30 vehicles vandalized Bangalore: ಮದ್ಯದ ಅಮಲಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ  ; ಮಾರಕಾಸ್ತ್ರಗಳಿಂದ ಹೊಡೆದು 30ಕ್ಕೂ ಹೆಚ್ಚು ವಾಹನಗಳ ಜಖಂ, ಸ್ಥಳಕ್ಕೆ ಶಾಸಕ ಮುನಿರತ್ನ ಭೇಟಿ 

10-11-23 10:37 pm       Bangalore Correspondent   ಕರ್ನಾಟಕ

ಮದ್ಯದ ಅಮಲಿನಲ್ಲಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ 30ಕ್ಕೂ ಹೆಚ್ಚು ವಾಹನಗಳನ್ನು ಜಖಂ ಮಾಡಿದ ಘಟನೆ  ಲಗ್ಗೆರೆಯ ರಾಜೀವ್‍ಗಾಂಧಿ ನಗರದಲ್ಲಿ ವರದಿಯಾಗಿದೆ.

ಬೆಂಗಳೂರು, ನ.10: ಮದ್ಯದ ಅಮಲಿನಲ್ಲಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ 30ಕ್ಕೂ ಹೆಚ್ಚು ವಾಹನಗಳನ್ನು ಜಖಂ ಮಾಡಿದ ಘಟನೆ  ಲಗ್ಗೆರೆಯ ರಾಜೀವ್‍ಗಾಂಧಿ ನಗರದಲ್ಲಿ ವರದಿಯಾಗಿದೆ.

30ಕ್ಕೂ ಹೆಚ್ಚು ವಾಹನಗಳ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಬೀಸಿದ್ದು, 12 ಕಾರು, 1 ಆಟೋ, 4 ಟೆಂಪೆÇೀಗಳ ಗ್ಲಾಸ್ ಪುಡಿಯಾಗಿ, ವಾಹನಗಳು ಹಾನಿಯಾಗಿವೆ. ಇಂದು ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಮುಖಕ್ಕೆ ಮಾಸ್ಕ್ ಧರಿಸಿದ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ರಾಜಗೋಪಾಲನಗರ ಪೊಲೀಸರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

30 vehicles vandalized miscreants in Bangalore, Mla Muniratna visits spot.