ಗಣಪತಿ ಬರೀ ನಂಬಿಕೆಯಷ್ಟೇ, ಬಸವ ಸಂಸ್ಕೃತಿ ಅಲ್ಲ, ಗಣಪತಿ ಹೆಸರಲ್ಲಿ ಕುಣಿದು ಕುಪ್ಪಳಿಸುತ್ತಾರೆ ; ಮತ್ತೆ ಕಿಡಿಕಾರಿದ ಪಂಡಿತಾರಾಧ್ಯ ಶ್ರೀ 

05-11-23 05:05 pm       HK News Desk   ಕರ್ನಾಟಕ

ಗಣಪತಿಯದ್ದು ಪೌರಾಣಿಕ ಕಲ್ಪನೆ. ಗಣಪತಿ ಪೂಜೆ ಬಸವ ಸಂಸ್ಕೃತಿ ಅಲ್ಲ ಎಂದು ಹೇಳಿದ್ದೇನೆ. ಅದನ್ನು ಮತ್ತೆ ಹೇಳುತ್ತೇನೆ ಎಂದು ತರಳಬಾಳು ಮಠದ ಸ್ವಾಮೀಜಿ ಪಂಡಿತಾರಾಧ್ಯಶ್ರೀ ಮತ್ತೆ ಕಿಡಿಕಾರಿದ್ದಾರೆ. 

ಚಿತ್ರದುರ್ಗ, ನ.5: ಗಣಪತಿಯದ್ದು ಪೌರಾಣಿಕ ಕಲ್ಪನೆ. ಗಣಪತಿ ಪೂಜೆ ಬಸವ ಸಂಸ್ಕೃತಿ ಅಲ್ಲ ಎಂದು ಹೇಳಿದ್ದೇನೆ. ಅದನ್ನು ಮತ್ತೆ ಹೇಳುತ್ತೇನೆ ಎಂದು ತರಳಬಾಳು ಮಠದ ಸ್ವಾಮೀಜಿ ಪಂಡಿತಾರಾಧ್ಯಶ್ರೀ ಮತ್ತೆ ಕಿಡಿಕಾರಿದ್ದಾರೆ. 

ಸಾಣೇಹಳ್ಳಿಯ ತರಳಬಾಳು ಮಠದಲ್ಲಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಸ್ವಾಮೀಜಿ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಇಷ್ಟಲಿಂಗ ಧರಿಸಿ ಪೂಜಿಸುವುದು ಬಸವ ಸಂಸ್ಕೃತಿ. ಗಣಪತಿಗೆ ಸುಮ್ಮನೆ ಇಷ್ಟೆಲ್ಲಾ ಪೂಜೆ ಮಾಡುತ್ತೀರಿ. ಗಣಪತಿ ಯಾರಿಗಾದರೂ ವರ, ಶಾಪ ಕೊಟ್ಟಿದೆಯೇನು? ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಗಣಪತಿ ದೇಗುಲಕ್ಕೆ ಹೋಗುತ್ತಾರೆ. ಓದದಿದ್ದರೆ, ಉತ್ತರ ಬರೆಯದಿದ್ದರೆ ಪಾಸ್ ಆಗಲು ಸಾಧ್ಯವೇ? 

ಗಣಪತಿ ಎಂಬುದು ಅದೊಂದು ನಂಬಿಕೆ ಅಷ್ಟೇ. ಅದನ್ನೇ ವಿಜೃಂಭಣೆ ಮಾಡುತ್ತ ವಾತಾವರಣ‌‌ ಕುಲಗೆಡಿಸಲಾಗುತ್ತಿದೆ. ಡಿಜೆ ಸೌಂಡ್ ಹಾಕಿ ಎಲ್ಲರ ಕಿವಿ ಬಂದ್ ಮಾಡುವ ವಾತಾವರಣ ನಿರ್ಮಾಣ ಆಗಿದೆ.‌ ಗಣಪತಿ ಹೆಸರಲ್ಲಿ ಕುಡಿದು ಕುಣಿದು ಮತ್ತೇನೇನೋ ಮಾಡುತ್ತಿರುತ್ತಾರೆಂದು ಸ್ವಾಮೀಜಿ ಕಿಡಿಕಾರಿದ್ದಾರೆ. 

ಈ ಬಗ್ಗೆ ಪ್ರತಿಭಟನೆ ಮಾಡಬೇಕಾದವರು ಯಾರು? ಸತ್ಯ ಹೇಳಬೇಕಾಗುತ್ತದೆ, ನಿಷ್ಠುರ ಮಾತಾಡಬೇಕಾಗುತ್ತದೆ. ರಾಜಕಾರಣಿಗಳು ಗಣಪತಿ ಉತ್ಸವಕ್ಕೆ ಕೆಲ ಹೊತ್ತು ಹೋಗಿ ಬರುತ್ತಾರೆ. ಸತ್ಯ ಹೇಳಿದ್ದಕ್ಕೆ ನಮ್ಮ ವಿರುದ್ಧ ಮುಗಿಬಿದ್ದರೆ ನಾವು ಭಯಪಡುವ ಅಗತ್ಯವಿಲ್ಲ. ವಿಶ್ವೇಶ್ವರ ಭಟ್ ಅವರ ಪತ್ರಿಕೆಯಲ್ಲಿ ಕೀಳುಮಟ್ಟದ ಪದ ಬಳಸಿ ನಮ್ಮ ಬಗ್ಗೆ ಲೇಖನ ಬರೆದಿದ್ದಾರೆ. ಅದು ಅವರ ಸಂಸ್ಕೃತಿ, ನಮ್ಮ ಸಂಸ್ಕೃತಿ ಅಲ್ಲ. 

ಪ್ರತಿಭಟನೆ ಮಾಡುತ್ತೇವೆಂದ ಭಕ್ತರಿಗೆ ಬೇಡ ಎಂದು ಹೇಳಿದ್ದೇವೆ. ನಾವೇ ನೇರವಾಗಿ ಮಾತಾಡುತ್ತೇವೆಂದು ಹೇಳಿದ್ದೇವೆ  ಎಂದು ಪಂಡಿತಾರಾಧ್ಯಶ್ರೀ ಹೇಳಿದ್ದಾರೆ.

In a recent address at the Sanehalli National Drama Festival program in Chitradurga’s Hosadurga Taluk, Panditaradhya Shivacharya Swamiji, a prominent religious figure, reiterated his contentious statement that "Ganpati is not our culture," further fueling the wrath of Hindu communities.