ಬ್ರೇಕಿಂಗ್ ನ್ಯೂಸ್
04-10-23 05:32 pm Bangalore Correspondent ಕರ್ನಾಟಕ
ಬೆಂಗಳೂರು, ಅ.4: ದೆಹಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿರುವ ಐಸಿಸ್ ಪರ ಕೆಲಸ ಮಾಡುತ್ತಿದ್ದ ಉಗ್ರರು ಕರ್ನಾಟಕ, ಕೇರಳದ ಕರಾವಳಿಯಲ್ಲಿ ನಿಗೂಢ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅಡಗುತಾಣ ರಚಿಸಲು ತಂತ್ರ ಹೂಡಿದ್ದರು ಅನ್ನುವ ವಿಚಾರ ತನಿಖೆಯಲ್ಲಿ ಬಯಲಿಗೆ ಬಂದಿದೆ.
ದೇಶದಲ್ಲಿ ಅತ್ಯಾಧುನಿಕ ಟೆಕ್ನಾಲಜಿ ಬಳಸ್ಕೊಂಡು ವಿಧ್ವಂಸಕ ಕೃತ್ಯ ನಡೆಸೋಕೆ ಪ್ಲಾನ್ ರೂಪಿಸ್ತಿದ್ದ ಮೂವರು ಇಂಜಿನಿಯರಿಂಗ್ ಪದವೀಧರ ಯುವಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಪುಣೆ ಐಸಿಸ್ ಮಾಡ್ಯೂಲ್ ಸಂಬಂಧಿಸಿ ಮೂಲತಃ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ನಿವಾಸಿ ಶಹನವಾಜ್ ಆಲಂ (31), ಲಕ್ನೋ ನಗರದ ಮಹಮ್ಮದ್ ರಿಜ್ವಾನ್ ಅಶ್ರಫ್(28), ಜಾರ್ಖಂಡಿನ ಘರ್ವಾ ಜಿಲ್ಲೆಯ ಮಹಮ್ಮದ್ ಅರ್ಷಾದ್ ವಾರ್ಸಿ(27) ಬಂಧಿತರು. ಇವರು ದೆಹಲಿಯ ಜಾಮಿಯಾ ನಗರದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದರು. ಈ ಮೂವರು ಕೂಡ ಪಾಕಿಸ್ಥಾನದ ಗುಪ್ತಚರ ಏಜನ್ಸಿ ಐಎಸ್ಐ ಸಲಹೆಯಂತೆ ಕೆಲಸ ಮಾಡುತ್ತಿದ್ದರು. ಶಹನವಾಜ್ ಬಳಿಯಿಂದ ಐಇಡಿ ಸ್ಫೋಟಕ ಬಳಸಿ ಬಾಂಬ್ ತಯಾರಿಸುವ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2016ರಲ್ಲಿ ಶಹನವಾಜ್ ಮೊದಲ ಬಾರಿಗೆ ದೆಹಲಿಗೆ ಬಂದಿದ್ದು, ಎಸ್ಎಸ್ ಸಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ. ಈ ವೇಳೆ, ಹಿಜ್ಬುತ್ ತಹ್ರೀರ್ ಸಂಘಟನೆ ಶಹೀನ್ ಬಾಗ್ ನಲ್ಲಿ ನಡೆಸುತ್ತಿದ್ದ ಧಾರ್ಮಿಕ ಉಪನ್ಯಾಸಗಳಿಗೆ ತೆರಳುತ್ತಿದ್ದ. ಇಂಥ ಸಂದರ್ಭದಲ್ಲಿಯೇ ಶಹನವಾಜ್, ರಿಜ್ವಾನ್ ಸಂಪರ್ಕಕ್ಕೆ ಬಂದು ಐಸಿಸ್ ಉಗ್ರವಾದಿ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದ. ಆನಂತರ, ರಿಜ್ವಾನ್ ಮತ್ತು ಶಹನವಾಜ್ ಗೆಳೆಯರಾಗಿದ್ದು, ಐಸಿಸ್ ಉಗ್ರವಾದ ಪರವಾಗಿ ಕೆಲಸದಲ್ಲಿ ತೊಡಗಿದ್ದರು. 2019ರಲ್ಲಿ ಜಾರ್ಖಂಡಿನ ಹಜಾರಿಬಾಗ್ ನಲ್ಲಿ ಶಹನವಾಜ್ ಡಕಾಯಿತಿ ಪ್ರಕರಣದಲ್ಲಿ ಸಿಕ್ಕಿಬಿದ್ದು ಏಳೆಂಟು ತಿಂಗಳು ಜೈಲು ವಾಸವನ್ನೂ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಐಸಿಸ್ ಹ್ಯಾಂಡ್ಲರ್ ಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಶಹನವಾಜ್ ಮತ್ತು ರಿಜ್ವಾನ್ ಕರ್ನಾಟಕದ ಹುಬ್ಬಳ್ಳಿ, ಗೋವಾ, ಮಂಗಳೂರು, ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದರು. ಅಲ್ಲದೆ, ಮುಂಬೈ ಮತ್ತು ಗುಜರಾತಿನ ವಿಐಪಿಗಳನ್ನು ಲಿಸ್ಟ್ ಮಾಡಿಕೊಂಡಿದ್ದರು. ಕರ್ನಾಟಕ ಕರಾವಳಿಯ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಅಡಗು ತಾಣಗಳನ್ನು ಮಾಡಿಕೊಳ್ಳಲು ಪ್ಲಾನ್ ಮಾಡಿದ್ದರು. ಅಲ್ಲದೆ, ಐಇಡಿ ಬಳಸಿ ಬಾಂಬ್ ಗಳನ್ನು ತಯಾರಿಸಿ ಜನನಿಬಿಡ ಸ್ಥಳಗಳಲ್ಲಿ ಸ್ಫೋಟಿಸಲು ಸಂಚು ಹೂಡಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ದೆಹಲಿಯಲ್ಲಿ ಮಾಧ್ಯಮಕ್ಕೆ ನೀಡಿದ್ದಾರೆ.
ಮಹಮ್ಮದ್ ವಾರ್ಸಿ ಕೂಡ ಸಾಮಾನ್ಯ ಕುಟುಂಬಕ್ಕೆ ಸೇರಿದ ಯುವಕನಾಗಿದ್ದು ಜಾರ್ಖಂಡಿನಲ್ಲಿ ಸರಕಾರಿ ಶಾಲೆಯ ಶಿಕ್ಷಕನ ಪುತ್ರ. ಆಲಿಗಢ ಮುಸ್ಲಿಂ ವಿವಿಯಲ್ಲಿ ಕಲಿತಿದ್ದು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಪೂರೈಸಿದ್ದ. ಆನಂತರ ದೆಹಲಿಗೆ ತೆರಳಿ ಅಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಮಾರ್ಕೆಟಿಂಗ್ ವಿಷಯದಲ್ಲಿ ಎಂಬಿಎ ಕಲಿಯಲು ಸೇರಿದ್ದ. ಆಬಳಿಕ ಅದೇ ಕಾಲೇಜಿನಲ್ಲಿ ಇಸ್ಲಾಮಿಕ್ ಪ್ರಿನ್ಸಿಪಲ್ಸ್ ಇನ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪಿಎಚ್ ಡಿ ಮಾಡುತ್ತಿದ್ದ. ಇದಲ್ಲದೆ, ಜಾಮಿಯಾ ನಗರದಲ್ಲಿ ಫಿಸಿಕ್ಸ್ ಕಲಿಸುವ ಉಪನ್ಯಾಸಕನಾಗಿಯೂ ಕೆಲಸ ಮಾಡುತ್ತಿದ್ದ. ಮಕ್ಕಳಿಗೆ ಮನೆಯಲ್ಲೇ ಟ್ಯೂಶನ್ ಅನ್ನೂ ಹೇಳಿಕೊಡುತ್ತಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ರಿಜ್ವಾನ್ ಅಶ್ರಫ್ ಸೌದಿ ಅರೇಬಿಯಾದ ಜೆದ್ದಾ ನಿವಾಸಿಯಾಗಿದ್ದು, ಆತನ ತಂದೆ ಶಿಪ್ಪಿಂಗ್ ಕಂಪನಿಯಲ್ಲಿ ಕ್ಲರ್ಕ್ ಆಗಿದ್ದರು. ಭಾರತಕ್ಕೆ ಬಂದು ಉತ್ತರ ಪ್ರದೇಶದ ಗಾಜಿಯಾಬಾದ್ ಕಾಲೇಜಿನಲ್ಲಿ 2017ರಲ್ಲಿ ಐಟಿಯಲ್ಲಿ ಬಿಟೆಕ್ ಪದವಿ ಪೂರೈಸಿದ್ದ. ನಂತರ ಪ್ರಯಾಗರಾಜ್ ನಲ್ಲಿ ನೆಲೆಸಿ ಅಲ್ಲಿಯೇ ಮದುವೆಯೂ ಆಗಿದ್ದ. ವಿದೇಶದಲ್ಲಿದ್ದಾಗಲೇ ಐಸಿಸ್ ಮೆಂಬರ್ ಆಗಿದ್ದು, ಶಹನವಾಜ್ ಜೊತೆಗೆ ಸಂಪರ್ಕದಲ್ಲಿದ್ದ ಐಸಿಸ್ ವ್ಯಕ್ತಿಯೊಂದಿಗೆ ಈತನಿಗೂ ಸಂಪರ್ಕ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಹನವಾಜ್, ಬಸಂತಿ ಪಟೇಲ್ ಅನ್ನುವ ಗುಜರಾತ್ ಮೂಲದ ಹಿಂದು ಯುವತಿಯನ್ನು ಪ್ರೀತಿಸಿ ದೆಹಲಿಯಲ್ಲಿ ಮದುವೆಯಾಗಿದ್ದು, ಆನಂತರ ಆಕೆಯನ್ನು ಮುಸ್ಲಿಂ ಆಗಿ ಮತಾಂತರ ಮಾಡಿದ್ದ. ಆಕೆ ಮರಿಯಂ ಹೆಸರಿನಲ್ಲಿ ದೆಹಲಿಯಲ್ಲಿ ವಾಸ ಇದ್ದಾಳೆ. ಶಹನವಾಜ್ ಪುಣೆಯ ವಿಶ್ವೇಶ್ವರಯ್ಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದ. ಪುಣೆಯಲ್ಲಿ ಬೈಕ್ ಒಂದನ್ನು ಕದ್ದು ಅದನ್ನು ವಿಧ್ವಂಸಕ ಕೃತ್ಯಕ್ಕೆ ಬಳಸುವ ಸಂಚಿನಲ್ಲಿ ಈತನೂ ಆರೋಪಿಯಾಗಿದ್ದ. ಇವರು ಐಸಿಸ್ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ತಿಳಿದು ಮೂವರ ಬಂಧನಕ್ಕಾಗಿ ಕಳೆದ ಸೆಪ್ಟಂಬರ್ ನಲ್ಲಿ ಸುಳಿವು ಕೊಟ್ಟವರಿಗೆ ತಲಾ 3 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ದೆಹಲಿ ವಿಶೇಷ ಪೊಲೀಸ್ ದಳದ ಕಮಿಷನರ್ ಎಚ್.ಎಸ್ ಧಲೀವಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
The Delhi Police has arrested one of National Investigation Agency’s (NIA’s) most wanted terrorists, Shahnawaz, who is alleged to have links with an ISIS module, officials said on October 2. Shanawaz had escaped from the custody of the Pune Police and was living in Delhi, they said. He carried a reward of ₹3 lakh.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm