BJP MLA Yatnal: ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಅಶೋಕ್ ಸಾಧ್ಯತೆ ; ಶಾಸಕಾಂಗ ಸಭೆಯಲ್ಲಿ ಹೈಡ್ರಾಮಾ, ಸಭೆಯಿಂದ ಹೊರನಡೆದ ಯತ್ನಾಳ್, ಜಾರಕಿಹೊಳಿ, ಅತೃಪ್ತರ ಗೊಂದಲ  

17-11-23 07:27 pm       Bangalore Correspondent   ಕರ್ನಾಟಕ

ವಿರೋಧ ಪಕ್ಷದ ನಾಯಕನ ಆಯ್ಕೆಗಾಗಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಶಾಸಕಾಂಗ ಸಭೆ ನಡೆಸಲಾಗಿದೆ. ಆದರೆ, ಸಭೆಗೂ ಮೊದಲೇ ಬಿಜೆಪಿಯ ಕೆಲವು ಅತೃಪ್ತ ಶಾಸಕರು ಹೈಡ್ರಾಮಾ ನಡೆಸಿದ್ದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದಾರೆ.

Photo credits : Tv9 Kannada

ಬೆಂಗಳೂರು, ನ.17: ವಿರೋಧ ಪಕ್ಷದ ನಾಯಕನ ಆಯ್ಕೆಗಾಗಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಶಾಸಕಾಂಗ ಸಭೆ ನಡೆಸಲಾಗಿದೆ. ಆದರೆ, ಸಭೆಗೂ ಮೊದಲೇ ಬಿಜೆಪಿಯ ಕೆಲವು ಅತೃಪ್ತ ಶಾಸಕರು ಹೈಡ್ರಾಮಾ ನಡೆಸಿದ್ದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದಾರೆ. ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಸಭೆಗೆ ಗೈರಾಗಿ ಹೊರ ನಡೆದಿದ್ದಾರೆ.

ವಿರೋಧ ಪಕ್ಷದ ನಾಯಕರನ್ನಾಗಿ ಏಳು ಬಾರಿಯ ಶಾಸಕ, ಒಕ್ಕಲಿಗ ಸಮುದಾಯದ ಆರ್. ಅಶೋಕ್ ಅವರನ್ನು ಆಯ್ಕೆ ಮಾಡುವುದು ಪಕ್ಕಾ ಆಗಿದೆ. ಆದರೆ ಘೋಷಣೆಗೂ ಮೊದಲೇ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಅವರನ್ನು ಫೈನಲ್ ಮಾಡುತ್ತಾರೆಂದು ವದಂತಿ ಹಬ್ಬಿತ್ತು. ಇದರ ಬೆನ್ನಲ್ಲೇ ಯತ್ನಾಳ್ ಮತ್ತು ಜಾರಕಿಹೊಳಿ ವೀಕ್ಷಕರಾಗಿ ಕೇಂದ್ರದಿಂದ ಬಂದಿದ್ದ ನಿರ್ಮಲಾ ಸೀತರಾಮನ್ ಮತ್ತು ದುಷ್ಯಂತ ಕುಮಾರ್ ಅವರೆದುರಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ತನಗೆ ಚಹಾ ಕುಡಿಯಲಿಕ್ಕಿದೆ ಎಂದು ಮಾಧ್ಯಮಕ್ಕೆ ಹೇಳುತ್ತಾ ಯತ್ನಾಳ್ ಕಾರಿನಲ್ಲಿ ಕುಳಿತು ಹೊರಗೆ ತೆರಳಿದ್ದಾರೆ.

Amid celebrations, disgruntlement simmers in BJP following Vijayendra's  appointment as Karnataka party chief

ಕಾಂಗ್ರೆಸ್ ಸೇರುತ್ತಾರೆ ಎಂದು ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಂತಿರುವ ಎಸ್.ಟಿ ಸೋಮಶೇಖರ್ ಕೂಡ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಸೋಮಶೇಖರ್ ದೆಹಲಿಗೆ ತೆರಳಿದ್ದಾರೆಂದು ಹೇಳಲಾಗುತ್ತಿದ್ದು ಸಭೆಗೂ ಮೊದಲೇ ಗೊಂದಲ ಏರ್ಪಟ್ಟಿದೆ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಮಾಡಿರುವುದಕ್ಕೆ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದು, ಲಿಂಗಾಯತರಿಗೆ ಸ್ಥಾನ ಕೊಟ್ಟಿರುವುದರಿಂದ ಇನ್ನು ವಿರೋಧ ಪಕ್ಷ ಸ್ಥಾನವೂ ತಮಗೆ ಸಿಗದು ಎಂಬ ಭೀತಿಯಿಂದ ಯತ್ನಾಳ್, ಅರವಿಂದ ಬೆಲ್ಲದ ವಿರೋಧ ಭಾವ ತೋರಿದ್ದಾರೆ.

BS Yeddyurappa steps down as the chief minister of Karnataka

No soft corner for JD(S): Karnataka CM Basavaraj Bommai | Bangalore News -  The Indian Express

ಇವೆಲ್ಲದರ ನಡುವೆ, ಹೊಟೇಲ್ ಸಭಾಂಗಣದಲ್ಲಿ ಶಾಸಕಾಂಗ ಸಭೆ ನಡೆದಿದ್ದು, ವೇದಿಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿಜಯೇಂದ್ರ, ನಿರ್ಮಲಾ ಸೀತರಾಮನ್, ದುಷ್ಯಂತ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಇದ್ದಾರೆ. ಅಲ್ಲದೆ, ವೇದಿಕೆಯ ಮುಂಭಾಗದಲ್ಲಿ ಅಶೋಕ್ ಮತ್ತು ಸುನಿಲ್ ಕುಮಾರ್ ಇದ್ದಾರೆ. ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಅಶೋಕ್, ಸುನಿಲ್ ಕುಮಾರ್ ಅಥವಾ ಅಶ್ವತ್ಥ ನಾರಾಯಣ ಇವರಲ್ಲಿ ಒಬ್ಬರ ಹೆಸರು ಫೈನಲ್ ಆಗುತ್ತೆ ಎನ್ನಲಾಗಿತ್ತು. ಆದರೆ, ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಹೆಸರೇ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಸಭೆಯ ಕೊನೆಯಲ್ಲಿ ವೀಕ್ಷಕರಾಗಿ ಬಂದಿರುವ ನಿರ್ಮಲಾ ಸೀತರಾಮನ್, ಸಭೆಯ ತೀರ್ಮಾನವನ್ನು ಮಾಧ್ಯಮಕ್ಕೆ ತಿಳಿಸುವ ಸಾಧ್ಯತೆಯಿದೆ.

DKS will soon be former minister, says BJP MLA Ramesh Jarkiholi

ರಮೇಶ್ ಜಾರಕಿಹೊಳಿ ಮತ್ತು ಯತ್ನಾಳ್ ಉತ್ತರ ಕರ್ನಾಟಕ ಭಾಗದವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಬೇಕೆಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ, ಅವರಿಬ್ಬರ ಮಾತಿಗೆ ಕೇಂದ್ರ ವೀಕ್ಷಕರು ಮಣೆ ಕೊಟ್ಟಿಲ್ಲ ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ಅವರಿಬ್ಬರು ಜೊತೆಯಾಗಿಯೇ ಸಭೆಯಿಂದ ಹೊರ ನಡೆದಿದ್ದಾರೆ.

Senior BJP MLA Basanagouda Patil Yatnal on Friday said the party should not become a part of one family, in an apparent reference to the appointment of B Y Vijayendra, son of veteran leader B S Yediyurappa, to the post of Karnataka state unit president.