EID violence, CT Ravi: ಘಜವಾ ಹಿಂದ್ ಟಾಸ್ಕ್ ಮುಂದಿಟ್ಟು ಕೆಲಸ ಮಾಡ್ತಿದಾರೆ, ಮೊಘಲ್ ಸಾಮ್ರಾಜ್ಯ ಮರಳಿ ತರುವುದೇ ಇವರ ಗುರಿ, ಶಿವಮೊಗ್ಗ ಗಲಭೆ ಹಿಂದೆ ಮತಾಂಧ ಶಕ್ತಿಗಳಿವೆ 

03-10-23 05:25 pm       HK News Desk   ಕರ್ನಾಟಕ

ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ. ಇದು ಎಲ್ಲಾ ರೀತಿಯ ಅನುಮಾನಗಳನ್ನ ಹುಟ್ಟುಹಾಕಿವೆ. ಸಿಮಿ ಬ್ಯಾನ್ ಆಗಿ ಕಚೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಅವರ ಅಜೆಂಡಾ ತೋರಿಸುವ ಭೂಪಟ ಸಿಕ್ಕಿತ್ತು.‌

ಕೋಲಾರ, ಅ.3:  ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ. ಇದು ಎಲ್ಲಾ ರೀತಿಯ ಅನುಮಾನಗಳನ್ನ ಹುಟ್ಟುಹಾಕಿವೆ. ಸಿಮಿ ಬ್ಯಾನ್ ಆಗಿ ಕಚೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಅವರ ಅಜೆಂಡಾ ತೋರಿಸುವ ಭೂಪಟ ಸಿಕ್ಕಿತ್ತು.‌ ಅದರಲ್ಲಿ ಘಜವಾಹಿಂದ್ ಉಲ್ಲೇಖ ಮಾಡಿದ್ದರು. ದೇಶದಲ್ಲಿ ಇಸ್ಲಾಮಿ ಧರ್ಮ ಸ್ಥಾಪಿಸುವುದೇ ಉದ್ದೇಶವಾಗಿದೆ. ಅದನ್ನೀಗ ಜಾರಿಗೊಳಿಸಲು ಮತಾಂಧ ಶಕ್ತಿಗಳು ಮುಂದಾಗಿವೆ ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ. 

ಘಜವಾ ಹಿಂದ್ ಟಾಸ್ಕ್ ಪೂರ್ಣಗೊಳಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಮೊಘಲರು ಭಾರತದ ಯಾವ್ಯಾವ ಸ್ಥಳವನ್ನ ಆಳ್ವಿಕೆ ನಡೆಸುತ್ತಿದ್ದರು ಅದನ್ನ ಅದರಲ್ಲಿ ಉಲ್ಲೇಖ ಮಾಡಿದ್ದಾರೆ. ಘಜವಾ ಹಿಂದ್ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವವವರು ನಮ್ಮ ನಡುವೆ ಇದ್ದಾರೆ ಅನ್ನೋದಕ್ಕೆ ಶಿವಮೊಗ್ಗದ ಘಟನೆಯೆ ಸಾಕ್ಷಿ. ಇವರ ಉದ್ದೇಶ ಬರ್ಬರ ಆಳ್ವಿಕೆ ತರುವುದು. 

ಔರಂಗಜೇಬ್ ಮತಾಂತರದ ಉದ್ದೇಶ ಇಟ್ಟುಕೊಂಡಿದ್ದವನು. ಸನಾತನ ಧರ್ಮ, ಭಾರತೀಯತೆ ನಾಶ ಮಾಡುವುದು ಔರಂಗಜೇಬ್ ಉದ್ದೇಶವಾಗಿತ್ತು. ಇಂತಹ ಉದ್ದೇಶಕ್ಕೆ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಅವಕಾಶ ಕೊಟ್ಟಿದೆ. ಟಿಪ್ಪು, ಔರಂಗಜೇಬ್ ಉದ್ದೇಶ ಘಜವಾಹಿಂದ್ ಸ್ಥಾಪನೆ ಮಾಡುವುದಾಗಿತ್ತು. ಟಿಪ್ಪು ಆಡಳಿತ ಮುಂದುವರೆದಿದ್ದರೆ ಈ ರಾಜ್ಯದಲ್ಲಿ ಕನ್ನಡ ಎಂಬುದನ್ನ ಉಳಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತಿತ್ತು. ಅಂತಹ ನಂಬಿಕೆ ದ್ರೋಹಿ, ಕನ್ನಡ ದ್ರೋಹಿಯನ್ನ ವಿಜೃಂಭಿಸಲು ಸರ್ಕಾರ ಸಹಾಯ ಮಾಡಿದೆ. 

ಇವರೆಲ್ಲರ ಉದ್ದೇಶ ಮೊಘಲ್ ಸಾಮ್ರಾಜ್ಯ ಸ್ಥಾಪನೆ ಮಾಡುವುದೇ ಆಗಿದೆ. ಇದಕ್ಕೆ ಜಿಲ್ಲಾಡಳಿತ ಕುಮ್ಮಕ್ಕು ಕೊಟ್ಟಿದೆ, ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಪಕ್ಷ ಸಹಕಾರ ಮಾಡಿದೆ. ರಾಷ್ಟ್ರ ಮುಖ್ಯ ಎಂಬುದು ಕಾಂಗ್ರೇಸ್ ನ ಭಾವನೆಗಳಲ್ಲಿ ಕೊರತೆ ಆಗಿ ರಾಜಕೀಯ ಲಾಭಕ್ಕಾಗಿ ಮಾಡಿದ್ದಾರೆ. ನಾಳೆ ಇವರು ಬಿನ್ ಲಾಡೆನ್ ರೀತಿಯ ಭಯೋತ್ಪಾದಕರನ್ನೂ ಓಲೈಸುವಲ್ಲಿ ಅನುಮಾನವಿಲ್ಲ. ಆ ಕಾಲದಲ್ಲಿ ಬಿನ್ ಲಾಡೆನ್, ಟಿಪ್ಪು ಔರಂಗಜೇಬ್ ಆಗಿದ್ದರು. ಈಗಲೂ ಇವರ ಪರವಾಗಿ ತುಘಲಕ್ ದರ್ಬಾರು ಮಾಡುತ್ತಿದ್ದಾರೆ. 

ಶಿವಮೊಗ್ಗ ಗಲಭೆಯ ನೇರ ಹೊಣೆ ರಾಜ್ಯ ಸರ್ಕಾರ. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಅಸಮರ್ಥ ಗೃಹ ಸಚಿವರು ಖಡ್ಗ ಪ್ರದರ್ಶನ ಮಾಡಿಲ್ಲ ಎಂದು ಹೇಳ್ತಾರೆ. ಇದು ಅವರ ಸರ್ಕಾರದ ಅಸಾಮರ್ಥ್ಯವನ್ನು ಕಾಣಿಸುತ್ತಿದೆ ಎಂದು ಸಿಟಿ ರವಿ ಹೇಳಿದರು.

Stone pelting at Shivamogga CT Ravi Slams incident.