Shobha Karandlaje, BJP president: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತರಲು ಹೈಕಮಾಂಡ್ ಚಿಂತನೆ ; ವಿಜಯೇಂದ್ರ ಆಯ್ಕೆಗೆ ಪಕ್ಷದಲ್ಲೇ ವಿರೋಧ

19-10-23 03:58 pm       Bangalore Correspondent   ಕರ್ನಾಟಕ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲು ಪಕ್ಷದ ಹೈಕಮಾಂಡ್‌ ಒಲವು ತೋರಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಬೆಂಗಳೂರು, ಅ.19: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲು ಪಕ್ಷದ ಹೈಕಮಾಂಡ್‌ ಒಲವು ತೋರಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದಕ್ಕಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಜ್ಯ ಪ್ರಮುಖರ ಅಭಿಪ್ರಾಯ ಕೇಳಲಾಗಿದ್ದು, ಶೀಘ್ರದಲ್ಲೇ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. 

ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವುದು ಬಿಎಸ್‌ವೈ ಬಯಕೆಯಾಗಿತ್ತು. ಆದರೆ ಪಕ್ಷದ ಮತ್ತೊಂದು ಬಣ ಈ ಪ್ರಸ್ತಾಪಕ್ಕೆ ಹೈಕಮಾಂಡ್‌ ಅಂಗಳದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಕೇಂದ್ರ ವರಿಷ್ಠರು ವಿಜಯೇಂದ್ರಗೆ ಪಟ್ಟ ಕಟ್ಟಲು ಮುಂದಾಗಿದ್ದರೂ, ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಯಡಿಯೂರಪ್ಪ ಬೆಂಬಲ ಅಗತ್ಯ ಇರುವುದರಿಂದ ವಿಜಯೇಂದ್ರ ಬದಲಿಗೆ ಹಿರಿಯ ಪುತ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸ್ಥಾನ ನೀಡಲು ಹೈಕಮಾಂಡ್‌ ಪರಿಶೀಲಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಬಿಎಸ್‌ವೈ ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. 

Cong has set up Shivakumar Bank of India (SBI) in Karnataka to loot people:  BJP MLA Vijayendra

ಈ ರೀತಿಯ ಹೊಯ್ದಾಟ ಹಿನ್ನೆಲೆಯಲ್ಲಿ ಮೂರನೇ ವ್ಯಕ್ತಿ ಬಗ್ಗೆ ಪರಾಮರ್ಶೆ ನಡೆಸಿದ ಹೈಕಮಾಂಡ್‌, ಶೋಭಾ ಕರಂದ್ಲಾಜೆ ಈ ಸ್ಥಾನಕ್ಕೆ ಒಮ್ಮತದ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದೆ. ಈ ನೇಮಕಕ್ಕೆ ಬಿಎಸ್‌ವೈ ಕೂಡ ಬೆಂಬಲಿಸುತ್ತಾರೆ. ಆರೆಸ್ಸೆಸ್ ಮತ್ತು ಸಂತೋಷ್ ಬಣವೂ ನಿರಾಕರಿಸುವುದಿಲ್ಲ ಎಂಬ ನೆಲೆಯಲ್ಲಿ ಚಿಂತನೆ ನಡೆದಿದೆ. ಒಕ್ಕಲಿಗರಾದ ಶೋಭಾ ಅಧ್ಯಕ್ಷ ಸ್ಥಾನಕ್ಕೇರಿದರೆ, ವಿಪಕ್ಷ ನಾಯಕ ಸ್ಥಾನಕ್ಕೆ ಯಾರಾಗ್ತಾರೆ ಎನ್ನುವ ಕುತೂಹಲ ಎದ್ದಿದೆ.

Shobha Karandlaje to be the next BJP state president of Karnataka. The BJP will get a new state president around Dasara, and with BJP Parliamentary Board member and former chief minister B S Yediyurappa affirming it will happen soon, there is much hope in the state party unit.