Rajneesh Goel IAS: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಜನೀಶ್ ಗೋಯಲ್ ನೇಮಕ

21-11-23 11:08 pm       Bangalore Correspondent   ಕರ್ನಾಟಕ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ನವೆಂಬರ್ 30ಕ್ಕೆ ನಿವೃತ್ತಿಯಾಗುತ್ತಿರುವ ವಂದಿತಾ ಶರ್ಮ ಅವರ ಜಾಗವನ್ನು ಗೋಯಲ್ ತುಂಬಲಿದ್ದಾರೆ.

ಬೆಂಗಳೂರು, ನ.21: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ. ನವೆಂಬರ್ 30ಕ್ಕೆ ನಿವೃತ್ತಿಯಾಗುತ್ತಿರುವ ವಂದಿತಾ ಶರ್ಮ ಅವರ ಜಾಗವನ್ನು ಗೋಯಲ್ ತುಂಬಲಿದ್ದಾರೆ.

2022ರ ಮೇ ತಿಂಗಳಲ್ಲಿ ವಂದಿತಾ ಶರ್ಮಾ ರಾಜ್ಯ ಸರಕಾರದ ಅತ್ಯುನ್ನತ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಸ್ಥಾನಕ್ಕೇರಿದ ನಾಲ್ಕನೇ ಮಹಿಳಾ ಅಧಿಕಾರಿ ಇವರಾಗಿದ್ದಾರೆ. 1986ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ರಜನೀಶ್ ಗೋಯಲ್ ಸದ್ಯಕ್ಕೆ ಮುಖ್ಯಮಂತ್ರಿಯವರ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ.

ಇತರೇ ಹಲವು ಹಿರಿಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿ ಲಿಸ್ಟಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಯಲ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ವಿ. ಮಂಜುಳಾ, ಅಯಜ್ ಸೇಠ್, ಜಾವೇದ್ ಅಖ್ತರ್, ಎಲ್.ಕೆ. ಅತೀಕ್, ಉಮಾ ಮಹದೇವನ್, ಗೌರವ್ ಗುಪ್ತಾ ಆಕಾಂಕ್ಷಿ ಲಿಸ್ಟಲ್ಲಿದ್ದರು.

ಹರ್ಯಾಣ ಮೂಲದ ರಜನೀಶ್ ಗೋಯಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿದ್ದು ಬಳಿಕ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪಿಎಚ್ ಡಿ ಮಾಡಿದ್ದರು. 37 ವರ್ಷಗಳ ಸೇವಾವಧಿಯಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಗೋಯಲ್ ಹೆಸರು ಮಾಡಿದ್ದಾರೆ. ಬಿಬಿಎಂಪಿ ಕಮಿಷನರ್, ಉನ್ನತ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಪತ್ನಿ ಶಾಲಿನಿ ರಜನೀಶ್ ಕೂಡ ರಾಜ್ಯ ಸರಕಾರದಲ್ಲಿ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ.

Rajneesh Goel, IAS officer of the 1986 batch, has been appointed as the next Chief Secretary of Karnataka. The State government on Tuesday issued an order appointing Mr. Goel, Additional Chief Secretary, Home Department, as the Chief Secretary. He will take charge from outgoing Chief Secretary Vandita Sharma, who is retiring from service on superannuation, on November 30.