ಬ್ರೇಕಿಂಗ್ ನ್ಯೂಸ್
07-11-23 05:54 pm HK News Desk ಕರ್ನಾಟಕ
ಶಿವಮೊಗ್ಗ, ನ.7: ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಇಬ್ಬರು ಖದೀಮರು ವ್ಯಕ್ತಿಯೊಬ್ಬರಿಗೆ ಹಣ ಕೊಡಿಸುತ್ತೇವೆಂದು ನಂಬಿಸಿ ಮಾಡಿದ ಕೃತ್ಯ ಇದೆಂದು ತನಿಖೆಯಲ್ಲಿ ತಿಳಿದುಬಂದಿದೆ. ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ರೈಲ್ವೇ ನಿಲ್ದಾಣದಲ್ಲಿ ಎರಡು ಬಾಕ್ಸ್ ಪತ್ತೆಯಾಗಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಜಬೀವುಲ್ಲ ಹಾಗೂ ಸಮೀವುಲ್ಲಾ ಅಲಿಯಾಸ್ ಬಾಬಾ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರು ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುತ್ತೇವೆಂದು ನಂಬಿಸಿ ವಂಚನೆ ಮಾಡುತ್ತಿದ್ದರು ಎಂದಿದ್ದಾರೆ.
ಜಬೀವುಲ್ಲಾ ಮತ್ತು ಬಾಬಾ ಗೋವಾದ ರಾಜೇಶ್ ಜಾಧವ್ ಮತ್ತು ತಿಪಟೂರಿನ ಗಿರೀಶ್ ಎಂಬವರಿಗೆ ಅರ್ಧ ಪರ್ಸೆಂಟ್ ಬಡ್ಡಿಗೆ ದುಡ್ಡು ಕೊಡಿಸುವುದಾಗಿ ನಂಬಿಸಿದ್ದರು. ವಂಚಿತರಿಂದ ಖಾಲಿ ಚೆಕ್ ಗಳನ್ನು ಪಡೆದಿದ್ದು ಆರೋಪಿಗಳು ಎರಡು ಪೆಟ್ಟಿಗೆಯಲ್ಲಿ ಒಂದೊಂದು ಕೋಟಿ ಹಣ ಇರಿಸಿದ್ದಾಗಿ ಹೇಳಿದ್ದರು. ಗೋವಾಕ್ಕೆ ನಾವು ಬರಲು ಕಷ್ಟವಾಗುತ್ತದೆ, ನೀವೇ ಶಿವಮೊಗ್ಗಕ್ಕೆ ಬನ್ನಿ ಎಂದು ರಾಜೇಶ್ ಜಾಧವ್ ನನ್ನು ಕರೆಸಿದ್ದರು. ಗಿರೀಶ್ ಹಾಗೂ ರಾಜೇಶ್ ಜಾಧವ್ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬರುವುದು ತಡವಾಗಿದಕ್ಕೆ ಬಾಕ್ಸ್ ಅಲ್ಲಿಯೇ ಇಟ್ಟು ಹೋಗಿದ್ದಾರೆ. ಆದರೆ ಬಾಕ್ಸ್ ಹೊರಗಡೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆದಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ತನಿಖೆಯಲ್ಲಿ ಸ್ಟೀಲ್ ಬಾಕ್ಸ್ ನಲ್ಲಿ ಉಪ್ಪು ಹಾಕಿಟ್ಟಿರುವುದು ಪತ್ತೆಯಾಗಿತ್ತು. ಒಳಗಡೆ ಕಾಗದ ಪತ್ರಗಳಲ್ಲಿ ಉಪ್ಪು ಹುಡಿ ಹಾಕಿಟ್ಟು ಎರಡು ಕೋಟಿ ಹಣ ಇದೆ ಎಂದು ನಂಬಿಸಿದ್ದರು. ಪ್ರಕರಣದಲ್ಲಿ ಬಾಬಾ ಎ1 ಆರೋಪಿ ಆಗಿದ್ದಾನೆ. 2021ರಲ್ಲಿ ಇವರು ತಿಪಟೂರಿನಲ್ಲಿ ಡಾಕ್ಟರ್ ಒಬ್ಬರಿಗೆ ಇದೇ ರೀತಿ ಮೋಸ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮಿಥುನ್ ಮಾಹಿತಿ ನೀಡಿದ್ದಾರೆ.
Shivamogga bomb scare, new big twist shared by SP. police said that the act was carried out by two miscreants on the pretext of giving money to a man. two anonymous boxes triggered a bomb scare here and the bomb disposal squad was pressed into action. However, the boxes were found to have contained salt and other waste materials.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am