ಬ್ರೇಕಿಂಗ್ ನ್ಯೂಸ್
25-10-23 08:30 pm Bangalore Correspondent ಕರ್ನಾಟಕ
ಬೆಂಗಳೂರು, .25: ಪಕ್ಷದ ನಾಯಕರ ವಿರುದ್ಧವೇ ಅಪಸ್ವರದ ಮಾತುಗಳನ್ನು ಆಡುತ್ತಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರನ್ನು ಬಿಜೆಪಿ ಕೇಂದ್ರ ವರಿಷ್ಠರು ದೆಹಲಿಗೆ ಕರೆಸಿಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುತ್ತಾರೆಂಬ ವದಂತಿ ನಡುವಲ್ಲೇ ಡಿವಿ ಅವರನ್ನು ದೆಹಲಿಗೆ ಕರೆಸಿದ್ದು ಕುತೂಹಲ ಮೂಡಿಸಿದೆ.
ವಿಧಾನಸಭೆ ಚುನಾವಣೆ ಬಳಿಕ ನಡೆದ ಎರಡು ಕೋರ್ ಕಮಿಟಿ ಸಭೆಗಳಲ್ಲಿಯೂ ಡಿವಿ ಸದಾನಂದ ಗೌಡ, ಪಕ್ಷದ ಕೇಂದ್ರ ನಾಯಕರ ವಿರುದ್ಧ ಮಾತನಾಡಿದ್ದರು ಎನ್ನೋದು ಚರ್ಚೆಗೀಡಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರೆದುರಲ್ಲೇ ಸಿಡುಕಿನ ಮಾತನಾಡಿ, ಕೇಂದ್ರ ವರಿಷ್ಠರ ನಡೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿತ್ತು. ಇತ್ತೀಚೆಗೆ ಕೇಂದ್ರ ನಾಯಕರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ವಿಚಾರದಲ್ಲಿಯೂ ರಾಜ್ಯದ ನಾಯಕರ ಜೊತೆಗೆ ಚರ್ಚಿಸದೆ ನಿರ್ಧಾರಕ್ಕೆ ಬಂದ ಬಗ್ಗೆ ವಿರೋಧ ಸೂಚಿಸಿದ್ದರು. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ಡಿವಿಎಸ್ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದೇ ವಿಶ್ಲೇಷಣೆ ನಡೆದಿತ್ತು.
ಪಕ್ಷದ ನಾಯಕರ ಬಗ್ಗೆ ಅಪಸ್ವರ ಹೇಳಿಕೆ ನೀಡುತ್ತಿದ್ದರಿಂದ ಸದಾನಂದ ಗೌಡರು ಕಾಂಗ್ರೆಸ್ ಹೋಗುತ್ತಾರೆಂಬ ಮಾತೂ ಕೇಳಿಬಂದಿತ್ತು. ಇತ್ತೀಚೆಗೆ ಜಗದೀಶ ಶೆಟ್ಟರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ಮಾಡಿ ಸದಾನಂದ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ. ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನಕ್ಕೂ ನೇಮಕ ಮಾಡದೆ ಅಸಡ್ಡೆ ವಹಿಸಿದ್ದು ಸದಾನಂದ ಗೌಡರ ಸಿಟ್ಟಿಗೆ ಕಾರಣವಾಗಿತ್ತು. ಜೆಡಿಎಸ್ ಜೊತೆಗೆ ಮೈತ್ರಿಯಾದಲ್ಲಿ ಸದಾನಂದ ಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರ ಅಥವಾ ಮಂಡ್ಯ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಸ್ಥಾನವನ್ನು ತೆನೆ ಪಕ್ಷಕ್ಕೆ ಕೊಟ್ಟಲ್ಲಿ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರ ಕೊಡಬೇಕಾದೀತು ಎನ್ನುವ ಲೆಕ್ಕಾಚಾರವೂ ಡಿವಿ ಅವರ ತಲೆಕೆಡಿಸಿತ್ತು.
ಇದರಿಂದ ತಳಮಳದಲ್ಲಿರುವ ಹಿರಿಯ ರಾಜಕಾರಣಿ ಮತ್ತು ಪ್ರಭಾವಿ ಒಕ್ಕಲಿಗ ಸಮುದಾಯದ ಡಿವಿ ಸದಾನಂದ ಗೌಡ ತನ್ನದೇ ಆದ ಇಮೇಜ್ ಸೃಷ್ಟಿಸಲು ಒಂದೆಡೆ ಹಾಲಿ ಕಾಂಗ್ರೆಸ್ ಆಡಳಿತವನ್ನು ದೂರುತ್ತಲೇ ಮಾಧ್ಯಮಗಳೆದುರಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಪಕ್ಷದ ಕೇಂದ್ರ ನಾಯಕರು ಐದು ರಾಜ್ಯಗಳ ಚುನಾವಣೆ ಗಡಿಬಿಡಿ ಮಧ್ಯೆಯೂ ಸದಾನಂದ ಗೌಡರನ್ನು ದೆಹಲಿಗೆ ಕರೆಸಿದ್ದು ಮಾತುಕತೆ ನಡೆಸಿದ್ದಾರೆ. ಒಂದೆಡೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅತ್ತ ಯಡಿಯೂರಪ್ಪ ಅವರದ್ದಾಗಲೀ, ಇತ್ತ ಬಿ.ಎಲ್ ಸಂತೋಷ್ ಬಣದ್ದಾಗಲೀ ಮಾತುಗಳನ್ನು ಕೇಂದ್ರ ನಾಯಕರು ಕೇಳುತ್ತಿಲ್ಲ. ಇಬ್ಬರ ಜಗಳದಲ್ಲಿ ಕೂಸು ಬಡವಾಗುತ್ತಿದೆ ಎನ್ನುವುದನ್ನು ಅರಿತಿರುವ ಕೇಂದ್ರ ನಾಯಕರು, ಎರಡೂ ಬಣಗಳ ಹೊರತಾದ ನಾಯಕರ ಅಭಿಪ್ರಾಯವನ್ನೂ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಎರಡೂ ಬಣದಲ್ಲಿ ಕಾಣಿಸದ ಸದಾನಂದ ಗೌಡರನ್ನು ಕರೆದು ಅಭಿಪ್ರಾಯ ಆಲಿಸಿದ್ದು ಮಹತ್ವ ಮೂಡಿಸಿದೆ. ಆಮೂಲಕ ಪಕ್ಷ ಬಿಡುವ ಯೋಚನೆಯಲ್ಲಿದ್ದ ಸದಾನಂದ ಗೌಡರ ಸಿಟ್ಟಿಗೆ ಮುಲಾಮು ಹಚ್ಚುವ ಯತ್ನವನ್ನೂ ಮಾಡಿದ್ದಾರೆ.
Amid rumours of former chief minister and senior BJP leader D.V. Sadananda Gowda, considering quitting the party, the leadership has summoned him to New Delhi on Wednesday.
27-08-25 03:17 pm
HK News Desk
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm