ಬ್ರೇಕಿಂಗ್ ನ್ಯೂಸ್
09-11-23 10:49 pm Bangalore Correspondent ಕರ್ನಾಟಕ
ಬೆಂಗಳೂರು, ನ.9: ಅಂತೂ ಇಂತೂ ಬಿಜೆಪಿಯ ಸಂತೋಷ ಕೂಟದ ಆಟ ಗೆಲುವಿನತ್ತ ಸಾಗುತ್ತಿದೆ, ಬಿಜೆಪಿಯನ್ನು ಸಂಪೂರ್ಣ ಹಿಡಿತಕ್ಕೆ ಪಡೆಯುವ ಪಕ್ವ ಕಾಲ ಬಂದಿದೆ. ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮೂಲೆಯಲ್ಲಿ ಕೂರಿಸಿದ್ದಾಯ್ತು. ಹಿಂದುಳಿದ ವರ್ಗದ ಈಶ್ವರಪ್ಪರನ್ನು ಬಲವಂತವಾಗಿ ರಿಟೈರ್ಡ್ ಮಾಡಿದ್ದಾಯ್ತು.
ಈಗ ಒಕ್ಕಲಿಗ ಸದಾನಂದಗೌಡರೂ ಹೈಕಮಾಂಡ್ ನಿಂದ ಅವಮಾನಕ್ಕೊಳಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಸಂತೋಷ ಕೂಟದ ಕಲ್ಲೇಟಿಗೆ ಎಲ್ಲಾ ಹಕ್ಕಿಗಳೂ ಉದುರಿ ಬೀಳುತ್ತಿವೆ! ಕುಮಾರಸ್ವಾಮಿಯವರು ಹೇಳಿದಂತೆ ಇನ್ಮುಂದೆ ಬಿಜೆಪಿಯಲ್ಲಿ ಪೇಶ್ವೆ ವಂಶಸ್ಥರದ್ದೇ ಪಾರುಪತ್ಯ.! ಹೀಗೆಂದು ರಾಜ್ಯ ಕಾಂಗ್ರೆಸ್, ಬಿಜೆಪಿ ನಾಯಕರನ್ನು ಕಾಲೆಳೆಯುವ ಯತ್ನ ಮಾಡಿದೆ.
ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. "ಸಂತೋಷ ಕೂಟ"ದ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ಸಿಗದೆ ಮತ್ತೊಮ್ಮೆ ಅವಮಾನವಾಗುವ ಸುಳಿವನ್ನು ಅರಿತು ಈಗಲೇ ಗುಡ್ ಬೈ ಹೇಳಿದ್ದಾರೆ. ಎಲ್ಲಾ ತಲೆಗಳನ್ನೂ ಉರುಳಿಸಿ "ನಾಯಕತ್ವ ಮುಕ್ತ ಬಿಜೆಪಿ" ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ.
ಹರಿದ ಪಂಚೆಯಂತಾಗಿರುವ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ, ವಲಸಿಗರಿಗೆ ಆಪರೇಷನ್ ಕಮಲ ಮಾಡುವಾಗ ಜಾಮೂನ್ ಕೊಟ್ಟ ಬಿಜೆಪಿ ಈಗ ವಿಷ ಕೊಡುತ್ತಿದೆಯಂತೆ, ಹೀಗೆ ಹೇಳಿದ್ದು ಸ್ವತಃ ಬಿಜೆಪಿಯ ಎಸ್ ಟಿ ಸೋಮಶೇಖರ್! ಬಿಜೆಪಿ ಕಚೇರಿಯಲ್ಲಿ ಯಾರು ಯಾರಿಗೆ ವಿಷ ಬೆರೆಸುತ್ತಿದ್ದಾರೋ, ಮದ್ದು ಅರೆಯುತ್ತಿದ್ದಾರೋ! ಇತ್ತ ಕೆ ಎಸ್ ಈಶ್ವರಪ್ಪ ಎಂಬ ಕೆಲಸವಿಲ್ಲದ ರಿಟೈರ್ಡ್ ರಾಜಕಾರಿಣಿ ವಲಸಿಗರ ವಿರುದ್ಧ ನಾಲಿಗೆ ಮಸೆಯುತ್ತಿದ್ದಾರೆ. ಒಟ್ಟಿನಲ್ಲಿ #BJPvsBJP ಕಿತ್ತಾಟ ಎಂಬುದು ಮುಗಿಯದ ಧಾರಾವಾಹಿ!
ಜೆಡಿಎಸ್, ಬಿಜೆಪಿ ಮೈತ್ರಿ ಬಿಜೆಪಿ ನಾಯಕರಿಗೆ, ಜೆಡಿಎಸ್ ಶಾಸಕರಿಗೆ "ಒಲ್ಲದ ಸಂಸಾರ ಒತ್ತಾಯದ ಬಾಳ್ವೆ"ಯಂತಾಗಿದೆ. ಜೆಡಿಎಸ್ ಶಾಸಕರು ಬಿಜೆಪಿಯೊಂದಿಗಿನ ಮೈತ್ರಿ ಆತ್ಮಹತ್ಯೆಗೆ ಸಮ ಎಂದು ತಿಳಿದಿದ್ದಾರೆ, ಇತ್ತ ಬಿಜೆಪಿ ನಾಯಕರು ಕುಮಾರಸ್ವಾಮಿ ನಮ್ಮ ಜಾಗವನ್ನು ಅತಿಕ್ರಮಿಸಿಸುತ್ತಿದ್ದಾರೆ ಎಂದು ಒಳಗೊಳಗೇ ಕೈ ಹಿಸುಕುತ್ತಿದ್ದಾರೆ.
ಶರಣಗೌಡ ಕಂದನೂರು ಹಾಗೂ ಸದಾನಂದಗೌಡರ ಮಾತುಗಳಲ್ಲೇ ಈ ಸಂಗತಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಮೈತ್ರಿಗೆ ಖಾತ್ರಿ ಇಲ್ಲದೆ ಕತ್ತರಿ ಬೀಳುವ ಕಾಲ ಸನ್ನಿಹಿತವಾಗಿದೆ ಎಂದು ಟ್ವೀಟ್ ಮೂಲಕ ಟೀಕೆ ಮಾಡಿದೆ.
The BJP's party game is heading for victory and the time has come to take full control of the BJP. Lingayat leader BS Yediyurappa was made to sit in a corner. Eshwarappa, who belongs to the backward class, was forcibly retired.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm