ಬ್ರೇಕಿಂಗ್ ನ್ಯೂಸ್
26-09-23 08:57 pm HK News Desk ಕರ್ನಾಟಕ
ಹಾಸನ, ಸೆ.26: ಕಾವೇರಿ ನೀರಿನ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಡ್ಯಾಂ ಸ್ಥಳ ಪರಿಶೀಲನೆ ಮಾಡಿ ವಿವರ ತೆಗೆದುಕೊಂಡು ಬಂದಿದ್ದರು. ಅದರ ಆಧಾರಲ್ಲಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದೇನೆ. ನಿಷ್ಪಕ್ಷಪಾತವಾಗಿ ಎರಡೂ ರಾಜ್ಯದ ಸ್ಥಿತಿ ಅರಿಯಲು ಟೀಂ ಕಳಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ನಾನು ಖುದ್ದು ಸ್ಥಳಕ್ಕೆ ಹೋಗಿಲ್ಲ. ನಾನು ಪತ್ರ ಬರೆದ ಸಾರಾಂಶವಾಗಿ ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ ಎಲ್ಲರೂ ಸ್ವಾಗತಿಸಿದ್ದಾರೆ. ಸಂಬಂಧಪಟ್ಟ ಸಮಿತಿಯವರು ಇಂದು ಕೂತು ನಿರ್ಧಾರ ಮಾಡಿದ್ದಾರೆ. 15-10-23 ರವರೆಗೆ 60 ಟಿಎಂಸಿ ನೀರು ಬಿಡಲು ಆದೇಶಿಸಿದ್ದಾರೆ. ನಮ್ಮ ಸರ್ಕಾರವೇ 51 ಟಿಎಂಸಿ ನೀರಿದೆ ಎನ್ನುತ್ತಾರೆ. ನಮ್ಮ ರಾಜ್ಯದ ಬೆಳೆಗೆ 70 ಟಿಎಂಸಿ ನೀರು ಬೇಕು. ಆ ಬೆಳೆಯನ್ನ ಉಳಿಸೋದಕ್ಕೆ ಇವರಿಗೆ ಆಗೋದಿಲ್ಲ.
ನಾನು ಈ ಸಂಬಂಧ ವೈಯಕ್ತಿಕ ಅಭಿಪ್ರಾಯ ನೀಡೋದು ಸರಿಯಲ್ಲ. ಒಬ್ಬ ಹಿರಿಯ ರಾಜಕಾರಣಿಯಾಗಿ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದ್ದೇನೆ. ತಮಿಳುನಾಡಿನಲ್ಲಿ ಈ ಬಗ್ಗೆ ಒಗ್ಗಟ್ಟಿದೆ. ಸರ್ಕಾರದ ನಿಲುವನ್ನ ಹೇಳುವ ವರೆಗೆ ನಾನು ಕಾಯುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ. ನಾನು ಬರೆದ ಪತ್ರದಲ್ಲಿ ನಮ್ಮ ಬೆಳೆ ಬಗ್ಗೆ ವಿವರ ನೀಡಿದ್ದೇನೆ. ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದಿದ್ದಾರೆ.
ಕಾವೇರಿ ವಿಚಾರವಾಗಿ ಕೇಂದ್ರ ಗಮನ ನೀಡುತ್ತಿಲ್ಲ ಎಂಬ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌಡರು, ಕೇಂದ್ರ ಸರ್ಕಾರದ ಪ್ರಶ್ನೆ ಅಲ್ಲಾ. ಹಿಂದೆ ಮನಮೋಹನ್ ಸಿಂಗ್, ವಾಜಪೇಯಿ ತೀರ್ಮಾನ ಮಾಡಿದ್ದರಾ. ಹಿಂದೆ ಸಂಕಷ್ಟ ಬಂದಾಗ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ನಮ್ಮ ಮನೆಗೆ ಬಂದಿದ್ದರು. ಆ ಸಂದರ್ಭ ನಾನು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಕೂತಿದ್ದೆ. ಅನಂತಕುಮಾರ್ ದೆಹಲಿಯಿಂದ ಬಂದು ಮನವೊಲಿಸಿದ್ದರು. ಇದೇ ಮೋದಿಯವರೇ ಪ್ರಧಾನಮಂತ್ರಿ ಇದ್ದರು ಎಂದು ಹೇಳಿದ್ದಾರೆ.
Former Prime Minister H.D. Deve Gowda has reiterated that the Prime Minister should send a team to study the ground situation and take a decision on the Cauvery issue. Speaking to presspersons in Hassan on Tuesday, Mr. Deve Gowda said he wrote to the Prime Minister suggesting he send a team of five experts to assess water storage in all reservoirs and the crop situation. “I wrote the letter with the suggestion that I could make. I have placed the facts in my letter”, he said.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm