ಬ್ರೇಕಿಂಗ್ ನ್ಯೂಸ್
04-10-23 03:18 pm HK News Desk ಕರ್ನಾಟಕ
ಹಾಸನ, ಅ.4: ಮುಸಲ್ಮಾನರಿಗೆ ಏನೆಲ್ಲ ಸವಲತ್ತು ಇದೆಯೋ ಅದನ್ನು ಕೊಟ್ಟಿದ್ದು ದೇವೇಗೌಡ್ರು. ಅಲ್ಪಸಂಖ್ಯಾತರಿಗೆ ರಿಸರ್ವೇಶನ್ ಕೊಟ್ಟಿದ್ದು ದೇವೇಗೌಡ್ರು. ಈಗ ಜೆಡಿಎಸ್ ಬಗ್ಗೆ ಟೀಕಿಸುವವರು 60 ವರ್ಷದಲ್ಲಿ ಕಾಂಗ್ರೆಸ್ ನೀಡಿರುವ ಕೊಡುಗೆ ಏನೆಂದು ಹೇಳಬೇಕು ಎಂದು ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
2ಎ, 2 ಬಿ, ಕ್ಯಾಟೆಗರಿ - 1 ಮೀಸಲು, ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ದೇವೇಗೌಡ್ರು. ನಮ್ಮನ್ನು ಮುಸ್ಲಿಂ ವಿರೋಧಿಗಳು ಅಂತ ಬಿಂಬಿಸುತ್ತಿದ್ದಾರೆ. ಈಗ ನಾವು ಯಾವ ಪಾರ್ಟಿಗೆ ಹೋದ್ರೂ ಇವರಿಗೇನು ಹೊಟ್ಟೆಉರಿ ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಈ ದುಸ್ಥಿತಿಗೆ ಬರೋದಕ್ಕೆ ಹಲವಾರು ಕಾರಣಗಳಿವೆ. ಗಾಂಧೀಜಿ ಕಟ್ಟಿದಂತಹ ಕಾಂಗ್ರೆಸ್ ಈಗ ಉಳಿದಿಲ್ಲ ಎಂದ ಅವರು, ಈ ರಾಷ್ಟ್ರದಲ್ಲಿ ಪ್ರಧಾನಿ ಹುದ್ದೆಯನ್ನೇ ತೊರೆದು ಬಂದವರು ಯಾರಾದ್ರೂ ಇದ್ರೆ ಅದು ದೇವೇಗೌಡ್ರು ಮಾತ್ರ. ಅವರಿಗೆ ಈಗ ಭಯ ಶುರುವಾಗಿದೆ, ಜನಕ್ಕೆ ಎಷ್ಟು ದಿನ ಸುಳ್ಳನ್ನ ಹೇಳೋದಕ್ಕೆ ಆಗುತ್ತೆ. ಮುಸಲ್ಮಾನರ ಬಗ್ಗೆ ಮತಾಡೋಕ್ಕೆ ಯಾವ ನೈತಿಕತೆ ಇದೆ ಇವರಿಗೆ. ಒಂದಲ್ಲ ಒಂದು ದಿನ ಮುಸ್ಲಿಮರು ಕಾಂಗ್ರೆಸ್ ಅನ್ನ ತಿರಸ್ಕಾರ ಮಾಡೋ ದಿನ ಬಂದೇ ಬರುತ್ತೆ. ಬೆಳಗ್ಗೆ ಎದ್ರೆ ದೇವೇಗೌಡ್ರು, ಕುಮಾರಣ್ಣ ಅಂತಾರೆ. ನಿಮಗ್ಯಾಕ್ರಿ ನಾವ್ ಯಾರ್ ಜೊತೆಯಲ್ಲಾದ್ರೂ ಹೋಗ್ತೇವೆ, ಇವರಿಗ್ಯಾಕ್ರಿ.. ನಿಮ್ಮದು ನೋಡ್ಕಳಿ, ಪಾರ್ಲಿಮೆಂಟ್ ನಲ್ಲಿ 45 ಕ್ಕೆ ಬಂದಿದೆ.
ಹಾಗಾಗಿಯೇ ಈಗ ಎಲ್ಲರನ್ನೂ ಹೋಗಿ ತಬ್ಬಿಕೊಳ್ತಾರೆ. ಅದ್ಯಂತದೋ ಐಎನ್ ಡಿಐಎ ಅಂತಾ ಮಾಡ್ಕೊಂಡಿದ್ದಾರಂತೆ. ಕಾಂಗ್ರೆಸ್ ಮುಖಂಡರಿಗೆ ಮಾನ ಮರ್ಯಾದೆ ಇದ್ರೆ, ಗೌರವ ಇದ್ರೆ ತಾಕತ್ ತೋರಿಸಲಿ. ನಾವು ಯಾರ ಮನೆ ಬಾಗಿಲಿಗೆ ಹೋದ್ರೆ ಇವರಿಗೇನು. ನಾನು ಬದುಕಿರೋವರೆಗೂ ಹಾಸನ ಜಿಲ್ಲೆಯ ಅಲ್ಪಸಂಖ್ಯಾತರ ಜೊತೆ ಇರ್ತೇನೆ.
ಲಿಂಗಾಯತ ನಾಯಕರ ಅಸಮಾಧಾನ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಹಾಸನ ಜಿಲ್ಲೆಯೊಳಗೆ ವೀರಶೈವ ಸಮಾಜಕ್ಕೆ ಕಾಂಗ್ರೆಸ್ ಒಂದೂ ಸೀಟ್ ಕೊಡಲಿಲ್ಲ. ಶಾಮನೂರು ಶಿವಶಂಕರಪ್ಪ ಸುಮ್ಮನೆ ಏನೂ ಇಲ್ಲದೇ ಹೇಳ್ತಾರಾ. ಪಾಪ ಅವರು ಎಷ್ಟು ನೋವನ್ನ ನುಂಗಿಕೊಂಡಿದ್ದಾರೆ. ಅವರು ಮನಸ್ಸು ಮಾಡಿದ್ರೆ ಇಷ್ಟರ ಒಳಗೆ ಕೇಂದ್ರ ಸಚಿವರಾಗ್ತಾ ಇದ್ರು ಎಂದು ಕುಟುಕಿದರು.
It was Deve Gowda who gave muslims whatever privileges they had. It was Deve Gowda who gave reservation to minorities. Those who are criticising the JD(S) now should tell what the contribution of the Congress in the last 60 years is," Revanna said.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm