ಬ್ರೇಕಿಂಗ್ ನ್ಯೂಸ್
11-10-23 10:54 pm Bangalore Correspondent ಕರ್ನಾಟಕ
ಬೆಂಗಳೂರು, ಅ.11: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ತಡೆಹಿಡಿದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕ ಮುನಿರತ್ನ ಡಿಸಿಎಂ ಡಿಕೆಶಿ ಕಾಲಿಗೆ ಬಿದ್ದು ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸಿಗರು ತನ್ನ ಕ್ಷೇತ್ರಕ್ಕೆ ಬಿಡುಗಡೆಯಾದ 126 ಕೋಟಿ ಅನುದಾನ ತಡೆಹಿಡಿದಿದ್ದಾರೆ ಎಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಮುನಿರತ್ನ ಬುಧವಾರ ಧರಣಿ ನಡೆಸಿದ್ದರು. ಈ ವೇಳೆ ಅವರ ಜೊತೆಗಿದ್ದ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿಯಂತೆ ಪ್ರತಿಭಟನೆ ನಿಲ್ಲಿಸಿದ ಮುನಿರತ್ನ ನೇರವಾಗಿ ಅರಮನೆ ಮೈದಾನಕ್ಕೆ ತೆರಳಿದರು.

ಬುಧವಾರ ಬೆಂಗಳೂರು ಕಂಬಳ ವಿಚಾರವಾಗಿ ಅರಮನೆ ಮೈದಾನದಲ್ಲಿ ಸಿದ್ದತಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಆಗಮಿಸಿದ್ದರು. ಇದೇ ವೇಳೆ, ಅರಮನೆ ಮೈದಾನಕ್ಕೆ ಆಗಮಿಸಿದ ಮುನಿರತ್ನ ವೇದಿಕೆಯ ಕೆಳಗೆ ಕುಳಿತುಕೊಂಡಿದ್ದರು. ಸ್ಥಳಕ್ಕೆ ಮುನಿರತ್ನ ಆಗಮಿಸಿದ್ದರಿಂದ ಮತ್ತೊಂದು ಹೈಡ್ರಾಮಾ ಮಾಡುತ್ತಾರೆಂದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವೇದಿಕೆಯಲ್ಲಿ ತಮ್ಮ ಭಾಷಣದ ನಡುವೆ ಮುನಿರತ್ನ ಅವರನ್ನು ಕೆಣಕಿದ ಡಿಕೆಶಿ, ಯಾರೋ ಡ್ರಾಮಾ ಮಾಡಲು ಬಂದಿದ್ದಾರೆ. ಡ್ರಾಮಾ ನೋಡೋಣ, ಅಶ್ವತ್ಥ ನಾರಾಯಣ ಅವರೇ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ. ಕಾರ್ಯಕ್ರಮಕ್ಕೆ ತೊಂದರೆ ಆಗೋದು ಬೇಡ ಎಂದು ತಿರುಗೇಟು ನೀಡಿದರು.
ಬಿಎಸ್‌ವೈ ಸೂಚನೆಯಂತೆ ಮುನಿರತ್ನ ಉಪವಾಸ ಸತ್ಯಾಗ್ರಹ ಕೈಬಿಟ್ಟು ಅರಮನೆ ಮೈದಾನಕ್ಕೆ ತೆರಳಿ ಅನುದಾನ ಬಿಡುಗಡೆ ಮಾಡುವಂತೆ ಡಿಕೆಶಿಗೆ ಮನವಿ ಪತ್ರ ಸಲ್ಲಿಸಿದರು.
BJP MLA Munirathna Naidu on Wednesday ended a hunger strike launched against Karnataka Deputy Chief Minister D. K. Shivakumar and his brother Congress MP D. K. Suresh for pursuing "hate politics" and "withdrawing" funds allotted to his constituency.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm