ಬ್ರೇಕಿಂಗ್ ನ್ಯೂಸ್
27-10-23 09:07 pm Bangalore Correspondent ಕರ್ನಾಟಕ
ಬೆಂಗಳೂರು, ಅ.27: ವನ್ಯಜೀವಿ ಕಾಯ್ದೆಯಡಿ ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ವರ್ತೂರು ಸಂತೋಷ್ ಬಂಧಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಎಡವಟ್ಟು ಮಾಡಿಕೊಂಡರಾ ಎನ್ನುವ ಸಂಶಯ ಉಂಟಾಗಿದೆ. ನಿಜಕ್ಕಾದರೆ, ಹುಲಿ ಉಗುರು ಧರಿಸಿದ ಕಾರಣಕ್ಕೆ ನೇರವಾಗಿ ಬಂಧಿಸುವ ಪ್ರಮೇಯ ಬರುವುದಿಲ್ಲ ಎನ್ನುತ್ತಾರೆ, ವಕೀಲರು.
ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಈ ಬಗ್ಗೆ ಮಾತನಾಡಿದ್ದು ಅಧಿಕಾರಿಗಳ ನಡೆಯ ಹಿಂದೆ ಪಿತೂರಿ ಇರುವುದಾಗಿ ಆರೋಪಿಸಿದ್ದಾರೆ. ನಿಜವಾಗಲೂ ಸಂತೋಷ್‌ಗೆ ಅದು ಹುಲಿ ಉಗುರು ಎಂಬುದು ಗಮನಕ್ಕೆ ಬಂದಿಲ್ಲ. ಅವರೊಬ್ಬ ಉತ್ತಮ ಮನೆತನದಿಂದ ಬಂದ ಕೃಷಿಕ ಅಷ್ಟೇ. ಈ ಬಗ್ಗೆ ಯಾವುದೇ ನೊಟೀಸ್ ನೀಡದೆ ಅವರನ್ನು ಬಂಧನ ಮಾಡಿ ಜೈಲಿಗೆ ಕಳಿಸಿದ್ದಾರೆ. ಇದರಲ್ಲಿ ಪಿತೂರಿ ಇದೆ. ಅರಣ್ಯ ಇಲಾಖೆಯ ನಡೆ ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ವರ್ತೂರು ಸಂತೋಷ್ ಬಂಧನದ ಹಿಂದೆ ಪಿತೂರಿ ಇದೆ. ಬಡವರಿಗೊಂದು ಕಾನೂನು ಶ್ರೀಮಂತರಿಗೆ ಒಂದು ಕಾನೂನು ಎಂಬಂತಿದೆ. ವನ್ಯಜೀವಿ ಕಾಯ್ದೆಯಲ್ಲಿ ಎಲ್ಲರೂ ಒಂದೇ. ಈ ಭೇದಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ. ಸಂತೋಷ್ ಜೈಲಿನಿಂದ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾಕೆಂದರೆ ನಿನ್ನೆ ಅರಣ್ಯ ಸಚಿವರು ಮಾತನಾಡಿದ್ದರು, ಎಲ್ಲರಿಗೂ 41A ಅಡಿ ನೋಟೀಸ್ ನೀಡಿದ್ದೇವೆ ಅಂತ. ಸಂತೋಷ್ ನಮಗೆ ಸ್ಪಂದಿಸಿಲ್ಲ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಅದು ಶುದ್ಧ ಸುಳ್ಳು. ಅಂತಹ ನೋಟೀಸನ್ನೇ ನೀಡಿಲ್ಲ.
ವಿಷಯ ತಿಳಿದ ತಕ್ಷಣ ಖುದ್ದಾಗಿ ನಾನೇ ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳ ಬಳಿ ಹೋಗಿದ್ದೆ. ಹುಲಿ ಉಗುರಿ ಮೆಟೀರಿಯಲ್ ತೆಗೆದುಕೊಳ್ಳಿ. ಈಗ ನೊಟೀಸ್ ಕೊಡಿ ಎಂದು ಹೇಳಿದ್ದೆ. ಆದರೆ ಅಧಿಕಾರಿಗಳು ಕೇಳಲಿಲ್ಲ. ಈ ಬಗ್ಗೆ ಯಾವುದೇ ದಾಖಲೆಯನ್ನೂ ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಇದರ ಹಿಂದೆ ಏನು ಹುನ್ನಾರವಿದೆ ಎಂಬುದು ಗೊತ್ತಿಲ್ಲ. ಸರಿಯಾದ ರೀತಿಯಲ್ಲಿ ದೂರನ್ನೂ ಅರಣ್ಯ ಇಲಾಖೆ ದಾಖಲಿಸಿಲ್ಲ. ವನ್ಯಜೀವಿ ಕಾಯ್ದೆ ಪ್ರಕಾರ ಇಲಾಖೆ ಮೊದಲು ದೂರು ದಾಖಲಿಸಿ, ನ್ಯಾಯಾಲಯದ ಆದೇಶ ಪಡೆದು ತನಿಖೆ ನಡೆಸಬೇಕು. ಇದು ಯಾವುದನ್ನೂ ಇಲಾಖೆ ಮಾಡಿಲ್ಲ.
ನನ್ನ ಮತ್ತು ಸಂತೋಷ್ ಕುಟುಂಬದ ಬಾಂಧವ್ಯ ಕಳೆದ 20 ವರ್ಷಗಳಿಂದ ಇದೆ. ಈ ಘಟನೆ ಬಳಿಕ ಅವರ ಕುಟುಂಬ ತುಂಬಾ ನೊಂದಿದೆ. ಒಳ್ಳೆ ಮನೆತನ ಇರುವ ಕುಟುಂಬ. ಅವರ ಕಣ್ಣೀರಿಗೆ ಎಲ್ಲಿಯೂ ಪರಿಹಾರ ಸಿಗುವುದಿಲ್ಲ. ಒಂದು ವೇಳೆ ಅರಣ್ಯ ಇಲಾಖೆ ವಶಪಡಿಸಿಕೊಂಡ ಲಾಕೆಟ್ ಹುಲಿಯದ್ದು ಅಲ್ಲ ಎಂದಾದರೆ ಅದಕ್ಕೆ ಪರಿಹಾರ ಯಾರು ಕೊಡುತ್ತಾರೆ. ಅದಕ್ಕೆ ಅರಣ್ಯ ಇಲಾಖೆಯವರೇ ಹೊಣೆಯಾಗುತ್ತಾರೆ.
ನಿಜವಾಗಲು ಅದು ಹುಲಿ ಉಗುರು ಎಂದು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದರೆ ಅವರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ವಶಕ್ಕೆ ಪಡೆಯಬೇಕಾಗಿತ್ತು. ಅವರು ಭಾನುವಾರ ಸಂಜೆ ಬಂಧಿಸಿ ಸೋಮವಾರ ಕೋರ್ಟ್ ಗೆ ಹಾಜರುಪಡಿಸುವ ಉದ್ದೇಶ ಏನಿತ್ತು ? ಅರಣ್ಯ ಇಲಾಖೆ ಹಾಕಿರುವ ಸೆಕ್ಷನ್ ನಲ್ಲಿ ಸಂತೋಷ್ ಕಾಡಿಗೆ ಹೋಗಿ ಹುಲಿ ಬೇಟೆಯಾಡಿ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಒಟ್ಟು 9 ಸೆಕ್ಷನ್ ಹಾಕಿದ್ದಾರೆ. ಅದು ಯಾವುದೂ ನಮಗೆ ಸಂಬಂಧಿಸುವುದಿಲ್ಲ ಎಂದು ಖಡಕ್ ಆಗಿ ವಕೀಲ ನಟರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
Tiger claw, Varthur Santosh targeted, forest officers file fake cases slams High court Lawyer. There is complete partiality in this case, actor Jaggesh who agreed that its a tiger claw was not arrested then why Varthur was arrested he slammed.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 09:33 pm
Mangaluru Staffer
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm