ಕೇಂದ್ರ ಸರಕಾರ ಬೆಂಗಳೂರು ನಗರವನ್ನು ನಿರ್ಲಕ್ಷ್ಯ ಮಾಡಿದ್ದು, ನಮ್ಮ ಬಿಸಿ ಎಲ್ಲರಿಗೂ ತಟ್ಟುವಂತೆ ಮಾಡಬೇಕು ಎಂದು ಕುರಬೂರು ಶಾಂತಕುಮಾರ್ ಹೇಳಿದ್ದಾರೆ.

ಶುಕ್ರವಾರ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ನಡೆಸಿ, ಸುಪ್ರೀಂ ಕೋರ್ಟ್ ಸೂಚನೆಯಂತೆ ನೀರು ಹರಿಸಲು ಒಪ್ಪಿಗೆ ನೀಡಿದ್ದಾರೆ. ಅದರಂತೆ, ಶನಿವಾರದಿಂದ ದಿನಕ್ಕೆ 5 ಸಾವಿರ ಕ್ಯೂಸೆಕ್ ನಷ್ಟು ನೀರು ತಮಿಳುನಾಡಿಗೆ ಬಿಡಲಾಗುತ್ತಿದೆ.

In the wake of a call by pro-Kannada organisations for a 'bandh' to oppose the release of Cauvery water to Tamil Nadu from dams in Karnataka, most of the shops in the district headquarters town of Mandya, the Cauvery heartland, remained closed on Saturday.