Mysuru Dasara, Bus Fare hike; ದಸರಾ ರಜೆ ಹಿನ್ನೆಲೆ ; ಖಾಸಗಿ ಬಸ್ ಗಳಲ್ಲಿ ದರ ದುಪ್ಪಟ್ಟು, ಜನರಿಗೆ ಬಿಗ್ ಶಾಕ್ ಕೊಟ್ಟ ಖಾಸಗಿ ಬಸ್ ಮಾಲೀಕರು

15-10-23 02:40 pm       Bengaluru Correspondent   ಕರ್ನಾಟಕ

ಮೈಸೂರು ದಸರಾ ಸೇರಿದಂತೆ ರಾಜ್ಯದೆಲ್ಲೆಡೆ ನವರಾತ್ರಿ ಉತ್ಸವ ಆರಂಭಗೊಂಡಿದೆ. ಶಾಲೆಗಳಿಗೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟ ಉದ್ಯೋಗಿಗಳು, ಪ್ರವಾಸ ತೆರಳುವ ಜನರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ.‌

ಬೆಂಗಳೂರು, ಅ.15: ಮೈಸೂರು ದಸರಾ ಸೇರಿದಂತೆ ರಾಜ್ಯದೆಲ್ಲೆಡೆ ನವರಾತ್ರಿ ಉತ್ಸವ ಆರಂಭಗೊಂಡಿದೆ. ಶಾಲೆಗಳಿಗೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟ ಉದ್ಯೋಗಿಗಳು, ಪ್ರವಾಸ ತೆರಳುವ ಜನರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ.‌

ದಸರಾ ರಜೆಯ ಮಜಾ ಅನುಭವಿಸಲು ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ರಾಜ್ಯದ ನಾನಾ ಕಡೆಗಳಿಗೆ ತೆರಳುವ ಖಾಸಗಿ ಬಸ್​ಗಳ ದರ ದುಪ್ಪಟ್ಟಾಗಿದೆ.

ಈಗಾಗಲೇ ಶಾಲಾ ಮಕ್ಕಳಿಗೆ ದಸರಾ ರಜೆ ಸಿಕ್ಕಿದೆ‌. ಅ.21ರಿಂದ ಸರ್ಕಾರಿ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. 20ರಂದು ಊರಿಗೆ ತೆರಳಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದರೆ ಟಿಕೆಟ್ ದರ ಕೇಳಿ ಪ್ರಯಾಣಿಕರು ಶಾಕ್ ಆಗಿದ್ದಾರೆ.

ಬೆಂಗಳೂರು - ಶಿವಮೊಗ್ಗಕ್ಕೆ 1150 ರೂ.ನಿಂದ 1400 ರೂ.ಗೆ ಏರಿಸಲಾಗಿದೆ. ಬೆಂಗಳೂರು- ಹುಬ್ಬಳ್ಳಿ ನಡುವೆ 1600- 1850 ರೂ. ಬೆಂಗಳೂರು- ಮಂಗಳೂರು 1600ರಿಂದ 2000 ರೂ.ಗೆ ಏರಿಸಿದ್ದಾರೆ. ಬೆಂಗಳೂರು - ಉಡುಪಿ ನಡುವೆ 1600ರಿಂದ 1900 ರೂ.ಗೆ ಧರಿಸಿದ್ದು  ಬೆಂಗಳೂರು- ಬೆಳಗಾವಿ ಮಧ್ಯೆ 1500-2100 ರೂ.ಗೆ ಏರಿಕೆಯಾಗಿದೆ.

Mysuru dasara effect private buses shock public by increasing bus fare