Police constable arrested in Bangalore, robbery case: ಖಾಲಿ ಮನೆಗಳ ಬಗ್ಗೆ ಮಾಹಿತಿ ಕೊಟ್ಟು ಕಳ್ಳತನ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ !  ಕಳ್ಳನತನದಲ್ಲೂ ಪಾಲು ಪಡೀತಿದ್ದ ಕಂತ್ರಿ ಅರೆಸ್ಟ್

17-10-23 02:03 pm       Bangalore Correspondent   ಕರ್ನಾಟಕ

ಖಾಲಿ ಮನೆಗಳ ಬಗ್ಗೆ ಕಳ್ಳರಿಗೆ ಮಾಹಿತಿ ಕೊಟ್ಟು ಪೊಲೀಸ್ ಸಿಬಂದಿಯೇ ಮನೆಗಳ್ಳತನ ಮಾಡಿಸುತ್ತಿದ್ದ ಕೃತ್ಯವನ್ನು ಜ್ಞಾನಭಾರತಿ ಪೊಲೀಸರು ಪತ್ತೆ ಮಾಡಿದ್ದು ಪ್ರಕರಣ ಸಂಬಂಧ ಪೊಲೀಸ್ ಕಾನ್ ಸ್ಟೇಬಲ್ ಒಬ್ಬಾತನನ್ನು ಬಂಧಿಸಿದ್ದಾರೆ. 

ಬೆಂಗಳೂರು, ಅ.17: ಖಾಲಿ ಮನೆಗಳ ಬಗ್ಗೆ ಕಳ್ಳರಿಗೆ ಮಾಹಿತಿ ಕೊಟ್ಟು ಪೊಲೀಸ್ ಸಿಬಂದಿಯೇ ಮನೆಗಳ್ಳತನ ಮಾಡಿಸುತ್ತಿದ್ದ ಕೃತ್ಯವನ್ನು ಜ್ಞಾನಭಾರತಿ ಪೊಲೀಸರು ಪತ್ತೆ ಮಾಡಿದ್ದು ಪ್ರಕರಣ ಸಂಬಂಧ ಪೊಲೀಸ್ ಕಾನ್ ಸ್ಟೇಬಲ್ ಒಬ್ಬಾತನನ್ನು ಬಂಧಿಸಿದ್ದಾರೆ. 

ಕುಖ್ಯಾತ ಆರೋಪಿಗಳ ಜೊತೆ ಸೇರಿ ಮನೆಗಳ್ಳತನ ಮಾಡಿಸುತ್ತಿದ್ದ ಆರೋಪದಲ್ಲಿ ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಯಲ್ಲಪ್ಪ ಬಂಧನಕ್ಕೀಡಾಗಿದ್ದಾನೆ. ಚಂದ್ರಾಲೇ ಔಟ್, ಚಿಕ್ಕಜಾಲ, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಪೇದೆ ಯಲ್ಲಪ್ಪ ಕೈವಾಡ ಇರುವುದು ಪತ್ತೆಯಾಗಿತ್ತು.‌ ಖಾಲಿ ಮನೆಗಳು, ಒಂಟಿಯಾಗಿ ವಾಸವಿರುವ ವ್ಯಕ್ತಿಗಳ ಬಗ್ಗೆ ಕಳ್ಳರಿಗೆ ಮಾಹಿತಿ ನೀಡಿ ಅವರಿಂದಲೇ ಕಳವು ಕೃತ್ಯ ಮಾಡಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಕಳವುಗೈದ ಸೊತ್ತಿನಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದ. 

ಇತ್ತೀಚೆಗಷ್ಟೇ ದೇವನಹಳ್ಳಿ ಠಾಣೆಗೆ ವರ್ಗಾವಣೆಗೊಂಡಿದ್ದ ಕಾನ್ಸ್‌ಟೇಬಲ್ ಯಲ್ಲಪ್ಪನ ಬಗ್ಗೆ ಪೊಲೀಸ್ ತನಿಖೆಯಲ್ಲಿ ಶಂಕೆ ಕಂಡುಬಂದಿತ್ತು. ‌ಕಳವು ಪ್ರಕರಣದ ಆರೋಪಿಗಳ ತನಿಖೆಯ ವೇಳೆ ಯಲ್ಲಪ್ಪನ ಜೊತೆಗೆ ಸಂಪರ್ಕ ಇರುವುದು ತಿಳಿದ ಜ್ಞಾನಭಾರತಿ ಪೊಲೀಸರು ಪೊಲೀಸ್ ಕಾನ್ ಸ್ಟೇಬಲ್ ನನ್ನು ಬಂಧಿಸಿದ್ದಾರೆ.

Police constable Yalappa from Devanahalli police station arrested in Bangalore for involving with robbers to rob houses in city. Three cases of robbery was registered at Jnanabharathi Police Station limits.