ರಾಮನಗರ ಜಿಲ್ಲೆಯ ಹೆಸರು ಬದಲಿಸಿದರೆ ಅಮರಣಾಂತ ಉಪವಾಸ ; ಡಿಕೆಶಿ ವಿರುದ್ಧ ಎಚ್ಡಿಕೆ ಸವಾಲು 

26-10-23 04:45 pm       Bangalore Correspondent   ಕರ್ನಾಟಕ

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ. 

ಬೆಂಗಳೂರು, ಅ.26: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ. 

ರಾಮನಗರ ಜಿಲ್ಲೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಸವಾಲು ಸ್ವೀಕರಿಸುತ್ತೇನೆ. ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಡಿಕೆ ಶಿವಕುಮಾರ್ ಬೆಂಗಳೂರು ಮೂಲದವರಲ್ಲ. ಬೆಂಗಳೂರು ಇಡೀ ಕರ್ನಾಟಕ ರಾಜ್ಯದ ಭಾಗ. ಬೆಂಗಳೂರಿನ ಆರ್ಥಿಕ ಶಕ್ತಿ ಇಡೀ ಕರ್ನಾಟಕದ ಅಭಿವೃದ್ಧಿಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.

ಎಷ್ಟೆಲ್ಲಾ ಕೆರೆ-ಕಟ್ಟೆ ನುಂಗಿ ಹಾಕಿದ್ದೀರಾ? ಯಾವ್ ಯಾವ್ ಕೆರೆ ನುಂಗಿದ್ದೀರಾ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ? ಈ ಬಗ್ಗೆ ಚರ್ಚೆ ನಡೆಸಲು ಪಾಪ ಅವರು ಬ್ಯುಸಿ ಇದ್ದಾರೆ. ಅವರು ಯಾವಾಗ ಬೇಕಾದರೂ ಸಮಯ ಫಿಕ್ಸ್ ಮಾಡಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ನಾನು ಹುಟ್ಟಿದ್ದು ಹಾಸನ ಆದರೂ ನನ್ನ ಜೀವನ ಅಂತ್ಯ ಆಗೋದು ರಾಮನಗರದಲ್ಲೇ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳುತ್ತೇನೆ. ನಮ್ಮ ಸಮಾಜದವರು ಹೇಳಿದ್ರು ಅಂತ ಸುಮ್ಮನೆ ಇದ್ದೆ ಎನ್ನುವ ಡಿಕೆ ಹೇಳಿಕೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲವೂ ಜನರೇ ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು
 
ಕನಕಪುರ ಸ್ಕೂಲ್‌ಗಳಲ್ಲಿ ಎಷ್ಟು ಟೀಚರ್ ಇಲ್ಲ ನೋಡಿ. ಭೂಮಿ ದಾನ ಕೊಟ್ಟಿದ್ದೇವೆ ಅಂತಾರೆ. ನಾನು ನೋಡಿದ್ದೇನೆ ಎಷ್ಟು ಕೊಟ್ಟಿದ್ದಾರೆ ಎನ್ನುವುದನ್ನು. ದಾಖಲಾತಿ ಹೇಗೆ ಮಾಡಿಕೊಂಡಿದ್ದೀರಾ ನಮಗೆ ಗೊತ್ತಿದೆ. ಕನಕಪುರದಲ್ಲಿ ಒಬ್ಬ ಟೀಚರ್ ಜಾಗದಲ್ಲಿ ಡಿಕೆ ಶಿವಕುಮಾರ್ ಪಟಾಲಂ ಇದ್ದ. 10 ವರ್ಷ ಆದರೂ ಬಿಡಿಸಲು ಆಗಿಲ್ಲ ಎಂದು ಕಿಡಿಕಾರಿದರು.

After spurring controversy with his “Kanakapura will be a part of Bengaluru” statement, Karnataka Deputy Chief Minister DK Shivakumar has now fuelled it by saying the entire Ramanagara district will be renamed as ‘Bengaluru South’. These statements were received with sharp rebuttal from opposition parties, specifically by former CM HD Kumaraswamy, who is the state JDS chief at present.