ಬ್ರೇಕಿಂಗ್ ನ್ಯೂಸ್
01-10-23 11:21 pm Bangalore Correspondent ಕರ್ನಾಟಕ
ಬೆಂಗಳೂರು, ಅ.1: ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ನೆಪದಲ್ಲಿ ಮುಸ್ಲಿಮರು ಅಳವಡಿಸಿರುವ ತಲ್ವಾರ್ ಶೈಲಿಯ ಕಮಾನು ವಿವಾದಕ್ಕೆ ಕಾರಣವಾಗಿದೆ. ಇದಲ್ಲದೆ, ಟಿಪ್ಪು ಸುಲ್ತಾನ್ ಸೈನಿಕರನ್ನು ಕೊಲ್ಲುವ ರೀತಿಯ ಕಟೌಟ್ ಅಳವಡಿಸಿದ್ದು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರ ರಸ್ತೆಯಲ್ಲಿ ಟಿಪ್ಪು ಸುಲ್ತಾನ್ ಇಬ್ಬರು ಹಿಂದು ಮಾದರಿಯ ಸೈನಿಕರನ್ನು ಕೊಲ್ಲುತ್ತಿರುವ ಕಟೌಟ್ ಅಳವಡಿಸಿದ್ದು ವಿರೋಧ ವ್ಯಕ್ತವಾಗುತ್ತಲೇ ಎಸ್ಪಿ ಮಿಥುನ್ ಮಾತುಕತೆ ನಡೆಸಿ ಹಿಂದು ಮಾದರಿಯಿದ್ದ ಸೈನಿಕರ ವೇಷಕ್ಕೆ ಬಿಳಿ ಬಣ್ಣ ಬಳಿಸುವಂತೆ ಮಾಡಿದ್ದರು. ಆದರೆ ಪೊಲೀಸರು ಕಟೌಟ್ ಗೆ ಬಣ್ಣ ಹಚ್ಚಿದ್ದಕ್ಕೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿರುವ ಮುಸ್ಲಿಂ ಯುವಕರು, ಶಿವಮೊಗ್ಗ- ಹೊನ್ನಾಳಿ- ದಾವಣಗೆರೆ ರಸ್ತೆ ತಡೆದು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಯುವಕನೊಬ್ಬ ಕಟೌಟ್ ಮೇಲೆ ಬಿಳಿ ಬಣ್ಣದ ಮೇಲೆ ರಕ್ತದಲ್ಲೇ ಶೇರ್ ಟಿಪ್ಪು ಎಂದು ಬರೆದಿದ್ದಾನೆ. ಎಸ್ಪಿ ಮಿಥುನ್ ಕುಮಾರ್ ಸ್ಥಳಕ್ಕಾಗಮಿಸಿ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.
ಇದೇ ವೇಳೆ, ಮುಸ್ಲಿಮರು ಶಾಂತಿನಗರ ಕ್ರಾಸ್ ಬಳಿ ದ್ವಾರದಲ್ಲಿ ಖಡ್ಗದ ಮಾದರಿಯನ್ನು ಹಾಕಿದ್ದಾರೆ. ಜೊತೆಗೆ ಅಖಂಡ ಭಾರತದ ಸಾಮ್ರಾಜ್ಯ ಕಟ್ಟಿದ್ದ ಮಹಾನ್ ದೊರೆ ಔರಂಗಜೇಬ ಎಂಬ ದೊಡ್ಡ ಕಮಾನು ಅಳವಡಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದು ಶಿವಮೊಗ್ಗ ನಗರದಲ್ಲಿ ಸೆಕ್ಷನ್ ವಿಧಿಸಿದ್ದಾರೆ.
ಟಿಪ್ಪು ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್ ; ಬಿಜೆಪಿ ಟೀಕೆ
ಈ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸಿದೆ. ಶಾಂತಿಯ ನಾಡಾಗಿದ್ದ ನಮ್ಮ ಕರ್ನಾಟಕವನ್ನು ಮತಾಂಧ ಟಿಪ್ಪು- ಔರಂಗಜೇಬನ ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್! ಕೋಲಾರದಲ್ಲಿ ತಲ್ವಾರ್ ಶೈಲಿಯ ಕಮಾನ್, ಕಟೌಟ್ ನಿರ್ಮಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾಯ್ತು, ಈಗ ಶಿವಮೊಗ್ಗದಲ್ಲಿ ಅದೇ ರೀತಿಯ ತಲ್ವಾರ್ ಕಮಾನ್, ಟಿಪ್ಪು ಕಟೌಟ್‌ಗಳನ್ನು ನಿರ್ಮಿಸಿ ಶಾಂತಿ ಕದಡುವ ಕೆಲಸ ನಡೆದಿದೆ.
ಜಿಲ್ಲಾಡಳಿತ ಮೌನವಾಗಿದ್ದು ಕಾಂಗ್ರೆಸ್ ಸರ್ಕಾರ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ವಿವಾದಾತ್ಮಕ ಕಟೌಟ್‌ಗಳನ್ನು ತೆರವುಗೊಳಿಸಿ ಎಂದು ಪೊಲೀಸರು ಹೇಳಿದರೂ, ಪೊಲೀಸರಿಗೆ ಆವಾಜ್ ಹಾಕುತ್ತಾರೆಂದರೆ, ಆ ಪುಂಡರ ಹಿಂದಿರುವ ಶಕ್ತಿ ಕಾಂಗ್ರೆಸ್ ಸರ್ಕಾರವೇ ಹೊರತು ಮತ್ತಾರು ಅಲ್ಲ. ಆಧುನಿಕ ಔರಂಗಜೇಬನಂತೆ ಮತಾಂಧರಿಗೆ ಅಭಯ ನೀಡುವ ಸಿದ್ದರಾಮಯ್ಯ ಸರ್ಕಾರ ಬಂದಿದ್ದೇ ಬಂದಿದ್ದು, ಸಮಾಜಘಾತುಕ ಶಕ್ತಿಗಳೆಲ್ಲ, ಸಮಾಜದ ಶಾಂತಿಯನ್ನು ಕದಡಲು ಸದಾ "ಸಿದ್ಧ" ಎಂಬಂತೆ ಕುಳಿತಿವೆ. ಒಂದು ವೇಳೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬಂದದ್ದೇ ಆದಲ್ಲಿ, ಅದಕ್ಕೆ ನೇರ ಹೊಣೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಎಚ್ಚರಿಕೆ ನೀಡಿದೆ.
Stone pelting leads to tension in Shivamogga, 144 section imposed, Earlier in the day, there were protests by Muslim residents in Ragi Gudda area over a cutout displayed by the community to mark the Id Milad procession scheduled for the day. The police had covered a portion of the cutout, and that had upset the community. The SP and other senior officers reached the spot and resolved the situation by holding talks with the people.
13-02-25 07:28 pm
HK News Desk
ಜನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ...
13-02-25 05:05 pm
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಸುಳಿವು ಕೊಟ...
12-02-25 12:55 pm
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 10:08 am
Mangalore Correspondent
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
13-02-25 05:54 pm
Bangalore Correspondent
Mangalore, Sieal Residency Bar Valachil, Crim...
12-02-25 10:28 pm
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm