ಬ್ರೇಕಿಂಗ್ ನ್ಯೂಸ್
29-09-23 10:40 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.29: ಮಂಗಳೂರಿನ ಜಿ.ಆರ್ ಮೆಡಿಕಲ್ ಕಾಲೇಜಿನ ಮಾನ್ಯತೆ ರದ್ದಾಗಿರುವುದರಿಂದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ತಾತ್ಕಾಲಿಕ ನೆಲೆಯಲ್ಲಿ 24 ಇತರೇ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಮಂಗಳೂರಿನ ನೀರುಮಾರ್ಗದ ಜಿ.ಆರ್. ಮೆಡಿಕಲ್ ಕಾಲೇಜಿನ ಮಾನ್ಯತೆ ರದ್ದು ಪಡಿಸಲಾಗಿತ್ತು. ಆದರೆ ರಾಜ್ಯ ಸರಕಾರದ ಪರೀಕ್ಷಾ ಪ್ರಾಧಿಕಾರದಿಂದ ಜಿಆರ್ ಮೆಡಿಕಲ್ ಕಾಲೇಜಿಗೆ 100 ಸೀಟುಗಳನ್ನು ಅಲಾಟ್ ಮಾಡಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಇತ್ತೀಚೆಗೆ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಅದರಂತೆ, ಹೈಕೋರ್ಟ್ ವಿಭಾಗೀಯ ಪೀಠವು ಸೆ.12ರಂದು ರಾಜ್ಯ ಸರಕಾರ, ಕೆಇಎ, ಎನ್ಎಂಸಿಗೆ ನೋಟೀಸ್ ನೀಡಿತ್ತು. ಆನಂತರ, ವಾದ- ಪ್ರತಿವಾದ, ವಿಚಾರಣೆ ನಡೆದ ಬಳಿಕ ಕೋರ್ಟ್ ಸೆ.29ರಂದು ಮಧ್ಯಂತರ ಆದೇಶ ಹೊರಡಿಸಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾತ್ಕಾಲಿಕ ನೆಲೆಯಲ್ಲಿ ಅವರನ್ನು 24 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡುವಂತೆ ಹೇಳಿದೆ.
ವಿದ್ಯಾರ್ಥಿಗಳು ತಮಗೆ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವಂತೆ ಹೈಕೋರ್ಟಿನಲ್ಲಿ ರಿಟ್ ಹಾಕಿದ್ದರು. ಆದರೆ ರಾಜ್ಯ ಸರಕಾರದ ಪ್ರತಿನಿಧಿಗಳು ಕೋರ್ಟಿಗೆ ಹಾಜರಾಗಿ, ವಿದ್ಯಾರ್ಥಿಗಳಿಗೆ ವಿಧಿಸಿರುವ ಶುಲ್ಕ ವ್ಯತ್ಯಾಸ ಇರುವುದರಿಂದ ಈ ಅವರನ್ನು ನೇರವಾಗಿ ಸರಕಾರಿ ಕಾಲೇಜಿಗೆ ಸೇರಿಸುವಂತಿಲ್ಲ. ಇತರೇ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿಯೇ ವ್ಯವಸ್ಥೆ ಮಾಡಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಇದೇ ವೇಳೆ, ರಾಜ್ಯ ಸರಕಾರದ ಅಧೀನದ ಕೆಇಎ ನಿರ್ಲಕ್ಷ್ಯದ ಬಗ್ಗೆಯೂ ಗಮನ ಸೆಳೆಯಲಾಗಿತ್ತು. ಕಳೆದ ವರ್ಷವೇ ರಾಷ್ಟ್ರೀಯ ವೈದ್ಯಕೀಯ ಆಯೋಗ, ಕಾಲೇಜಿನ ಮಾನ್ಯತೆ ರದ್ದುಪಡಿಸಿದ್ದರೂ ವಿದ್ಯಾರ್ಥಿಗಳನ್ನು ಅಲಾಟ್ ಮಾಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳ ಪರ ವಕೀಲರು ಮುಂದಿಟ್ಟರು.
