ಬ್ರೇಕಿಂಗ್ ನ್ಯೂಸ್
24-10-23 11:53 am HK News Desk ಕರ್ನಾಟಕ
ಚಿಕ್ಕಮಗಳೂರು, ಅ 24: ಹುಲಿ ಉಗುರು ಧರಿಸಿದ ಆರೋಪದಲ್ಲಿ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು ವರದಿಯಾಗಿದೆ.
ಸತೀಶ್, ರಂಜಿತ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆನ್ನಲಾಗಿದೆ.
ಬಂಧಿತ ಆರೋಪಿಗಳಿಬ್ಬರು ಹುಲ್ಲೇಮನೆ, ಭಾರತೀಬೈಲು ಗ್ರಾಮದವರಾಗಿದ್ದು, ಬಂಧಿತರಿಂದ ಹುಲಿ ಉಗುರಿನ ಒಂದು ಡಾಲರ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಲೆ ಮರೆಸಿಕೊಂಡಿರುವ ಇಬ್ಬರ ಬಂಧನಕ್ಕೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ರವಿವಾರ ರಾತ್ರಿ ಬಂಧಿಸಿದ್ದರು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಬಂಧನ ಪ್ರಕರಣದಲ್ಲಿ ಮತ್ತಿಬ್ಬರಿಗೆ ಸಂಕಷ್ಟ ಎದುರಾಗಿದ್ದು, ಅರಣ್ಯ ಇಲಾಖೆ ಪ್ರಕರಣದಲ್ಲಿ ಸಂತೋಷ್ ಆಪ್ತ ಹಾಗೂ ಚಿನ್ನದಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದೆ. ಸಂತೋಷ್ ಆಪ್ತ ರಂಜಿತ್, ಚಿನ್ನ ಅಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಂತೋಷ್, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಸ್ಪಷ್ಟ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಹುಲಿ ಉಗುರು ಮೂಲ ಕೆದಕಲು ಅರಣ್ಯ ಇಲಾಖೆ ತನಿಖೆ ಮುಂದುವರಿದೆ. ಹೀಗಾಗಿ ಲಾಕೇಟ್ ಮಾಡಿಕೊಟ್ಟ ಹೊಸೂರು ಮೂಲದ ವರ್ತೂರು ಬಳಿ ಇರುವ ಚಿನ್ನದ ಅಂಗಡಿ ಮಾಲೀಕನಿಗೂ ಇದೀಗ ಸಂಕಷ್ಟ ಎದುರಾಗಿದೆ.
Bigg Boss Contestant Varthur Santhosh arrest, two arrested from chikmagaluru, notice issued to gold shop owner.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm