ಬ್ರೇಕಿಂಗ್ ನ್ಯೂಸ್
31-10-23 01:09 pm Bengaluru Correspondent ಕರ್ನಾಟಕ
ಬೆಂಗಳೂರು, ಅ.31: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಐದು ತಂಡಗಳನ್ನು ನಿಯೋಜಿಸಿದ್ದಾರೆ.
ಸೋಮವಾರವೂ ಚಿರತೆಯನ್ನು ಸೆರೆ ಹಿಡಿಯಲು ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿತ್ತು.
ಅಕ್ಟೋಬರ್ 27 ರಂದು ರಾತ್ರಿ ಚಿರತೆ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅಂದಿನಿಂದ ಚಿರತೆ ಕಾಣಿಸಿಕೊಂಡಿಲ್ಲ.

ಇದೀಗ ಅಪಾರ್ಟ್ ಮೆಂಟ್ ನ ಸುತ್ತಮುತ್ತ ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿದ ಅರಣ್ಯಾಧಿಕಾರಿಗಳು ಖಾಲಿ ಕಟ್ಟಡದ ಒಳ ಭಾಗದಲ್ಲಿ ಚಿರತೆ ಇರೋದು ಖಚಿತಪಡಿಸಿದ್ದಾದ್ದಾರೆ. ಹೀಗಾಗಿ ಅದನ್ನು ಸೆರೆ ಹಿಡಿಯಲು ಮೈಸೂರಿನಿಂದ ತಜ್ಞರ ತಂಡವೊಂದು ಆಗಮಿಸಿದೆ.
ಎರಡು ಮೂರು ದಿನದಿಂದ ಬೆಂಗಳೂರು ಆಗ್ನೇಯ ಭಾಗದ ಸಿಂಗಸಂದ್ರ, ಎಚ್‌ಎಸ್‌ಆರ್ ಲೇಔಟ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಿವಾಸಿಗಳು ಆತಂಕ ಹೊರ ಹಾಕಿದ್ದರು. ಕೂಡ್ಲು ಗೇಟ್‌ನ ಎಂ.ಎಸ್.ಧೋನಿ ಅಂತರಾಷ್ಟ್ರೀಯ ಶಾಲೆ ಸಮೀಪದಲ್ಲಿಯೇ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.
ಸೋಮವಾರ ರಾತ್ರಿಯೂ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಚಿರತೆ ಕಾಣಿಸಿಕೊಂಡಿದೆ. ಕೂಡ್ಲು ಗೇಟ್ ಸಮೀಪದ ಖಾಲಿ ಕಟ್ಟಡವೊಂದರತ್ತ ಚಿರತೆ ಓಡಿ ಹೋಗಿದೆ. ಕೂಡಲೇ ಅರಣ್ಯ ಇಲಾಖೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದರು. ಈಗಾಗಲೇ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕ್ರಮ ವಹಿಸಿತ್ತಾದರೂ ಮಂಗಳವಾರ ಬೆಳಿಗ್ಗೆಯಿಂದಲೇ ಸೆರೆ ಕಾರ್ಯಾಚರಣೆ ಶುರು ಮಾಡಿತು.
ಅಪಾರ್ಟ್ ಮೆಂಟ್ ನೊಳಕ್ಕೆ ನುಗ್ಗಿದ ಚಿರತೆ; ಫಸ್ಟ್ ಫ್ಲೋರ್ ವರೆಗೂ ಹೋಗಿ ತಿರುಗಾಟ :
ಆನೇಕಲ್ ತಾಲೂಕಿನ ಕೂಡ್ಲುಗೇಟ್ ಬಳಿ ಅ. 29ರಂದು ರಾತ್ರಿ ಕಾಣಿಸಿಕೊಂಡಿದ್ದ ಚಿರತೆ ಅಲ್ಲಿನ ನಾಗರಿಕರನ್ನು ಆತಂಕಗೊಳಿಸಿದ್ದರ ಬೆನ್ನಿಗೇ ಅ. 30ರಂದು ಅದೇ ಪ್ರಾಂತ್ಯದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಅದೇ ಚಿರತೆ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಕೂಡ್ಲುಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್ ನೊಳಕ್ಕೆ ನುಗ್ಗಿರುವ ಚಿರತೆಯು, ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಲಾಟ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೊದಲು ಸೆರೆಯಾಗಿದೆ. ಅಲ್ಲಿಂದಲೇ ಅಪಾರ್ಟ್ ಮೆಂಟ್ ನ ಒಳಕ್ಕೆ ಪ್ರವೇಶಿಸಿರುವ ಅದು, ಆನಂತರ ಮೆಟ್ಟಿಲುಗಳನ್ನೇರಿ ಮೊದಲ ಮಹಡಿಗೆ ಹೋಗಿದೆ. ಆನಂತರ ಅಲ್ಲಿ, ಲಿಫ್ಟ್ ಚೇಂಬರಿನ ಬಳಿ ಮೂರ್ನಾಲ್ಕುಸುತ್ತು ಹಾಕಿ ಪುನಃ ಕೆಳಕ್ಕೆ ಇಳಿದು ಬಂದು ಅಲ್ಲಿಂದ ಓಡಿ ಹೋಗಿದೆ.
Forest Department personnel setting up a leopard trap cage at Kudlu Gate, Singasandra, off Hosur Road in Bengaluru on Monday. (Top) A video grab from a CCTV of the wild cat that had strayed in to one of the apartment complex’s first floor in the area on October 28, 2023. | Photo Credit: Special Arrangement
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm