ಬ್ರೇಕಿಂಗ್ ನ್ಯೂಸ್
11-10-23 11:37 am Bangalore Correspondent ಕರ್ನಾಟಕ
ಬೆಂಗಳೂರು, ಅ.11: ಮಾಂಸಹಾರಿ ಹಾಗೂ ಬಿರಿಯಾನಿ ಹೊಟೇಲ್‌ಗಳ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚನೆ ಮಾಡುತ್ತಿದ್ದ ಒಟ್ಟು ಏಳು ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಹೊಟೇಲ್ ಮಾಲೀಕನ ಬಳಿ 1.47 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಆ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೋಟೆಲ್ ಮಾಲೀಕ ಸರಕು ಮತ್ತು ಸೇವಾ ತೆರಿಗೆ ವಂಚನೆ ಮಾಡ್ತಿದ್ದ ಎಂದು ತಿಳಿದು ಬಂದಿದ್ದು, ಆತನ ಮನೆಯನ್ನು ಶೋಧನೆ ಮಾಡುವ ವೇಳೆ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.
ಹೊಸಕೋಟೆ ಬಳಿಯ ಕೆಲವು ಹೊಟೇಲ್ ಮಾಲೀಕರು ಜಿಎಸ್ ಟಿ ವಂಚನೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ 50ಕ್ಕೂ ಹೆಚ್ಚು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಕ್ಷಯ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ, ಮಣಿ ಧಮ್ ಬಿರಿಯಾನಿ, ಆನಂದ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಶೋಧ ನಡೆಸಿದರು.
ಮಾಂಸಹಾರಿ ಹಾಗೂ ಬಿರಿಯಾನಿ ಹೊಟೇಲ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಹೋಟೆಲ್‌ಗಳ ಮಾಲೀಕರು ಯುಪಿಐ ಪಾವತಿ ಖಾತೆಗಳನ್ನು ಬದಲಾಯಿಸಿ ವಹಿವಾಟು ನಡೆಸ್ತಿದ್ರು. ಈ ಮೂಲಕ ತೆರಿಗೆ ವಂಚನೆ ಮಾಡುತ್ತಿದ್ರು. ಒಬ್ಬ ಹೋಟೆಲ್ ಮಾಲೀಕ 30 QR ಕೋಡ್ ಹೊಂದಿದ್ದ. ಹೊಟೇಲ್ ಮಾರಾಟ ವಹಿವಾಟಿನ ಸರಿಯಾದ ಲೆಕ್ಕಪತ್ರ ಕೂಡಾ ನಿರ್ವಹಿಸ್ತಿರಲಿಲ್ಲ. ಬಿಲ್ ಗಳನ್ನು ಸರಿಯಾಗಿ ನೀಡದೆ ತೆರಿಗೆ ವಂಚನೆ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಈ ಹೋಟೆಲ್‌ಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಯಾವಾಗ್ಲೂ ಇಲ್ಲಿ ಗ್ರಾಹಕರ ರಷ್ ಇರುತ್ತದೆ. ಹೀಗಾಗಿ ತೆರಿಗೆ ಸರಿಯಾಗಿ ಪಾವತಿಸದೆ ವಂಚನೆ ಮಾಡುತ್ತಿದ್ದರು. ಈ ಹಿನ್ನೆಲೆವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ರಾಜ್ ಧಮ್ ಬಿರಿಯಾನಿ ಮಾಲೀಕ ಶ್ರೀನಿವಾಸ್ ಹಾಗೂ ರಾಜ್‌ನನ್ನು ವಶಕ್ಕೆ ಪಡೆದು 1 ಕೋಟಿ 40 ಲಕ್ಷ ರೂಪಾಯಿ ನಗದನ್ನು ಸೀಜ್ ಮಾಡಿದ್ದಾರೆ.
ತೆರಿಗೆ ವಂಚನೆ ಮಾಡುತ್ತಿದ್ದ ಒಟ್ಟು ಏಳು ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ತೆರಿಗೆ ಪಾವತಿಸದೆ ವಂಚನೆ ಮಾಡಿದ ಹೋಟೆಲ್‌ಗಳ ಮಾಲೀಕರ ಮೇಲೆ ಪ್ರಕರಣದ ದಾಖಲಾಗಿದೆ.
ಆಗಾಗ್ಗೆ ಯುಪಿಐ ಖಾತೆ ಬದಲಾವಣೆ ;
ಆಗಾಗ್ಗೆ ಯುಪಿಐ ಖಾತೆಗಳನ್ನು ಬದಲಾಯಿಸುತ್ತಿದ್ದಾರೆ. ನಿಜವಾದ ಜಿಎಸ್‌ಟಿ ವಹಿವಾಟುಗಳನ್ನು ಮರೆಮಾಚಲು ಮತ್ತು ತೆರಿಗೆ ವಂಚಿಸಲು ಈ ತಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಈ ಹೋಟೆಲ್‌ನವರು ತಮ್ಮ ಆಹಾರ ಪದಾರ್ಥಗಳಿಗೆ ತೆರಿಗೆ ಇನ್‌ವಾಯ್ಸ್ ಮತ್ತು ಮಾರಾಟದ ಬಿಲ್‌ಗಳನ್ನು ನೀಡುತ್ತಿಲ್ಲ ಹಾಗೂ ಸರಿಯಾದ ಲೆಕ್ಕಪತ್ರ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ. ಇಲಾಖೆಯು ತೆರಿಗೆ ವಂಚಕರು ಅಳವಡಿಸಿಕೊಂಡ ಹಲವು ವಿಧಾನಗಳನ್ನು ನಿರಂತರವಾಗಿ ವಿಶ್ಲೇಷಿಸುವ ಮತ್ತು ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವತ್ತ ಗಮನ ಹರಿಸುತ್ತಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಅನೇಕ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ, ಸರಿಯಾದ ಲೆಕ್ಕಪತ್ರವಿಲ್ಲದೆ ವಿವಿಧ ಖಾತೆಗಳಿಗೆ ಠೇವಣಿಗಳ ಮೂಲಕ ತೆರಿಗೆ ವಂಚನೆಯನ್ನು ಒಳಗೊಂಡಿರುವ ಅನುಮಾನಾಸ್ಪದ ವಹಿವಾಟುಗಳು ನಡೆದಿವೆ ಎಂದು ತಿಳಿಸಿದರು.
Bangalore Hosakote, Biriyani Hotels raided by Income tax, 1.5 crore cash seized from Raj Dum Biryani, gst fraud exposed.
13-02-25 07:28 pm
HK News Desk
ಜನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ...
13-02-25 05:05 pm
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಸುಳಿವು ಕೊಟ...
12-02-25 12:55 pm
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 09:40 pm
Mangalore Correspondent
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
13-02-25 10:20 pm
Mangalore Correspondent
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm
Honor killing Bangalore, Daughter killed, Cri...
12-02-25 06:23 pm