CM Ibrahim, Revanna: ಸಿಎಂ ಇಬ್ರಾಹಿಂ ಸಡ್ಡು ; ಇದೆಲ್ಲ ಕಾಂಗ್ರೆಸ್ ಕುತಂತ್ರ, ಅದ್ಕೆಲ್ಲ ಹೆದರೋಲ್ಲ.. 60 ವರ್ಷ ಕಾಂಗ್ರೆಸ್ ನಂಬಿ ಏನಾಯ್ತು? ಮತ್ತೆ ಅಲ್ಲೇ ಬೀಳ್ತೀವಿ ಅಂದ್ರೆ ನಮ್ಮ ಅಭ್ಯಂತರ ಇಲ್ಲ.. ರೇವಣ್ಣ ಗುಟುರು 

17-10-23 10:31 pm       HK News Desk   ಕರ್ನಾಟಕ

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಮ್ಮದೇ ಒರಿಜಿನಲ್‌ ಜೆಡಿಎಸ್ ಎಂಬ ಹೇಳಿಕೆಯ ಬಗ್ಗೆ ಹಾಸನದಲ್ಲಿ ಮಾಜಿ‌ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

ಹಾಸನ, ಅ.17: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಮ್ಮದೇ ಒರಿಜಿನಲ್‌ ಜೆಡಿಎಸ್ ಎಂಬ ಹೇಳಿಕೆಯ ಬಗ್ಗೆ ಹಾಸನದಲ್ಲಿ ಮಾಜಿ‌ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. ‌ಮೈತ್ರಿ ವಿಚಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ್ರು ತೀರ್ಮಾನ ಮಾಡುತ್ತಾರೆ, ಇವರೆಲ್ಲ ಯಾಕೆ ತಲೆಕೆಡಿಸ್ತಾರೆ ಎಂದು ಕುಟುಕಿದ್ದಾರೆ. 

ಅದೆಲ್ಲಾ ದೇವೇಗೌಡ್ರು ಕೂತ್ಕೊಂಡು ತೀರ್ಮಾನ ಮಾಡ್ತಾರೆ ತಲೆ ಯಾಕೆ ಕೆಡಿಸಿಕೊಳ್ತೀರಿ.‌ ಇಬ್ರಾಹಿಂ ಕರೆದ ಸಭೆಯಲ್ಲಿ ಯಾರಿದ್ರು ನೋಡಿದ್ದೀರಾ. ಯಾವ ಶಾಸಕರು ಹೋಗಿದ್ದಾರೆ, ಸಮಾನ ಮನಸ್ಕರು ಯಾಕೆ ಹೋಗಲಿಲ್ಲ. ಆ ಜೆ.ಹೆಚ್ ಪಟೇಲ್ ಮಗನನ್ನ ಕೂರಿಸಿಕೊಂಡು ಸಭೆ ಮಾಡಿದ್ರೆ ಆಗುತ್ತೇನ್ರಿ.. ಅದೆಲ್ಲಾ ರಾಷ್ಟ್ರೀಯ ಅಧ್ಯಕ್ಷರು ದೇವೇಗೌಡ್ರು ಇದ್ದಾರೆ ಮಾಡ್ತಾರೆ. 

JD(S) state president CM Ibrahim offers support to ruling Congress party

ನಾನು ಅವರಿಗೆ ಬುದ್ದಿವಾದ ಹೇಳೋದು ಇಷ್ಟೆನೇ. ದೇವೇಗೌಡ್ರು ಕಾಂಗ್ರೆಸ್ ನವರನ್ನ ನಂಬಿ 60 ವರ್ಷ ಏನಾಯ್ತು ಅಂತಾ ಗೊತ್ತಿದೆ. ನೀವು ಮತ್ತೆ ಅಲ್ಲಿಗೆ ಹೋಗಿ ಬೀಳ್ತೀವಿ ಅಂದ್ರೆ ನಮ್ಮದೇನು ಅಭ್ಯಂತರವಿಲ್ಲ. ಕಾಂಗ್ರೆಸ್ ನವರು ಈ ರಾಷ್ಟ್ರದಲ್ಲಿ ಕೋಮುವಾದಿಗಳನ್ನ ದೂರ ಇಡಬೇಕು ಅಂತಾರೆ. ಕಷ್ಟ ಬಂದಾಗ ಕಾಲು ಹಿಡಿತಾರೆ. ಪ್ರಧಾನಮಂತ್ರಿ ಹುದ್ದೆ ಹೇಗೆ ತೆಗೆದ್ರು, ದೇವೇಗೌಡ್ರನ್ನ ಹೇಗೆ ಸೋಲಿಸಿದ್ರು. ಕುಮಾರಸ್ವಾಮಿ ಮಗನನ್ನ ಹೆಂಗೆ ಸೋಲಿಸಿದ್ರು ಎಲ್ಲ ಜನರಿಗೆ ಗೊತ್ತಿದೆ. 

JD(S) will contest 2024 Lok Sabha polls on its own, says Deve Gowda |  Latest News India - Hindustan Times

ಕೋಮುವಾದಿ ದೂರ ಇಡಬೇಕು ಅಂತಾನೆ ತಾನೆ ಆಗ ಕಾಂಗ್ರೆಸ್ ಗೆ ಹೋಗಿದ್ದು. ಕುಮಾರಸ್ವಾಮಿ ಸರ್ಕಾರವನ್ನ 14 ತಿಂಗಳಲ್ಲಿ ಇವರು ತೆಗೆದಿದ್ದು ಹೇಗೆ ಗೊತ್ತಲ್ಲ. ಇಂತಹವರ ಜೊತೆ ಹೋಗ್ತೀನಿ ಅಂದ್ರೆ ಸಂತೋಷ ಎಂದರು ರೇವಣ್ಣ. ಪಕ್ಷ ಇಬ್ಭಾಗ ಆಗುತ್ತಾ ಎಂಬ ಪ್ರಶ್ನೆಗೆ, ಜೆಡಿಎಸ್ ಹೇಗೆ ಇಬ್ಬಾಗ ಆಗುತ್ರೀ.. ನಾವು 19 ಜನ ಎಂಎಲ್‌ಎ ಗಳಿಲ್ವಾ. 30 ಜನ ಜೆಡಿಎಸ್ ಜಿಲ್ಲಾಧ್ಯಕ್ಷರುಗಳಿಲ್ವಾ. ಒರಿಜನಲ್ ಅದೋ‌ ಇದೋ ಅನ್ನೋದೆಲ್ಲಾ ಅಮೇಲೆ ನೋಡೋಣ ಬಿಡಿ. ಅದೆಲ್ಲಾ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ್ರು ಕೂತ್ಕೊಂಡು ತೀರ್ಮಾನ ಮಾಡ್ತಾರೆ. 

ಕಾಂಗ್ರೆಸ್ ನವರು ಹಿಂಗೆ ಮಾಡೋದಕ್ಕೆ ಹೋಗೀನೇ ಸಿಪಿಎಂ ಮುಗಿಸಿ ಆಯ್ತು, ಹೀಗೆ ಎಲ್ಲಾರನ್ನೂ ಮುಗಿಸೋದಕ್ಕೆ ಹೋಗಿ 40 ಕ್ಕೆ ಬಂದಿತ್ತು. ಈ ರಾಷ್ಟ್ರದಲ್ಲಿ ಇವತ್ತು ಒರಿಜಿನಲ್ ಕಾಂಗ್ರೆಸ್ ಇಲ್ಲ. ನೆಹರೂ, ಮಹಾತ್ಮಾಗಾಂಧಿ ಇದ್ದಂತಹ ಕಾಂಗ್ರೆಸ್ ಇಲ್ಲ ಇವತ್ತು. ಇಂತಹ ಕಾಂಗ್ರೆಸ್ ಗೆ ಹೆದರೋದಾಗಿದ್ರೆ ಯಾವಾಗ್ಲೋ ಮನೆ ಸೇರ್ಕೋಬೇಕಾಗಿತ್ತು. ಇದೆಲ್ಲಾ ಕಾಂಗ್ರೆಸ್ ನ ಕುತಂತ್ರಗಳು, ಆ ಕುತಂತ್ರಗಳಿಗೆಲ್ಲಾ ಹೆದರೋದಿಲ್ಲ. ಎಂತೆಂತವೋಗಳನ್ನೋ‌ ದೇವೇಗೌಡ್ರು ಎದುರಿಸಿದ್ದಾರೆ.‌ ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಕಾಲವೇ ನಿರ್ಧರಿಸುತ್ತದೆ‌. ಚೆಂಡು ರಾಷ್ಟ್ರೀಯ ಅಧ್ಯಕ್ಷರ ಅಂಗಳದಲ್ಲಿದೆ, ಅವರು ತೀರ್ಮಾನ ತೆಗೆದುಕೊಳ್ತಾರೆ ಎಂದರು.

Former Minister and JD(S) leader H.D. Revanna has said the JD(S) will not be split into two, and if the party’s State president C.M. Ibrahim wants to join the Congress, he was free to do so. In a press conference here on Tuesday, Mr. Revanna said, “Let us see whom Mr. Ibrahim will expel from the party. If he wants to join the Congress, let him go”.