JDS merger with BJP, Nalin Kateel: ಜೆಡಿಎಸ್ ಮೈತ್ರಿ ಕುರಿತು ಜನವರಿ ವೇಳೆಗೆ ಚರ್ಚೆ ; ವಿಪಕ್ಷ ನಾಯಕ ಸ್ಥಾನ ಅರ್ಜೆಂಟ್ ಆಗಬೇಕು ಅಂತೇನಿಲ್ಲ ; ನಳಿನ್ ಕುಮಾರ್ 

03-11-23 09:04 pm       Bangalore Correspondent   ಕರ್ನಾಟಕ

ಎನ್ ಡಿಎ ಜೊತೆಗಿನ ಜೆಡಿಎಸ್ ಮೈತ್ರಿ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆಯಾಗಿದ್ದು ರಾಜ್ಯ ಮಟ್ಟದಲ್ಲಿ ಚರ್ಚೆ ಜನವರಿಯಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಬೆಂಗಳೂರು, ನ.3: ಎನ್ ಡಿಎ ಜೊತೆಗಿನ ಜೆಡಿಎಸ್ ಮೈತ್ರಿ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆಯಾಗಿದ್ದು ರಾಜ್ಯ ಮಟ್ಟದಲ್ಲಿ ಚರ್ಚೆ ಜನವರಿಯಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಮಟ್ಟದಲ್ಲಿ ಜೆಡಿಎಸ್ ಜತೆಗೆ ಮೈತ್ರಿ ವಿಚಾರ ಚರ್ಚೆಯಾಗಿದೆ. ರಾಜ್ಯ ಮಟ್ಟದಲ್ಲಿ ಏನೆಲ್ಲಾ ವಿಷಯಗಳು ಚರ್ಚೆಯಾಗಬೇಕು ಎಂಬುದರ ಬಗ್ಗೆ ಜನವರಿಯಲ್ಲಿ ಸ್ಪಷ್ಟ ಚಿತ್ರಣ ಮೂಡಲಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಮಾಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದು ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಆಯ್ಕೆ ಮುಖ್ಯವೇ ವಿನಃ ವಿರೋಧ ಪಕ್ಷದ ನಾಯಕ ತಕ್ಷಣಕ್ಕೆ ನಡೆಯಬೇಕೆಂದೇನಿಲ್ಲ. ವಿಧಾನಸಭೆಯಲ್ಲಿರುವ ಬಿಜೆಪಿಯ 66 ಶಾಸಕರು ವಿರೋಧ ಪಕ್ಷದ ನಾಯಕನಾಗಿಯೇ ಕಾರ್ಯ ನಿರ್ವಹಿಸಿದ್ದಾರೆ ಎಂದರು. 

Janata Dal (Secular) - Wikipedia

ರಾಜ್ಯದಲ್ಲಿ ಬರದ ಛಾಯೆ ಹಾಗೂ ವಿದ್ಯುತ್ ಕ್ಷಾಮ ತಲೆದೋರಿದ್ದು ರಾಜ್ಯ ಸರ್ಕಾರ ಆಂತರಿಕ ಕಚ್ಚಾಟಕ್ಕೆ ಸಿಲುಕಿ ಜನರ ಸಮಸ್ಯೆ, ಬರದ ಸಂಕಷ್ಟ ಎರಡನ್ನೂ ಮರೆತಿದೆ. ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕರು, ಸಚಿವರು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ತತ್ ಕ್ಷಣಕ್ಕೆ ಬರ ಅಧ್ಯಯನ ತಂಡ ಕಳಿಸಿಕೊಟ್ಟಿದೆ. ರಾಜ್ಯ ಸರಕಾರ ಬರದಿಂದ ಏನೆಲ್ಲಾ ಹಾನಿಯಾಗಿದೆ, ಎಷ್ಟು ವೆಚ್ಚ ತಗಲಲಿದೆ ಎಂಬುದರ ಪ್ರಸ್ತಾವನೆಯನ್ನೇ ಇದುವರೆಗೂ ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸದಿದ್ದರೆ ಸಂಸದರು ಏನು ಮಾಡಲು ಸಾಧ್ಯವಿದೆ ಪ್ರಸ್ತಾವನೆ ನೀಡಿದರೆ ಕೇಂದ್ರದ ಮನವೊಲಿಕೆ ಕಾರ್ಯವನ್ನು ಸಂಸದರಾಗಿ ನಾವು ಮಾಡಬಹುದಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಕಡೆ ಕೈ ತೋರಿಸುವ ಬದಲು ತನ್ನಲ್ಲಿರುವ ಅನುದಾನವನ್ನು ಬರ ಪರಿಹಾರಕ್ಕೆಂದು ಮೊದಲು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. 

Not scared of agencies unleashed by govt, will continue raise people's  issues: Congress | India News - Times of India

ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇಷ್ಟು ಬೇಗ ಜನ ವಿರೋಧಿ ಸರ್ಕಾರ ಆಗುತ್ತದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಬರದ ಛಾಯೆಯಿಂದ ಸುಮಾರು 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೂ ಐಟಿ ದಾಳಿಯಾದರೂ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೂ ಯಾವುದರ ಬಗ್ಗೆಯೂ ರಾಜ್ಯ ಸರ್ಕಾರದಿಂದ ಸ್ಪಷ್ಟ ಹೇಳಿಕೆ ಇಲ್ಲವಾಗಿದೆ. ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಕಾಂಗ್ರೆಸ್ ಸರಕಾರ ತಾನಾಗಿಯೇ ಪತನಗೊಳ್ಳಲಿದ್ದು, ಬಿಜೆಪಿ ಆ ಯತ್ನ ಮಾಡುವುದಿಲ್ಲ ಎಂದರು.

JDS merger with BJP, Final discussion in January says MP Nalin Kateel.