B S Yediyurappa, Amit Shah, Z category security, Bangalore: ಝೆಡ್ ಶ್ರೇಣಿಯ ಭದ್ರತೆ ನಿರಾಕರಿಸಿದ ಬಿ.ಎಸ್ ಯಡಿಯೂರಪ್ಪ ; ಹೈಕಮಾಂಡಿಗೆ ಉಲ್ಟಾ ಹೊಡೆದ್ರಾ ಮಾಜಿ ಮುಖ್ಯಮಂತ್ರಿ 

02-11-23 03:51 pm       Bangalore Correspondent   ಕರ್ನಾಟಕ

ಮಹತ್ವದ ಬೆಳವಣಿಗೆಯಲ್ಲಿ ಜೀವ ಬೆದರಿಕೆ ಸಾಧ್ಯತೆಯಿದೆ ಎಂದು ಹೇಳಿ ಕೇಂದ್ರ ಸರ್ಕಾರದ ಕಡೆಯಿಂದ ನೀಡಲಾಗಿದ್ದ ಝೆಡ್ ಶ್ರೇಣಿಯ ಭದ್ರತೆಯನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ.

ಬೆಂಗಳೂರು, ನ.2: ಮಹತ್ವದ ಬೆಳವಣಿಗೆಯಲ್ಲಿ ಜೀವ ಬೆದರಿಕೆ ಸಾಧ್ಯತೆಯಿದೆ ಎಂದು ಹೇಳಿ ಕೇಂದ್ರ ಸರ್ಕಾರದ ಕಡೆಯಿಂದ ನೀಡಲಾಗಿದ್ದ ಝೆಡ್ ಶ್ರೇಣಿಯ ಭದ್ರತೆಯನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ. ತನಗೆ ಯಾವುದೇ ಝೆಡ್ ಶ್ರೇಣಿಯ ಭದ್ರತೆ ಬೇಡ ಎಂದು ಕೇಂದ್ರ ‌ಗೃಹ ಸಚಿವ ಅಮಿತ್ ಶಾಗೆ ಸ್ವತಃ ಯಡಿಯೂರಪ್ಪ ಮನವಿ ಮಾಡಿದ್ದಾರೆ.

Home minister Amit Shah breaks silence on Manipur violence, says… - India  Today

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ಝೆಡ್ ಭದ್ರತೆ ನೀಡಿ ಕೇ‌ಂದ್ರ ಗೃಹ ಇಲಾಖೆಯಿಂದ ಇತ್ತೀಚೆಗೆ ಆದೇಶ ಮಾಡಲಾಗಿತ್ತು. ಜೀವ ಬೆದರಿಕೆ ಸಾಧ್ಯತೆ ಇದೆಯೆಂದು ಹೇಳಿ, ಅವರಿಗೆ ಭದ್ರತೆ ನೀಡಲಾಗಿತ್ತು.  

ಯಡಿಯೂರಪ್ಪ ಅವರಿಗೆ ದಿಢೀರ್ ಆಗಿ ಝೆಡ್ ಶ್ರೇಣಿಯ ಭದ್ರತೆ ನೀಡಿದ್ದರ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆದಿತ್ತು. ಬಿಎಸ್ ವೈ ಅವರ ಚಟುವಟಿಕೆ ಮೇಲೆ ನಿಗಾ ಇಡಲು ಅಥವಾ ಅವರನ್ನು ಕಟ್ಟಿ ಹಾಕಲು ಕೇಂದ್ರದ ಭದ್ರತೆ ನೀಡಲಾಗುತ್ತಿದೆ ಎಂದೂ ಹೇಳಲಾಗಿತ್ತು. 

ಆದರೆ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನನಗೆ ಝೆಡ್ ಭದ್ರತೆ ಬೇಕಾಗಿಲ್ಲ. ಈಗ ಏನು ಭದ್ರತೆ ಇದೆಯೋ ಅಷ್ಟೇ ಸಾಕು. ನಾನು ಜನಸಾಮಾನ್ಯರ ನಡುವೆ ಇರುವವನಾಗಿದ್ದು ಝೆಡ್ ಶ್ರೇಣಿಯ ಸೆಕ್ಯುರಿಟಿ ಇದ್ದರೆ ಜೊತೆಗೆ ಯಾರಿಗೂ ಬರೋದಕ್ಕೂ ಆಗಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

BJP Parliamentary Board member and former chief minister B.S. Yediyurappa has requested Union Home Minister Amit Shah to withdraw the Z-category security that has been accorded to him.