Nenapirali Prem, Bengalore, Cauvery Row: ಪ್ರಧಾನಿ ಮೋದಿಜೀ, ಕಾವೇರಿ ವಿಚಾರದಲ್ಲಿ ದಯವಿಟ್ಟು ನ್ಯಾಯ ಒದಗಿಸಿಕೊಡಿ ; ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್ 

01-10-23 06:25 pm       Bangalore Correspondent   ಕರ್ನಾಟಕ

ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಡುತ್ತಿರುವುದನ್ನು ಖಂಡಿಸಿ ಬೆಂಗಳೂರು, ಕರ್ನಾಟಕ ಬಂದ್​ ಮಾಡಿದ ನಂತರವೂ ಕನ್ನಡಿಗರ ಕಿಚ್ಚು ಇನ್ನೂ ತಣ್ಣಗಾಗಿಲ್ಲ.

ಬೆಂಗಳೂರು, ಅ.01: ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಡುತ್ತಿರುವುದನ್ನು ಖಂಡಿಸಿ ಬೆಂಗಳೂರು, ಕರ್ನಾಟಕ ಬಂದ್​ ಮಾಡಿದ ನಂತರವೂ ಕನ್ನಡಿಗರ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ಕಾವೇರಿ ಕೊಳ್ಳದ ಐದು ಜಿಲ್ಲೆಗಳ ರೈತರು, ಕನ್ನಡಪರ ಸಂಘಟನೆಗಳವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆಗಳನ್ನು ಈಗಲೂ ಮುಂದುವರಿಸಿದ್ದಾರೆ. ಈ ನಡುವೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಸತತ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಲು ಒತ್ತಾಯಿಸಿ ನಟ ನೆನಪಿರಲಿ ಪ್ರೇಮ್​ ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಪ್ರಧಾನಿ ಮೋದಿಜೀ, ನಮ್ಮ ರಾಜ್ಯ ಮತ್ತು ಕಾವೇರಿ ವಿಚಾರದಲ್ಲಿ ದಯವಿಟ್ಟು ನ್ಯಾಯ ಒದಗಿಸಿಕೊಡಿ ಎಂದು ಇಂಗ್ಲಿಷ್​ನಲ್ಲಿ ಭಿನ್ನವಿಸಿಕೊಂಡಿರುವ ದ ನಟ ನೆನಪಿರಲಿ ಪ್ರೇಮ್ ‘ಕಾವೇರಿ ನಮ್ಮದು’ ಎಂದು ಕನ್ನಡದಲ್ಲಿ ಬರೆದಿದ್ದಾರೆ.

In the video, the actor is seen writing with red ink, giving the impression of writing the letter in blood. "To Narendra Modi, PM Of India, Please do justice for our Cauvery and Karnataka. Cauvery Nammadu (Cauvery is ours)," he said in the clip.