ಬ್ರೇಕಿಂಗ್ ನ್ಯೂಸ್
30-09-23 09:36 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.30: ಇತ್ತೀಚೆಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ ಮಾಡಿ ಹಿಂದು ಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹವರ್ತಿಗಳು ಪೊಲೀಸ್ ಬಲೆಗೆ ಬಿದ್ದಿರುವುದು ದೊಡ್ಡ ಸುದ್ದಿಯಾಗಿತ್ತು. ಇದೀಗ ಅಂಥಹದ್ದೇ ರೀತಿಯ ಮತ್ತೊಂದು ಬಿಜೆಪಿ ಟಿಕೆಟ್ ಡೀಲ್ ಪ್ರಕರಣ ಹೊರಬಿದ್ದಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆಂದು ಬಿಜೆಪಿ ಮುಖಂಡರು ಡೀಲ್ ಮಾಡಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಶಿವಮೂರ್ತಿ ಎಂಬವರಿಂದ ಕೋಟಿ ಕೋಟಿ ಹಣ ಪೀಕಿಸಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತರೆಂದು ಹೇಳಿಕೊಂಡು ಬಿಜೆಪಿ ಮುಖಂಡರು ಎನಿಸಿಕೊಂಡವರೇ ಎರಡೂವರೆ ಕೋಟಿ ಹಣ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಹಣ ಕಳಕೊಂಡ ಶಿವಮೂರ್ತಿ ಮುಖ್ಯಮಂತ್ರಿಗೆ ಬರೆದಿರುವ ಪತ್ರ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಟ್ಟೂರು ತಾಲೂಕಿನ ರೇವಣಸಿದ್ದಪ್ಪ ಮತ್ತು ಪುತ್ತೂರು ಮೂಲದ ಶೇಖರ್ ಎನ್.ಪಿ. ಎಂಬವರು ವಂಚನೆ ಎಸಗಿರುವ ಬಗ್ಗೆ ಪತ್ರದಲ್ಲಿ ಶಿವಮೂರ್ತಿ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆತ್ಮೀಯರು ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದ ಶೇಖರ್ ಅಲಿಯಾಸ್ ರಾಜಶೇಖರ ಕೋಟ್ಯಾನ್ ಮತ್ತು ರೇವಣಸಿದ್ದಪ್ಪ ಅಲಿಯಾಸ್ ಸಿದ್ದಲಿಂಗಪ್ಪ ಬೆಂಗಳೂರಿನ ಕಚೇರಿ ಒಂದರಲ್ಲಿ ನಳಿನ್ ಕುಮಾರ್ ಅವರನ್ನು ತನಗೆ ಭೇಟಿ ಮಾಡಿಸಿದ್ದರು. ಆನಂತರ, ನಳಿನ್ ಕುಮಾರ್ ಜೊತೆಗೆ ಟಿಕೆಟ್ ಕುರಿತಾಗಿ ಮಾತುಕತೆ ನಡೆಸಿದ್ದು ಎಲ್ಲ ವ್ಯವಹಾರವನ್ನು ಶೇಖರ್ ನೋಡಿಕೊಳ್ಳುತ್ತಾರೆ ಎಂದಿದ್ದರು ಎಂಬುದಾಗಿ ಪತ್ರದಲ್ಲಿ ಶಿವಮೂರ್ತಿ ಬರೆದಿದ್ದಾರೆ.
ಪುತ್ತೂರು ಮೂಲದ ಶೇಖರ್ ಅವರಿಗೆ ಬೆಂಗಳೂರಿನ ಬನಶಂಕರಿಯ ಬರೋಡಾ ಬ್ಯಾಂಕ್ ಶಾಖೆ ಮತ್ತು ನಗದು ರೂಪದಲ್ಲಿ ವಿವಿಧ ಸಂದರ್ಭಗಳಲ್ಲಿ ಒಟ್ಟು ಒಂದು ಕೋಟಿ 55 ಲಕ್ಷ ರೂಪಾಯಿ ಹಣ ನೀಡಿದ್ದಾಗಿ ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ, ರೇವಣಸಿದ್ದಪ್ಪ ಅವರು ಟಿಕೆಟ್ ದೊರಕಿಸಲು ಬಿಜೆಪಿ ಹಿರಿಯ ಮುಖಂಡರಿಗೆ ಹಣ ನೀಡಲಿಕ್ಕಿದೆ ಎಂದು ಕೂಡ್ಲಿಗಿ ತಾಲೂಕಿನ ಆರೆಸ್ಸೆಸ್ ಮುಖಂಡ ನಾಗಣ್ಣ ಸಮ್ಮುಖದಲ್ಲಿ 50 ಲಕ್ಷ ಪಡೆದಿದ್ದಾರೆ. ಒಟ್ಟು ಎರಡು ಕೋಟಿ 55 ಲಕ್ಷ ರೂಪಾಯಿ ಹಣವನ್ನು 2022ರ ಅಕ್ಟೋಬರ್ ನಿಂದ 2023ರ ಎಪ್ರಿಲ್ ತಿಂಗಳ ವರೆಗಿನ ಅವಧಿಯಲ್ಲಿ ನೀಡಿದ್ದೇನೆ. ಜಮೀನು, ನಿವೇಶನ ಮಾರಿ ಹಣವನ್ನು ನೀಡಿದ್ದೇನೆ. ತನ್ನ ನಿಯತ್ತಿನ ಹಣವನ್ನು ಮರಳಿಸಿ ನ್ಯಾಯ ತೆಗೆಸಿಕೊಡಬೇಕೆಂದು ಶಿವಮೂರ್ತಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಹಣ ನೀಡಿರುವುದಕ್ಕೆ ದಿನ, ಖಾತೆ ಸಂಖ್ಯೆ, ದಾಖಲೆಗಳನ್ನೂ ಪತ್ರದಲ್ಲಿ ತೋರಿಸಿದ್ದಾರೆ.
