ಬ್ರೇಕಿಂಗ್ ನ್ಯೂಸ್
17-11-23 08:33 pm Bangalore Correspondent ಕರ್ನಾಟಕ
ಬೆಂಗಳೂರು, ನ.17: ಅಸಮಾಧಾನ, ಬಹಿಷ್ಕಾರದ ಮಧ್ಯೆಯೇ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆಮೂಲಕ ಚುನಾವಣೆ ಸೋಲಿನ ಆರು ತಿಂಗಳ ಬಳಿಕ ಬಿಜೆಪಿ ಅಧಿಕೃತವಾಗಿ ತಮ್ಮ ನಾಯಕನನ್ನು ಆಯ್ಕೆ ಮಾಡಿದಂತಾಗಿದೆ.
ಅಶೋಕ್ ಆಯ್ಕೆ ಮೂಲಕ ಯಡಿಯೂರಪ್ಪ ಬಣವೇ ಮತ್ತೆ ಮೇಲುಗೈ ಪಡೆದಂತಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಬೇಕು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಆಗ್ರಹ ಮಾಡಿದ್ದರು. ಇದೇ ಮಾತು ಹೇಳಿಕೊಂಡಿದ್ದಲ್ಲದೆ, ಸಂಜೆಯ ವೇಳೆಗೆ ಶಾಸಕಾಂಗ ಸಭೆ ನಡೆಯುವ ಹೊಟೇಲ್ ಆವರಣಕ್ಕೂ ಬಂದಿದ್ದರು. ಆದರೆ, ಸಭಾಂಗಣ ಪ್ರವೇಶ ಮಾಡದೆ ಮಾಧ್ಯಮದ ಮುಂದೆ ಹೈಡ್ರಾಮಾ ಮಾಡುತ್ತ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಹೊರ ನಡೆದಿದ್ದರು. ಶಾಸಕಾಂಗ ಸಭೆಗೆ ಶಿವರಾಮ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಅವರೂ ಗೈರಾಗಿದ್ದಾರೆ.
ಮೊನ್ನೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಆಯ್ಕೆಯಾಗುತ್ತಲೇ ನ.17ರಂದು ಶಾಸಕಾಂಗ ಸಭೆ ಕರೆದು ವಿರೋಧ ಪಕ್ಷದ ನಾಯಕನ ನೇಮಕ ಮಾಡುತ್ತೇವೆ ಎಂದಿದ್ದರು. ಅದೇ ಪ್ರಕಾರ, ಶಾಸಕಾಂಗ ಸಭೆ ನಡೆಸಿ ನಾಯಕನನ್ನು ಆಯ್ಕೆ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಕಳೆದ ಆರು ತಿಂಗಳಿನಿಂದಲೂ ಯಾರು ಪ್ರತಿಪಕ್ಷ ನಾಯಕ ಎನ್ನುವ ವಿಚಾರ ತೀವ್ರ ಕಗ್ಗಂಟಿಗೆ ಕಾರಣವಾಗಿತ್ತು. ಸಂತೋಷ್ ಮತ್ತು ಯಡಿಯೂರಪ್ಪ ಬಣಗಳ ನಡುವೆ ಯಾರು ಆ ಸ್ಥಾನಕ್ಕೇರುತ್ತಾರೆ ಎನ್ನುವ ಕುತೂಹಲ ಇತ್ತು. ಕಳೆದ ಮೂರು ದಿನಗಳಿಂದ ಒಕ್ಕಲಿಗರಾದರೆ ಅಶೋಕ್ ಅಥವಾ ಅಶ್ವತ್ಥ ನಾರಾಯಣ, ಓಬಿಸಿ ಕೋಟಾದಲ್ಲಿ ಸುನಿಲ್ ಕುಮಾರ್ ಅವರಲ್ಲಿ ಒಬ್ಬರನ್ನು ಫೈನಲ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಮತ್ತು ಆರೆಸ್ಸೆಸ್ ಹಾಗೂ ಏಳು ಬಾರಿ ಶಾಸಕರಾಗಿ ಅನುಭವಿಯಾಗಿರುವ ಅಶೋಕ್ ಅವರನ್ನು ಆ ಸ್ಥಾನಕ್ಕೆ ಏರಿಸಲಾಗಿದೆ.
ಮೊದಲು ಬೆಂಗಳೂರಿನ ಉತ್ತರ ಹಳ್ಳಿ ಕ್ಷೇತ್ರದಿಂದ ಮೂರು ಬಾರಿ ಶಾಸಕ, ಆನಂತರ ಕ್ಷೇತ್ರ ವಿಂಗಡಣೆ ಬಳಿಕ ಪದ್ಮನಾಭನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಅಶೋಕ್, ಹಲವು ಖಾತೆಗಳಲ್ಲಿ ಸಚಿವರಾದವರು. ಒಕ್ಕಲಿಗರಾಗಿ ಬೆಂಗಳೂರಿನಲ್ಲಿ ಪ್ರಭಾವ ಹೊಂದಿದ್ದಾರೆ. ಅಲ್ಲದೆ, ಆರೆಸ್ಸೆಸ್ ಮತ್ತು ಎಲ್ಲ ಬಣಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಕಾರಣಕ್ಕೆ ಅಶೋಕ್ ಅವರನ್ನೇ ವಿರೋಧ ಪಕ್ಷ ನಾಯಕರಾಗಿ ಪರಿಗಣಿಸಲಾಗಿದೆ. ಎಲ್.ಕೆ. ಆಡ್ವಾಣಿ ಕಾಲದಿಂದಲೂ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ಕಟ್ಟಾಳುವಾಗಿ ಗುರುತಿಸಿದ್ದರು. ಅಲ್ಲದೆ, ಜೆಡಿಎಸ್ ಜೊತೆಗೆ ಮೈತ್ರಿಯಾಗಿದ್ದರಿಂದ ಒಕ್ಕಲಿಗ ಮತಗಳು ಕುಮಾರಸ್ವಾಮಿಯತ್ತ ಚದುರಿ ಹೋಗದಂತೆ ಕಾಯ್ದುಕೊಳ್ಳುವ ಸಲುವಾಗಿ ಒಕ್ಕಲಿಕ ನಾಯಕರನ್ನೇ ಆ ಸ್ಥಾನಕ್ಕೆ ನೇಮಿಸಲಾಗಿದೆ.
Amid resentment and boycott, R. Sudhakaran was elected as the leader of the opposition in the BJP legislature party meeting. Ashok has been selected. Six months after the poll debacle, the BJP has officially elected its leader.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm