ಬ್ರೇಕಿಂಗ್ ನ್ಯೂಸ್
16-10-23 04:55 pm Bangalore Correspondent ಕರ್ನಾಟಕ
ಬೆಂಗಳೂರು, ಅ.16: ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಬೆಂಬಲಿಸಲ್ಲ. ಕಾಂಗ್ರೆಸ್ ಗೆ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಾಯಕತ್ವದ ನಿರ್ಧಾರದಿಂದ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಒಂದಷ್ಟು ಶಾಸಕರು ಮತ್ತು ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಒರಿಜಿನಲ್ ನಮ್ಮದೇ , ನಾವು ಬಿಜೆಪಿಗೆ ಸಪೋರ್ಟ್ ಮಾಡಲ್ಲ. ನಾವು ಕಾಂಗ್ರೆಸ್ ಗೆ ಬೆಂಬಲ ನೀಡುತ್ತೇವೆ ಎಂದು ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದು ರಾಜಕೀಯದಲ್ಲಿ ಮತ್ತೆ ಸಂಚಲನ ಎಬ್ಬಿಸಿದೆ. ಹಲವಾರು ಎಂಎಲ್ ಗಳು ನನ್ನ ಜೊತೆ ಇದ್ದಾರೆ, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ, ಇದಕ್ಕಾಗಿ ನಾನು ಪ್ರತ್ಯೇಕವಾಗಿ ಕೋರ್ ಕಮಿಟಿ ರಚನೆ ಮಾಡುತ್ತೇನೆ ಎಂದು ಹೇಳಿದ್ದು ಜೆಡಿಎಸ್ ಒಡೆಯುವ ಸೂಚನೆ ನೀಡಿದ್ದಾರೆ. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ನೇರವಾಗಿ ಸೆಡ್ಡು ಹೊಡೆದಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಎನ್ ಡಿಎ ಮೈತ್ರಿಕೂಟ ಸೇರುವುದಾಗಿ ಇತ್ತೀಚೆಗೆ ಎಚ್.ಡಿ ಕುಮಾರಸ್ವಾಮಿ ಮತ್ತು ದೇವೇಗೌಡರು ಹೇಳಿದ್ದರು. ತನ್ನನ್ನು ದೂರ ಇಟ್ಟು ಮೈತ್ರಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದರು. ಅಲ್ಲದೆ, ನನಗೆ ಕಾಂಗ್ರೆಸ್ ಹೈಕಮಾಂಡ್, ಎಎಪಿ, ಎನ್ ಸಿ ಪಿ ಪಕ್ಷಗಳಿಂದ ಕರೆಗಳು ಬಂದಿವೆ ಎಂದು ಇಬ್ರಾಹಿಂ ಹೇಳಿಕೊಂಡಿದ್ದರು. ಇದೀಗ ಕಾಂಗ್ರೆಸ್ ಪರವಾಗಿ ಇಬ್ರಾಹಿಂ ಹೇಳಿಕೆ ನೀಡಿದ್ದು, ತನ್ನ ಬೆಂಬಲಿಗರ ಜೊತೆಗೆ ಕಾಂಗ್ರೆಸ್ ಸೇರುತ್ತಾರೆಯೇ ಜೆಡಿಎಸ್ ಪಕ್ಷವನ್ನೇ ಒಡೆಯುತ್ತಾರೆಯೇ ಎಂಬ ಕುತೂಹಲ ಮೂಡಿಸಿದೆ.
"We will not support the BJP in the Lok Sabha elections. JD(S) state president C M Ibrahim has said that he will support the Congress. The JD(S) state president, who is unhappy with the party leadership's decision to ally with the BJP ahead of the Lok Sabha elections, made the remarks after holding a meeting with some MLAs and leaders.
13-02-25 07:28 pm
HK News Desk
ಜನಪದ ಹಾಡುಗಾರ್ತಿ, ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ...
13-02-25 05:05 pm
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಸುಳಿವು ಕೊಟ...
12-02-25 12:55 pm
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 09:40 pm
Mangalore Correspondent
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
13-02-25 10:20 pm
Mangalore Correspondent
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm
Honor killing Bangalore, Daughter killed, Cri...
12-02-25 06:23 pm