ಬ್ರೇಕಿಂಗ್ ನ್ಯೂಸ್
25-09-23 07:09 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.25: ಬೆಂಗಳೂರು ನಗರವನ್ನು ಬಂದ್ ಮಾಡಲು ಅವಕಾಶ ನೀಡೋದಿಲ್ಲ. ಅಲ್ಲದೆ, ಯಾವುದೇ ರೀತಿಯ ಮೆರವಣಿಗೆ, ಸಭೆ ನಡೆಸುವುದಕ್ಕೂ ಅವಕಾಶ ಇರಲ್ಲ. ಇದಕ್ಕಾಗಿ ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶ ಪ್ರಕಾರ ಯಾವುದೇ ರೀತಿಯ ಬಂದ್ ಗೆ ಅವಕಾಶ ನೀಡುವಂತಿಲ್ಲ. ಒಂದು ವೇಳೆ ಬಂದ್ ಮಾಡಿದರೆ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಬಂದ್ ಕರೆ ಕೊಟ್ಟವರೇ ಹೊಣೆಯಾಗುತ್ತಾರೆ ಎಂದು ತಿಳಿಸಿದರು.
ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯಬಾರದು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಒತ್ತಾಯಪೂರ್ವಕ ಬಂದ್ ಮಾಡುವಂತಿಲ್ಲ. ಹಾಗೊಂದ್ವೇಳೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಿದ್ದು ಬಿಜೆಪಿ, ಆಪ್, ಜೆಡಿಎಸ್ ಸೇರಿದಂತೆ ವಿಪಕ್ಷಗಳು ಬಂದ್ ಗೆ ಬೆಂಬಲ ಘೋಷಿಸಿವೆ. ಬೆಂಗಳೂರು ಮಹಾನಗರವಾಗಿದ್ದು ಒಂದು ದಿನ ಪೂರ್ತಿ ಬಂದ್ ಆದಲ್ಲಿ ದೊಡ್ಡ ಮಟ್ಟದ ನಷ್ಟ ಆಗುತ್ತದೆ. ಈ ಹಿನ್ನೆಲೆ ನಗರ ಪೂರ್ತಿ ಬಂದ್ ಆಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಿದ್ದೇವೆ. ಒತ್ತಾಯದ ಬಂದ್ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
Bengaluru Police Commissioner B Dayananda on Monday said that the bandh in the city on Tuesday would not be permitted and the same had been communicated to the organisers. Addressing a news conference, he said prohibitory orders would be in place from Tuesday midnight to Wednesday midnight.
01-12-23 10:57 pm
HK News Desk
BJP Mla Munirathna, Bomb Email to schools in...
01-12-23 10:28 pm
Chikmagaluru news lawyer, Police: ಹೆಲ್ಮೆಟ್ ಹಾ...
01-12-23 06:08 pm
Bangalore School Bomb Mail: ಬಾಂಬ್ ಮೇಲ್ ; ಟೈಪ್...
01-12-23 05:49 pm
Bengaluru, schools get bomb threat on email:...
01-12-23 03:29 pm
01-12-23 08:02 pm
HK News Desk
ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ; ಚಾಲಕ ನಿದ್ದೆಗ...
01-12-23 05:19 pm
EXIT POLL- ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ; ಮ...
30-11-23 09:40 pm
ಯುಪಿಐ ಪಾವತಿ ವ್ಯವಸ್ಥೆಗೆ ಕಡಿವಾಣ ಹಾಕಲು ಚಿಂತನೆ ;...
30-11-23 09:02 pm
ರಾಷ್ಟ್ರಗೀತೆಗೆ ಅವಮಾನ ; 12 ಬಿಜೆಪಿ ಶಾಸಕರ ವಿರುದ್ಧ...
30-11-23 07:29 pm
01-12-23 08:06 pm
Mangalore Correspondent
Sunil Kumar Bajal: ಗ್ರಾಮ ಪಂಚಾಯತ್ ಪುಸ್ತಕ ಬರಹಗಾ...
01-12-23 06:33 pm
Mangalore Ullal, garbage collection van: ತುಕ್...
01-12-23 02:18 pm
S L Boje Gowda, BJP, JDS, Mangalore: ವಿಧಾನ ಪರ...
01-12-23 01:45 pm
Mangalore Catholics, Tipu attack,Kirem: ಟಿಪ್ಪ...
30-11-23 04:43 pm
01-12-23 10:41 pm
Bangalore Correspondent
Fraud Case, Mangalore: ಅಪಾರ್ಟ್ಮೆಂಟ್ ನಲ್ಲಿ ಫ್ಲ...
01-12-23 04:39 pm
Baby Sale Bangalore: ನವಜಾತ ಶಿಶು ಮಾರಾಟ ಕೇಸ್ ;...
30-11-23 07:35 pm
ನಕಲಿ ನೋಟು ಸಪ್ಲೈ , ಇನ್ಶೂರೆನ್ಸ್ ಹೆಸ್ರಲ್ಲಿ ಜನರಿ...
30-11-23 07:24 pm
Bangalore Mangalore News, Mobile Naked Photos...
30-11-23 03:15 pm