ಚೈತ್ರಾ ವಂಚನೆ ಪ್ರಕರಣದಲ್ಲಿಯೂ ಹಣ ಕಳಕೊಂಡಿದ್ದ ಉದ್ಯಮಿ ಗೋವಿಂದ ಪೂಜಾರಿ ಬರೆದಿದ್ದ ಪತ್ರ ಎರಡು ತಿಂಗಳ ಹಿಂದೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಆನಂತರ, ಬೆಂಗಳೂರಿನ ಠಾಣೆಯಲ್ಲಿ ಗೋವಿಂದ ಪೂಜಾರಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಸದ್ದಿಲ್ಲದೆ ಬಲೆಗೆ ಕೆಡವಿದ್ದರು. ಈಗ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಡೀಲ್ ಬಗ್ಗೆ ಪತ್ರ ವೈರಲ್ ಆಗಿದ್ದು, ಪ್ರಕರಣ ದಾಖಲಾಗಿದೆಯೋ ಅಥವಾ ಮುಖ್ಯಮಂತ್ರಿಗೆ ಈ ಪತ್ರ ತಲುಪಿದೆಯೋ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇರುವ ಈ ಪತ್ರವನ್ನೇ ದೂರೆಂದು ಪರಿಗಣಿಸಿ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇದೆ.
ಪುತ್ತಿಲ ಪರಿವಾರಕ್ಕೆ ಸಂಬಂಧ ಇಲ್ಲ
ಪುತ್ತೂರು ಮೂಲದ ಶೇಖರ್ ಅಲಿಯಾಸ್ ರಾಜಶೇಖರ ಕೋಟ್ಯಾನ್ ನೇರಳಕಟ್ಟೆ ನಿವಾಸಿ ಎನ್ನಲಾಗುತ್ತಿದ್ದು, ಚುನಾವಣೆಗೂ ಹಿಂದೆ ನಳಿನ್ ಕುಮಾರ್ ಜೊತೆಗೆ ಗುರುತಿಸಿಕೊಂಡು ಟಿಕೆಟ್ ಡೀಲ್ ನಡೆಸಿರುವ ಬಗ್ಗೆ ಪತ್ರದಲ್ಲಿ ಹೇಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ತಾನು ಹೇಳಿದವರಿಗೆ ಟಿಕೆಟ್ ಸಿಗದ್ದರಿಂದ ನಳಿನ್ ಕುಮಾರ್ ಮೇಲಿನ ಸಿಟ್ಟಿನಲ್ಲೋ ಏನೋ, ಪುತ್ತೂರಿನಲ್ಲಿ ಅರುಣ್ ಪುತ್ತಿಲ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ, ವಂಚನೆ ಪ್ರಕರಣದಲ್ಲಿ ರಾಜಶೇಖರ ಕೋಟ್ಯಾನ್ ಹೆಸರು ಕೇಳಿಬರುತ್ತಿದ್ದಂತೆ ಪುತ್ತಿಲ ಪರಿವಾರದಿಂದ ಪ್ರಕಟಣೆ ನೀಡಲಾಗಿದ್ದು, ಆ ವ್ಯಕ್ತಿಗೂ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಅರುಣ್ ಪುತ್ತಿಲರಿಗೆ ಬೆಂಬಲ ನೀಡಿದ್ದಾರೆ. ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲ ಪುತ್ತಿಲ ಪರಿವಾರದ ಕಾರ್ಯಕರ್ತರಲ್ಲ. ಅಲ್ಲದೆ, ಈ ವ್ಯಕ್ತಿ ಪುತ್ತಿಲ ಪರಿವಾರದ ಪದಾಧಿಕಾರಿಯೂ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Another BJP ticket deal exposed in Puttur Mangalore by the name of Nalin Kateel, letter to CM goes viral. Person from Bangalore has been cheated of getting BJP ticket. A case has been filed.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm