KS Eshwarappa sparks controversy: ಮುಸ್ಲಿಮರಿಗೆ ಸಿದ್ದರಾಮಯ್ಯನವರ ರಕ್ಷಣೆಯಿದೆ ; ನಮ್ಮ ಸಮಾಜದವರನ್ನು ಮುಟ್ಟಿದ್ರೆ ಅದೇ ಆಯುಧದಿಂದ ಉತ್ತರ ಕೊಡೋಣ, ಕನಿಷ್ಠ ಐದು ಮಕ್ಕಳಾದರೂ ಮಾಡಿಕೊಳ್ಳಿ, ಈಶ್ವರಪ್ಪ ಚಾಟಿ ! 

12-10-23 04:11 pm       HK News Desk   ಕರ್ನಾಟಕ

ರಾಜ್ಯದ ಕುತಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯೆ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೆ? ಈ ದೇಶದ ದೇಶದ್ರೋಹಿ ಮುಸಲ್ಮಾನರು ಅಖಂಡ ಭಾರತದ ಭೂಪಟಕ್ಕೆ ಹಸಿರು ಬಣ್ಣ ಬಳಿದಿದ್ದಾರೆ.

ಶಿವಮೊಗ್ಗ, ಅ.12: ರಾಜ್ಯದ ಕುತಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯೆ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೆ? ಈ ದೇಶದ ದೇಶದ್ರೋಹಿ ಮುಸಲ್ಮಾನರು ಅಖಂಡ ಭಾರತದ ಭೂಪಟಕ್ಕೆ ಹಸಿರು ಬಣ್ಣ ಬಳಿದಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ತಾಕತ್ತಿದ್ದರೆ ನಿಮಗೆ ಹಸಿರು ಬೇಕೋ ಏನು ಆರಿಸಿಕೊಳ್ಳಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹೇಡಿ ಹಿಂದೂ ಸಿದ್ದರಾಮಯ್ಯ. ರಾಷ್ಟ್ರ ಭಕ್ತ ಹಿಂದೂಗಳ ರಕ್ಷಣೆ ಇವರ ಕೈಯಲ್ಲಿ ಆಗುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ತರಲು ಹೊರಟರೆ ಕಾಂಗ್ರೆಸ್ ಒಪ್ಪುವುದಿಲ್ಲವಂತೆ. ಈ ಕಾನೂನು ಒಪ್ಪುವುದಾದರೇ ಇಲ್ಲಿ ಇರಿ, ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದರು.

Siddaramaiah top contender for CM post in Karnataka | Karnataka Election  News - Times of India

ಲಾಂಗು, ಮಚ್ಚು ತೋರಿಸಿದವರ ಎಷ್ಟು ಜನರ ಮೇಲೆ ಕೇಸ್ ಹಾಕಿದ್ದಿರಿ? ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರಿ ನಾರ್ಮದಾಗಳು ನೀವು. ಮುಸ್ಲಿಮರಿಗೆ ಸಿದ್ದರಾಮಯ್ಯನವರ ರಕ್ಷಣೆಯಿದೆ. ಡಿಸಿ, ಎಸ್ಪಿ ಅವರೇ ಎಷ್ಟು ದಿನ ಕಾಂಗ್ರೆಸ್ ನ ಗುಲಾಮರಾಗುತ್ತಿರಿ? ಹರ್ಷನ ಕೊಲೆಯಾದಾಗ ನಾವು ಸಹ ಲಾಂಗು ಮಚ್ಚು ಹಿಡಿದಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡಿದು ಹಾಕುವಂತೆ ಹಾಕುತ್ತಿದ್ದೆವು, ಆದರೆ ನಾವು ಅದನ್ನು ಮಾಡಲಿಲ್ಲ. ಓಂ ಚಿತ್ರವನ್ನು ಸಿದ್ದರಾಮಯ್ಯನವರಿಗೆ ತೋರಿಸಬೇಕು. ಶಾಂತಿಯಿಂದ ಸಭೆ ಮಾಡುತ್ತಿದ್ದೇವೆ ಎಂದರು

ನಮ್ಮ ಸಮಾಜದವರನ್ನು ಮುಟ್ಟಿದರೆ ಅದೇ ಆಯುಧದಿಂದ ಉತ್ತರ ಕೊಡೋಣ. ಮುಸ್ಲಿಂ ಗೂಂಡಾಗಳು ಹರ್ಷನ ಕೊಲೆ ಮಾಡಿದ್ದಾರೆ. ನಿಮ್ಮ ಮಗ ಯತೀಂದ್ರನಿಗೆ ಕೊಲೆ ಮಾಡಿದ್ದರೆ ನಿಮಗೆ ಏನು ಅನಿಸುತ್ತಿತ್ತು? ಡಿಕೆ ಶಿವಕುಮಾರ್ ನಿಮ್ಮ ತಮ್ಮನನ್ನು ಮುಸ್ಲಿಮರು ಕೊಲೆ ಮಾಡಿದ್ದರೆ ಏನು ಅನಿಸುತ್ತಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.

ಕನಿಷ್ಠ ಐದು ಮಕ್ಕಳಾದರೂ ಮಾಡಿಕೊಳ್ಳಿ. ನನಗೆ ಐದು ಮಕ್ಕಳು, ಎಂಟು ಮೊಮ್ಮಕ್ಕಳು. ನೀವು ಅಷ್ಟಾದರೂ ಮಾಡಿಕೊಳ್ಳಿ ಎಂದು ಈಶ್ವರಪ್ಪ ಹೇಳಿದರು.

PM Modi gives 'skilling, reskilling, upskilling' mantra to youth | Mint

ಮತ್ತೊಮ್ಮೆ ರಾಘಣ್ಣ ಸಂಸದರಾಗುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಹಿಂದೂ ಸಮಾಜ ರಕ್ಷಣೆ ಮಾಡುವ ಸರ್ಕಾರ ಬರುತ್ತದೆ. ಪ್ರತಿಬೂತ್ ನಲ್ಲಿ ಪ್ರಧಾನಿ ನೆನಪು ಮಾಡಬೇಕು. ರಾಘವೇಂದ್ರ ಎಂಪಿ ಆಗುವ ಮುಂಚೆ ಶಿವಮೊಗ್ಗ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ನೋಡಿ. ನಮ್ಮ ಜಿಲ್ಲೆ ಅಭಿವೃದ್ಧಿ ಹೇಗಾಗಿದೆ ಎಂದು ಅವರ ಪಕ್ಷದವರೇ ಹೇಳುತ್ತಾರೆ. ಅಖಂಡ ಭಾರತ ಜೊತೆಗೆ ಕೇಸರಿ ಭಾರತ ಮಾಡೋಣ. ಸಿದ್ದರಾಮಯ್ಯ ಕಿವುಡ, ಅವನಿಗೆ ಕೇಳಿಸುವ ಹಾಗೆ ಘೋಷಣೆ ಕೂಗಿ ಎಂದು ಏಕವಚನದಲ್ಲಿ ಟೀಕಿಸಿದರು.

KS Eshwarappa sparks controversy in Shivamogga, says make 5 children atleast for Hindu religion protection. Just as Muslims make more children even Hindus must make so. Says we must carry weapons if any Muslim touches us. Cm Siddaramaiah is in favour of only Muslims he added.