D. V. Sadananda Gowda, Nalin Kateel, Ananth Hedge, Bjp: ಸದಾನಂದ ಗೌಡ ರಾಜಕೀಯ ನಿವೃತ್ತಿ ಘೋಷಣೆ ; ರಾಜ್ಯದಲ್ಲಿ 15ಕ್ಕೂ ಹೆಚ್ಚು ಸಂಸದರಿಗೆ ಕೊಕ್, ಪಟ್ಟಿಯಲ್ಲಿದೆ ಹಲವರ ಹೆಸರು

10-11-23 03:56 pm       Bangalore Correspondent   ಕರ್ನಾಟಕ

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ದಿಢೀರ್ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಮಾಡಿದೆ.

ಬೆಂಗಳೂರು, ನ.10: ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ದಿಢೀರ್ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಮಾಡಿದೆ. ತನಗೆ ಪಕ್ಷ ಸಾಕಷ್ಟು ಕೊಟ್ಟಿದೆ, ಇನ್ನೇನು ಬೇಕಿಲ್ಲ ಎಂದು ಸದಾನಂದ ಗೌಡ ಹೇಳಿಕೊಂಡಿದ್ದರೂ, ದಿಢೀರ್ ನಿವೃತ್ತಿಗೆ ದೆಹಲಿ ನಾಯಕರ ಸೂಚನೆಯೇ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಕೇಂದ್ರ ನಾಯಕರ ವಿರುದ್ಧವೇ ಹೇಳಿಕೆ ನೀಡಿದ್ದ ಸದಾನಂದ ಗೌಡ ಮೊನ್ನೆ ದೆಹಲಿಗೆ ಹೋಗಿ ಬಂದ ಬಳಿಕ ರಾಜಕೀಯ ವೈರಾಗ್ಯದ ಮಾತನ್ನಾಡಿದ್ದಾರೆ. ಇದರ ಬೆನ್ನಲ್ಲೇ ಸದಾನಂದ ಗೌಡ ಮಾತ್ರವಲ್ಲ, ರಾಜ್ಯದ ಹಾಲಿ ಸಂಸದರ ಪೈಕಿ ಬಹುತೇಕರಿಗೆ ಟಿಕೆಟ್ ಸಿಗಲ್ಲ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

ಚಿಕ್ಕಬಳ್ಳಾಪುರ ಸಂಸದ ಬಿ.ಎನ್ ಬಚ್ಚೇಗೌಡ, ಚಾಮರಾಜನಗರ ಕ್ಷೇತ್ರದ ಶ್ರೀನಿವಾಸ ಪ್ರಸಾದ್, ತುಮಕೂರು ಸಂಸದ ಜಿಎಸ್ ಬಸವರಾಜು ವಯಸ್ಸಿನ ಕಾರಣಕ್ಕೆ ಮುಂದಿನ ಬಾರಿ ಸ್ವರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಇದೀಗ ಆ ಸಾಲಿಗೆ ಡಿವಿ ಸದಾನಂದ ಗೌಡರ ಹೆಸರೂ ಸೇರ್ಪಡೆಯಾಗಿದೆ. ಹಾಗೆ ನೋಡಿದರೆ, ಸದಾನಂದ ಗೌಡರು 70ರ ಆಸುಪಾಸಿನಲ್ಲಿದ್ದು, ಪಕ್ಷದ ಹಿರಿತನದ 75 ವರ್ಷದ ಗಡುವು ಮೀರಿಲ್ಲ. ಹಾಗಿದ್ದರೂ ವಿವಿಧ ಕಾರಣಗಳ ನೆಪವೊಡ್ಡಿ ಸದಾನಂದ ಗೌಡರನ್ನು ಬದಿಗೆ ಸರಿಸಲು ಪಕ್ಷ ಮುಂದಾಗಿದೆ.

DV Sadananda Gowda: Differences in BJP delaying LOP, state president  appointments- The New Indian Express

ಇದೇ ವೇಳೆ, ಸದಾನಂದ ಗೌಡರ ರೀತಿಯಲ್ಲೇ ಹಾಲಿ ಸಂಸದರ ಪೈಕಿ 15ರಿಂದ 16 ಸಂಸದರು ಟಿಕೆಟ್ ಕಳಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವಯಸ್ಸು ಮತ್ತು ಹಲವು ಬಾರಿ ಕ್ಷೇತ್ರ ಪ್ರತಿನಿಧಿಸಿದ ಕಾರಣಕ್ಕೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್, ವಿಜಯಪುರ ಕ್ಷೇತ್ರದ ರಮೇಶ್ ಜಿಗಜಿಣಗಿ, ಬಾಗಲಕೋಟ ಪಿಸಿ ಗದ್ದಿಗೌಡರ್, ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಅವರಿಗೂ ಟಿಕೆಟ್ ಸಿಗಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇದಲ್ಲದೆ, ಆರು ಬಾರಿ ಸಂಸದರಾಗಿ ಈಗ ಪಕ್ಷದಲ್ಲಿ ಮೂಲೆಗುಂಪಾಗಿರುವ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಬಳ್ಳಾರಿ ಕ್ಷೇತ್ರದ ದೇವೇಂದ್ರಪ್ಪ ಅವರ ಜಾಗಕ್ಕೂ ಹೊಸಬರ ಆಯ್ಕೆ ನಡೆಯಲಿದೆ ಎನ್ನುವ ಸುದ್ದಿಗಳಿವೆ.

Mangaluru: People need not pay their electricity bills - Nalin Kumar Kateel  - Daijiworld.com

ಇತ್ತ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ವಿರೋಧಿ ಅಲೆ ಎದುರಿಸುತ್ತಿರುವ ಸಂಸದ ನಳಿನ್ ಕುಮಾರ್ ಬದಲಾವಣೆಗೂ ಒತ್ತಾಯ ಕೇಳಿಬಂದಿದೆ. ಈಗಾಗಲೇ ಪುತ್ತೂರು ಅಸೆಂಬ್ಲಿ ಕ್ಷೇತ್ರದಲ್ಲಿ ನಳಿನ್ ವಿರೋಧಿ ಅಲೆಯಿಂದಾಗಿ ಬಿಜೆಪಿಗೆ ಮುಖಭಂಗ ಆಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವ ಸಾಧ್ಯತೆ ಕಡಿಮೆ. ಮತ್ತೊಂದೆಡೆ ಕೋಲಾರ ಕ್ಷೇತ್ರ ಜೆಡಿಎಸ್ ಪಾಲಾದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿ ಟಿಕೆಟ್ ಕಳಕೊಳ್ಳಲಿದ್ದಾರೆ. ಬೆಳಗಾವಿಯಲ್ಲಿ ಸುರೇಶ್ ಅಂಗಡಿ ನಿಧನದ ಬಳಿಕ ಉಪ ಚುನಾವಣೆಯಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದ ಮಂಗಳಾ ಅಂಗಡಿ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗಿಯೂ ಕೇವಲ 5 ಸಾವಿರ ಮತಗಳಿಂದ ಗೆದ್ದಿದ್ದ ಮಂಗಳಾ ಅಂಗಡಿ ಅವರನ್ನು ವರ್ಚಸ್ಸು, ಪಕ್ಷದಲ್ಲಿ ಹಿಡಿತ ಇಲ್ಲದ ಕಾರಣಕ್ಕೆ ಬದಲಿಸಿ ಬೇರೊಬ್ಬ ಪ್ರಭಾವಿ ವ್ಯಕ್ತಿಯನ್ನು ಇಳಿಸುವ ಲೆಕ್ಕಾಚಾರ ಇದೆ.

Won't contest 2024 LS polls: Haveri MP Udasi

ಹಾವೇರಿ ಸಂಸದ ಶಿವಕುಮಾರ್ ಉದಾಸಿ ಮತ್ತು ನಳಿನ್ ಕುಮಾರ್ 56 ವರ್ಷದ ಆಸುಪಾಸಿನಲ್ಲಿದ್ದು, ವಯಸ್ಸಿನ ಸಮಸ್ಯೆ ಬದಲಿಗೆ ಇವರಿಬ್ಬರ ಬಗ್ಗೆ ಕ್ಷೇತ್ರದಲ್ಲಿಯೇ ಒಲವು ಕಡಿಮೆ ಆಗಿರುವುದು ಟಿಕೆಟ್ ನಿರಾಕರಣೆಗೆ ಕಾರಣ ಆಗಬಹುದು. ಶಿವಕುಮಾರ್ ಉದಾಸಿ ಪಕ್ಷದಲ್ಲಿ ಸಕ್ರಿಯ ಇಲ್ಲದಿರುವುದು, ಅನಂತ ಕುಮಾರ್ ಹೆಗಡೆ ರೀತಿ ರಾಜಕೀಯದ ಬಗ್ಗೆ ಆಸಕ್ತಿ ಕಳಕೊಂಡಂತಿರುವುದು ಟಿಕೆಟ್ ಕೈತಪ್ಪಲು ಕಾರಣ ಆಗಬಹುದು. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನಳಿನ್ ಕುಮಾರ್ ಮೂರು ಬಾರಿ ಪ್ರತಿನಿಧಿಸಿದ್ದರೂ, ಪಕ್ಷದ ಕಾರ್ಯಕರ್ತರ ಒಲವು ಕಡಿಮೆಯಾಗಿರುವುದು, ಕ್ಷೇತ್ರದಲ್ಲಿ ತೀವ್ರ ಮಟ್ಟದ ವಿರೋಧಿ ಅಲೆ ಎದುರಿಸುತ್ತಿರುವುದು ಟಿಕೆಟ್ ಕಳೆದುಕೊಳ್ಳಲು ಕಾರಣ ಆಗಬಹುದಾಗಿದೆ. ಅಲ್ಲದೆ, ಅವರನ್ನು ರಾಜ್ಯ ರಾಜಕಾರಣಕ್ಕೆ ತರುವ ಚಿಂತನೆಯೂ ಪಕ್ಷದಲ್ಲಿದೆ.

Udupi: Declare health emergency in state - MP Shobha Karandlaje writes to  CM - Daijiworld.com

We didn't work like PM Modi, says BJP leader CT Ravi on Karnataka poll loss  | Bengaluru - Hindustan Times

ಹೀಗಾಗಿ ಸದ್ಯದ ಬೆಳವಣಿಗೆ ನೋಡಿದರೆ, ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರ ಪೈಕಿ 15-16 ಸ್ಥಾನಗಳಲ್ಲಿ ಅಭ್ಯರ್ಥಿ ಬದಲಾವಣೆ ಖಚಿತ ಅನ್ನೋ ಮಾತು ಕೇಳಿಬರುತ್ತಿದೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಅನ್ನುವ ಮಾತು ಇರುವುದರಿಂದ ಅಲ್ಲಿಯೂ ಬದಲಾವಣೆ ಸಾಧ್ಯತೆ ಇಲ್ಲ ಎನ್ನಲಾಗದು. ಈಗಾಗಲೇ ಚಿಕ್ಕಮಗಳೂರಿನಲ್ಲಿ ಸೋತಿರುವ ಮಾಜಿ ಸಚಿವ ಸಿಟಿ ರವಿ ಉಡುಪಿ- ಚಿಕ್ಕಮಗಳೂರು ಅಥವಾ ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡರಿಂದ ಖಾಲಿಯಾಗುವ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದಲ್ಲಿ ಸುಮಲತಾ ಅವರನ್ನು ಸದಾನಂದ ಗೌಡರ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

BJP Parliamentary Board member BS Yediyurappa said on Thursday that Bangalore North MP DV Sadananda Gowda decided to retire from electoral politics as he has been asked by the party's top brass not to contest the Lok Sabha polls next year.