ಎನ್ನೆಂಸಿ ಪರವಾಗಿ ಹಾಜರಾದ ವಕೀಲರು ಜಿಆರ್ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ಸೌಲಭ್ಯ ಇಲ್ಲದಿರುವುದು, ಇತ್ತೀಚೆಗೆ ವೈದ್ಯಕೀಯ ಆಯೋಗದ ಪತ್ರವನ್ನೇ ನಕಲು ಮಾಡಿದ್ದರ ಬಗ್ಗೆಯೂ ಕೋರ್ಟಿನಲ್ಲಿ ಉಲ್ಲೇಖ ಮಾಡಿದ್ದಾರೆ. ವಿದ್ಯಾರ್ಥಿಗಳ ಪರ ವಕೀಲರು, ವಿದ್ಯಾರ್ಥಿಗಳಿಗೆ ಅಕ್ಟೋಬರ್ 31ರ ನಂತರ ಪರೀಕ್ಷೆ ಇರುವುದರಿಂದ ಅದಕ್ಕೆ ಹಾಜರಾಗಲು ವ್ಯವಸ್ಥೆ ಮಾಡಬೇಕು. ಅದಕ್ಕೂ ಮೊದಲು ತರಗತಿ ಆಗಬೇಕಿರುವುದರಿಂದ ತುರ್ತು ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡರು. ಕಾಲೇಜಿಗೆ ಮಾನ್ಯತೆ ಇಲ್ಲದಿದ್ದರೂ ಸೀಟು ಅಲಾಟ್ ಮಾಡಿದ್ದು ಹೇಗೆ ಎನ್ನುವ ಬಗ್ಗೆ ನಂತರ ವಿಚಾರಣೆ ಮಾಡಬೇಕಷ್ಟೇ. ಅದರಲ್ಲಿ ಸರಕಾರದ ಕಡೆಯಿಂದ ತಪ್ಪಾಗಿರುವುದು ಕಂಡುಬರುತ್ತದೆ. ಆದರೆ ಈಗ ವಿದ್ಯಾರ್ಥಿಗಳಿಗೆ ತುರ್ತಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಾದ್ದು ಸರಕಾರದ ಕರ್ತವ್ಯ. ಅದಕ್ಕಾಗಿ ಬದಲಿ ವ್ಯವಸ್ಥೆ ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿ ವಿಭಾಗೀಯ ಪೀಠ ಮಧ್ಯಂತರ ಆದೇಶ ಮಾಡಿದೆ.
ಸೆ.30ರಂದು ಕೆಇಎ ಕಚೇರಿಗೆ ಬರಲು ಸೂಚನೆ
ಹೈಕೋರ್ಟ್ ಸೂಚನೆಯಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವ್ಯವಸ್ಥಾಪಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಪ್ರಕಟಣೆ ನೀಡಿದ್ದು, ಜಿಆರ್ ಮೆಡಿಕಲ್ ಕಾಲೇಜಿನ ಮೊದಲ ವರ್ಷದ 150 ಎಂಬಿಬಿಎಸ್ ವಿದ್ಯಾರ್ಥಿಗಳು ಸೀಟುಗಳನ್ನು ರೀ ಅಲಾಟ್ ಮಾಡಿಕೊಳ್ಳಲು ಸೆ.30ರಂದು ಬೆಂಗಳೂರಿನ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳು 2022-23ರಲ್ಲಿ ಕೆಇಎಯಿಂದ ನೀಡಲಾಗಿದ್ದ ಹಾಲ್ ಟಿಕೇಟ್, ಜಿಆರ್ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಆಗಿದ್ದಕ್ಕೆ ದಾಖಲೆ ಪತ್ರಗಳು, ಫೋಟೋ ಐಡಿ ಕಾರ್ಡ್ ಇನ್ನಿತರ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ.
A total of 150 students of G.R. Medical College, Mangaluru, who were allotted seats for degree courses during 2022-23, have been asked to appear at the Karnataka Examination Authority (KEA) office here at 11 a.m. on Saturday.
13-02-25 05:05 pm
HK News Desk
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಸುಳಿವು ಕೊಟ...
12-02-25 12:55 pm
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 10:08 am
Mangalore Correspondent
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
13-02-25 05:54 pm
Bangalore Correspondent
Mangalore, Sieal Residency Bar Valachil, Crim...
12-02-25 10:28 pm
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm