ಬ್ರೇಕಿಂಗ್ ನ್ಯೂಸ್
04-10-23 11:13 pm HK News Desk ಕರ್ನಾಟಕ
ಶಿವಮೊಗ್ಗ, ಅ.5: ಶಿವಮೊಗ್ಗ ಘಟನೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ನೀಡಿರುವ ಲೂಸ್ ಟಾಕ್ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿ, ರಾಮಲಿಂಗಾರೆಡ್ಡಿ ಮೊದಲು ಶಿವಮೊಗ್ಗಕ್ಕೆ ಬರಲಿ, ಆಮೇಲೆ ಮಾತಾಡಲಿ. ಹಿಂದುಗಳ ಮನೆಗೆ ಕಲ್ಲೆಸೆದಿದ್ದನ್ನು ತೋರಿಸುತ್ತೇನೆ. ಕತ್ತಲಲ್ಲಿ ಗುಂಡು ಹೊಡೆಯೋದು ಬೇಡ ಎಂದಿದ್ದಾರೆ.
ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಹೊಟ್ಟೆಗೆ ಅನ್ನ ತಿನ್ನುವವರು ಈ ರೀತಿ ಹೇಳಿಕೆ ನೀಡಲ್ಲ.. ರಾಗಿಗುಡ್ಡಕ್ಕೆ ನೀವು ಬನ್ನಿ, ನಿಮ್ಮನ್ನು ನಾವು ಕರೆದುಕೊಂಡು ಹೋಗ್ತೀವಿ. ನಾವು ಏನಾದರೂ ತಪ್ಪು ಮಾಡಿದ್ದೀವಾ, ಅವರು ತಪ್ಪು ಮಾಡಿದ್ದಾರಾ ನೋಡಲಿ. ನಾವು ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡೀರಿ. ಇಲ್ಲದಿದ್ದರೆ ನಾವು ನಿಮ್ಮ ಕಪಾಳಕ್ಕೆ ಹೊಡೆಯುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಗೆ ಅಂತಹ ಸ್ಥಿತಿ ಬಂದಿಲ್ಲ. ಶಿವಮೊಗ್ಗ ಶಾಂತವಾಗಿದೆ ಮತ್ತೆ ಹುಳಿ ಹಿಂಡುವ ಕೆಲಸ ಮಾಡ್ತೀರಾ ನೀವು. ಗೃಹ ಸಚಿವರಾಗಿದ್ದವರು ನೀವು ಸರಿಯಾಗಿ ಮಾತನಾಡಿ. ಕ್ರಮ ಕೈಗೊಳ್ಳುವ ತಾಕತ್ ಇಲ್ವಾ ನಿಮಗೆ. ಎಸ್ ಪಿ ಅವರು ಕ್ರಮ ಕೈಗೊಳ್ಳುತ್ತಾರೆ, ನೀವು ಸುಮ್ಮನಿರಿ. ನಿಮಗೆ ತಾಕತ್ ಇದ್ದರೆ ಶಿವಮೊಗ್ಗಕ್ಕೆ ಬಂದು ಅಲ್ಲಿ ಸ್ಥಳ ಪರಿಶೀಲನೆ ನಡೆಸಿ. ನೀವುಗಳು ಈ ರೀತಿ ಮಾತನಾಡಿದ್ರೆ ಕ್ರಮ ಕೈಗೊಳ್ಳಬೇಕು ಅಂದುಕೊಂಡಿರುವ ಅಧಿಕಾರಿಗಳಿಗೆ ಧೈರ್ಯ ಬರುತ್ತದೆಯೇ. ಮಾನ ಮರ್ಯಾದೆ ಇಟ್ಟುಕೊಂಡು ಮಾತನಾಡಿ ಎಂದಿದ್ದಾರೆ.
ರಾಗಿಗುಡ್ಡವನ್ನೇ ನೋಡಿಲ್ಲ ನೀವು, ಮೊದಲು ರಾಗಿಗುಡ್ಡಕ್ಕೆ ಬಂದು ನೋಡಿ. ಮೊದಲು ರಾಜಕಾರಣ ಮಾಡೋದು ಬಿಡಿ. ಘಟನೆ ಏನಾದರೂ ಉಲ್ಟಾ ಆಗಿದ್ರೆ ಇಷ್ಟೊತ್ತಿಗೆ ಅವರ ಮನೆಗಳಿಗೆ ಪರಿಹಾರದ ಚೆಕ್ ಬಂದು ಬೀಳುತಿತ್ತು. ಅಧಿಕಾರಿಗಳ ಕೈಕಾಲು ಕಟ್ಟಿ ಹಾಕಿದ್ದಾರೆ. ಪ್ರಕರಣ ಮರೆಮಾಚುವ ಸಲುವಾಗಿ ಪುರುಸೊತ್ತಾದಾಗ ಒಂದೊಂದು ಹೇಳಿಕೆ ಕೊಡ್ತೀರಾ ಎಂದು ಕಿಡಿಕಾರಿದರು.
Shivamogga Row, MLA Channabasappa slams after Transport Minister Ramalinga Reddy on Wednesday accused the Opposition BJP and its workers of indulging in “troublesome acts in disguise” and alleged that they instigate communal violence in the State.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm