ಬ್ರೇಕಿಂಗ್ ನ್ಯೂಸ್
20-10-23 10:40 pm Bangalore Correspondent ಕರ್ನಾಟಕ
ಬೆಂಗಳೂರು, ಅ.20: ದೇಶ- ವಿದೇಶ ಸುತ್ತುತ್ತಲೇ ಅಲ್ಲಿನ ಚಿತ್ರಣ ಕಟ್ಟಿಕೊಡುತ್ತಾ ಫೇಮಸ್ ಆಗಿರುವ ಯೂಟ್ಯೂಬರ್ ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಈಗ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕನ್ನಡದ ಅತಿ ಕಿರಿಯ ಯೂಟ್ಯೂಬರ್ ಆಗಿರುವ ಡಾ ಬ್ರೋ ಚೀನಾ ಹೊಗಳಿದ್ದೇ ಈಗ ಮುಳುವಾಗಿದೆ. ಮೋದಿ ಭಕ್ತರು ಹದಿಹರೆಯದ ಹಾಲುಗಲ್ಲದ ಹುಡುಗನನ್ನು ದೇಶದ್ರೋಹಿ ಎಂದು ಜರೆದಿದ್ದಾರೆ.
ಡಾಕ್ಟರ್ ಬ್ರೋ ಇತೀಚಿಗೆ ಚೀನಾ ದೇಶಕ್ಕೆ ಹೋಗಿದ್ದನ್ನು ವಿಡಿಯೋ ಮಾಡಿದ್ದರು. ಅಲ್ಲಿಯ ಅಭಿವೃದ್ಧಿ ಕಂಡು ಬೆರಗಾಗಿದ್ದಲ್ಲದೇ, ಭಾರತ- ಚೀನಾ ಹೋಲಿಸಿ ಜನರ ಮನಸ್ಥಿತಿ, ಇಲ್ಲಿನ ಹೀನ ರಾಜಕೀಯದ ಬಗ್ಗೆ ಹೀಗಳೆದು ಮಾತನಾಡಿದ್ದರು. ಚೀನಾದ ಬೀಜಿಂಗ್ ನಗರದ ಒಂದು ಗಲ್ಲಿ ಕೂಡ ತುಂಬಾ ಅಭಿವೃದ್ಧಿ ಆಗಿದೆ. ನಮ್ಮ ದೇಶ ಇಷ್ಟೊಂದು ಅಭಿವೃದ್ಧಿ ಆಗ್ಬೇಕು ಅಂದ್ರೆ, ಬರೋಬ್ಬರಿ 70 ವರ್ಷಗಳೇ ಬೇಕು ಅಂತ ಡಾಕ್ಟರ್ ಬ್ರೋ ಹೇಳಿಕೊಂಡಿದ್ದಾರೆ.
ನಮ್ಮ ದೇಶದಲ್ಲಿ ರಾಜಕೀಯ ಜಾತಿ-ಧರ್ಮ ಹೀಗೆ ಇಂತಹ ಪುಕ್ಕಟೆ ವಿಷಯದಲ್ಲಿಯೇ ಎಲ್ಲವೂ ಕಳೆದು ಹೋಗುತ್ತಿದೆ. ಅಭಿವೃದ್ಧಿ ಅನ್ನೋದು ಇಲ್ವೇ ಇಲ್ಲ. ಆದರೆ ಚೀನಾ ದೇಶದ ರಾಜಕಾರಣಿಗಳು ದೇಶವನ್ನ ಅಭಿವೃದ್ಧಿ ಮಾಡೋದ್ರಲ್ಲಿಯೇ ಬ್ಯುಸಿ ಇರ್ತಾರೆ. ಹೊರತು ರಾಜಕೀಯ ಮಾಡೋದಿಲ್ಲ ಅಂತ. ಇಲ್ಲಿನ ನಗರವನ್ನು ನೋಡಿದರೆ ನಂಗೆ ಹೊಟ್ಟೆಕಿಚ್ಚು ಬರುತ್ತದೆ. ಏನೆಲ್ಲಾ ಮಾಡಿದ್ದಾರೆ ಅಂದ್ರೆ ಊಹಿಸೋಕು ಆಗ್ತಿಲ್ಲ ಎಂದು ವಿಶ್ಲೇಷಣೆ ಮಾಡಿದ್ದಾರೆ. ಡಾ ಬ್ರೋ ಮಾಡಿದ್ದ ವಿಡಿಯೋ ಈಗ ಭಾರೀ ವೈರಲ್ ಆಗಿದ್ದು ಮೋದಿ ವಿರೋಧಿಗಳೆನಿಸಿಕೊಂಡವರು ಫುಲ್ ಷೇರ್ ಮಾಡಿದ್ದಾರೆ. ಆತ ಹೇಳಿದ ಮಾತುಗಳ ಬಗ್ಗೆ ಪರ - ವಿರೋಧ ಕೇಳಿಬಂದಿದ್ದು ಕೆಲವು ಅಂಧ ಭಕ್ತರು ಡಾ ಬ್ರೋನನ್ನು ದೇಶದ್ರೋಹಿ ಎಂದು ನಿಂದಿಸಿದ್ದಾರೆ.
ಇದಲ್ಲದೆ, ಚೀನಾ ದೇಶದ ಅಭಿವೃದ್ಧಿಯನ್ನ ಹೊಗಳುವ ಭರದಲ್ಲಿ ಚೀನಾದ ಮಕ್ಕಳಿಗೆ ಸಣ್ಣದಿರುವಾಗಲೇ ಸ್ಕಿಲ್‌ಗಳನ್ನು ಕಲಿಸುವ ಬಗ್ಗೆಯೂ ಹೇಳಿದ್ದು ಭಾರತದಲ್ಲಿ ಅಂಥ ಶಿಕ್ಷಣ ಸಿಗ್ತಿಲ್ಲ ಎಂದು ವಾಸ್ತವ ಸ್ಥಿತಿಯನ್ನು ಹೇಳಿದ್ದು ಕೆಲವರ ಕಣ್ಣು ಕೆಂಪಾಗಿಸಿದೆ. ಮಕ್ಕಳಿಗೆ ಇಲ್ಲಿ ಶಾಲೆಯ ಹಂತದಲ್ಲಿಯೇ ಸ್ಕಿಲ್ಸ್ ಕಲಿಸಿಕೊಡ್ತಾರೆ. ಆದರೆ ನಮ್ಮಲ್ಲಿ ಇದು ಇಲ್ವೇ ಇಲ್ಲ ಎಂದು ಡಾಕ್ಟರ್ ಬ್ರೋ ಚುಚ್ಚಿದ್ದಾರೆ.
ಆದರೆ, ತಾನು ಹೀಗೆ ಹೇಳಿದ್ದಕ್ಕಾಗಿ ಖಂಡಿತವಾಗಿಯೂ ಜನ ಬೈಯುತ್ತಾರೆ ಅನ್ನುವ ಅಂದಾಜು ಗಗನ್ ಶ್ರೀನಿವಾಸ್‌ಗೆ ಇತ್ತು. ಆ ವಿಚಾರವನ್ನ ವಿಡಿಯೋದ ಆರಂಭದಲ್ಲಿಯೇ ಹೇಳಿದ್ದು ಒಂದು ಮಾತು ತುಂಬಾನೇ ಬೇಸರದಲ್ಲಿ ಹೇಳುತ್ತೇನೆ. ನನ್ನ ಈ ಒಂದು ವಿಡಿಯೋ ನೋಡಿದ್ರೆ, ನೀವು ಸಿಟ್ಟಾಗುತ್ತೀರಾ, ಆದರೆ ಸತ್ಯ ಹೇಳಬೇಕಲ್ವೇ ಅಂತಲೂ ಡಾಕ್ಟರ್ ಬ್ರೋ ಹೇಳಿದ್ದಾರೆ.
Kannada Youtuber Dr Bro Jagan slammed by BJP fans for talking about Indian politics while bogging from China. Recently his China blog video has gone fully viral on social media. China is so richly developed whereas India is just fighting over religion he added in his video. His statement has sparked row among BJP.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm