ಬ್ರೇಕಿಂಗ್ ನ್ಯೂಸ್
15-11-23 11:44 am Bangalore Correspondent ಕರ್ನಾಟಕ
ಬೆಂಗಳೂರು, ನ.15: ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ನೇಮಕಗೊಂಡ ಬಿ.ವೈ ವಿಜಯೇಂದ್ರ ಮಲ್ಲೇಶ್ವರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಾಂಪ್ರದಾಯಿಕ ವಿಧಿಗಳೊಂದಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇದಕ್ಕೂ ಮುನ್ನ ಭಾರೀ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು, ಪೂರ್ಣಕುಂಭ ಹೊತ್ತು ಬಂದಿದ್ದ ಮಹಿಳೆಯರು ವಿಜಯೇಂದ್ರ ಅವರಿಗೆ ಶುಭ ಹಾರೈಸಿ ಹೂಮಳೆಗರೆದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಹೋಮ, ಹವನದಲ್ಲಿ ಭಾಗಿಯಾದರು. ಬಿಎಸ್ ಯಡಿಯೂರಪ್ಪ, ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿವಿ ಉಪಸ್ಥಿತರಿದ್ದು ಹೋಮ ಪೂಜೆಯಲ್ಲಿ ಪಾಲ್ಗೊಂಡರು. ವಿಜಯೇಂದ್ರ ಜೊತೆಗೆ ಈ ಮೂವರಿಗೂ ಹೂವಿನ ಹಾರ ತೊಡಿಸಿ, ಅರ್ಚಕರು ವಿಶೇಷವಾಗಿ ಪೂಜೆಯನ್ನು ನೆರವೇರಿಸಿದ್ದಾರೆ.
ಬಳಿಕ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕಾರದ ಸಮಾರಂಭ ನಡೆಯಿತು. ಇದೇ ವೇಳೆ, ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ರಾಜ್ಯಾಧ್ಯಕ್ಷರ ಕುರ್ಚಿಯಲ್ಲಿ ವಿಜಯೇಂದ್ರ ಅವರನ್ನು ಕುಳ್ಳಿರಿಸಿ ಶುಭಹಾರೈಸಿದರು. ಬಳಿಕ ನಡೆದ ಸಮಾರಂಭದಲ್ಲಿ ಪಕ್ಷದ ಬಾವುಟ ನೀಡಿ ಅಧಿಕೃತವಾಗಿ ಅಧಿಕಾರವನ್ನು ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಡಿಎಚ್ ಶಂಕರಮೂರ್ತಿ, ಡಿವಿ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೆ.ಎಸ್ ಈಶ್ವರಪ್ಪ, ಸಿಎಂ ಉದಾಸಿ, ಶ್ರೀರಾಮುಲು, ಗೋವಿಂದ ಕಾರಜೋಳ ಮತ್ತಿತರರಿದ್ದರು. ಸಿಟಿ ರವಿ ಮಧ್ಯಪ್ರದೇಶ ಚುನಾವಣೆ ಪ್ರಚಾರದಲ್ಲಿ ಇರುವುದರಿಂದ ಪಾಲ್ಗೊಂಡಿರಲಿಲ್ಲ. ಅಸಮಾಧಾನಿತ ನಾಯಕರಾದ ವಿ.ಸೋಮಣ್ಣ, ಅರವಿಂದ ಬೆಲ್ಲದ್, ಬಸವನಗೌಡ ಪಾಟೀಲ್ ಯತ್ನಾಳ್ ಗೈರು ಹಾಜರಾಗಿದ್ದರು.
ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಮಾತನಾಡಿ, ಬಿಎಸ್ವೈ ಸಿಎಂ ಆಗಿದ್ದಾಗ ರಾಜ್ಯಾಧ್ಯಕ್ಷ ಸ್ಥಾನದ ಪದವಿ ಸಿಕ್ಕಿತ್ತು. ನಾಲ್ಕು ವರ್ಷ 3 ತಿಂಗಳು ಅಧಿಕಾರ ಸ್ಥಾನದಲ್ಲಿದ್ದೆ. 18 ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಮುಂದೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 28ರಲ್ಲಿ 28 ಸ್ಥಾನಗಳನ್ನೂ ಗೆದ್ದು ತೋರಿಸಲಿದ್ದಾರೆ. ಅದಕ್ಕಾಗಿ ನಾವೆಲ್ಲ ಅವರ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಶಿಕಾರಿಪುರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ, ಈ ಹಿಂದೆ ರಾಜ್ಯ ಉಪಾಧ್ಯಕ್ಷರಾಗಿದ್ದು ಸಂಘಟನಾತ್ಮಕ ನೆಲೆಯಲ್ಲಿ ರಾಜ್ಯ ಸುತ್ತಾಟ ನಡೆಸಿದ್ದರು. 2020ರಲ್ಲಿ ತುಮಕೂರು ಜಿಲ್ಲೆಯ ಶಿರಾ ಮತ್ತು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದ ಸಾಧನೆ ವಿಜಯೇಂದ್ರ ಅವರದ್ದಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ ಬಳಿಕ ಲಿಂಗಾಯತ ಮತಬ್ಯಾಂಕ್ ಬಿಜೆಪಿಯಿಂದ ದೂರವಾಗಿತ್ತು ಅನ್ನುವ ಮಾತು ಕೇಳಿಬಂದಿತ್ತು. ಅದೇ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲುಂಡಿತ್ತು ಅನ್ನುವ ಲೆಕ್ಕಾಚಾರ ನಡೆದಿತ್ತು. ಹೀಗಾಗಿ ಆ ತಪ್ಪನ್ನು ಸರಿಪಡಿಸಿ ಮತ್ತೆ ಓಟ್ ಬ್ಯಾಂಕ್ ಗಿಟ್ಟಿಸಿಕೊಳ್ಳಲು ಲಿಂಗಾಯತ ಸಮುದಾಯದ ಪ್ರಭಾವಿ ಯುವ ನಾಯಕ ವಿಜಯೇಂದ್ರ ಅವರನ್ನು ಪಕ್ಷದ ಸಾರಥಿಯಾಗಿ ನೇಮಕ ಮಾಡಲಾಗಿದೆ.
Former Chief Minister BS Yediyurappa’s son and Shikaripura MLA BY Vijayendra on Wednesday took charge as the Karnataka BJP president at the party headquarters in Malleswaram in the city. Dakshina Kannada Lok Sabha MP Nalin Kumar Kateel handed over the reins to Vijayendra.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am