ಬ್ರೇಕಿಂಗ್ ನ್ಯೂಸ್
25-11-23 03:02 pm Bangalore Correspondent ಕರ್ನಾಟಕ
ಬೆಂಗಳೂರು, ನ.25: ಅಪರಾಧ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ 72 ಲಕ್ಷ ರೂ. ಮೊತ್ತವನ್ನು ಪೊಲೀಸರು ತಾವೇ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದ್ದು ಈ ಬಗ್ಗೆ ಬ್ಯಾಟರಾಯನಪುರ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಕೆ ಶಂಕರ್‌ನಾಯಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬ್ಯಾಟರಾಯನಪುರ ಠಾಣೆಯ ಈ ಹಿಂದೆ ಇನ್ಸ್‌ಪೆಕ್ಟರ್ ಆಗಿದ್ದ ಜಿ.ಕೆ ಶಂಕರ ನಾಯಕ್ ವಿರುದ್ಧ ಅದೇ ಠಾಣೆಯಲ್ಲೀಗ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ. 2022ರ ಅಕ್ಟೋಬರ್‌ನಲ್ಲಿ ಶಂಕರ್ ನಾಯಕ್ ಬ್ಯಾಟರಾಯನಪುರ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದಾಗ ಉದ್ಯಮಿ ಹರೀಶ್ ಎಂಬವರಿಗೆ ಸೇರಿದ 75 ಲಕ್ಷ ರೂ. ಕಳ್ಳತನದ ಕುರಿತು ಕೇಸ್ ದಾಖಲಿಸಿದ್ದರು. ಪ್ರಕರಣದಲ್ಲಿ ಆರೋಪಿಗಳ ಬಳಿ 72 ಲಕ್ಷ ರೂ. ಜಪ್ತಿ ಮಾಡಿದ್ದರು. ಈ ಹಣವನ್ನು ಸರಕಾರಿ ಖಜಾನೆಯಲ್ಲಿ ಇಡದೇ ಇನ್ಸ್ ಪೆಕ್ಟರ್ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು. ಈ ಕುರಿತು ಹಿರಿಯ ಅಧಿಕಾರಿಗಳು ಹಲವು ಬಾರಿ ಜಪ್ತಿ ಹಣವನ್ನು ಸರಕಾರಿ ಖಜಾನೆಯಲ್ಲಿಡುವಂತೆ ಹೇಳಿದರೂ ಶಂಕರ್ ನಾಯಕ್ ಕೇಳಿರಲಿಲ್ಲ.
ಶಂಕರ್ ನಾಯಕ್ ಅವರಿಗೆ 2023ರ ಜನವರಿಯಲ್ಲಿ ಬ್ಯಾಟರಾಯನಪುರ ಠಾಣೆಯಿಂದ ಬೇರೆಡೆ ವರ್ಗಾವಣೆಯಾಗಿತ್ತು. ಈ ವೇಳೆ ಹೊಸ ಇನ್ಸ್‌ಪೆಕ್ಟರ್‌ಗೆ 72 ಲಕ್ಷ ರೂ. ಕುರಿತು ಮಾಹಿತಿ ನೀಡದೆ ತೆರಳಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಕೆಂಗೇರಿ ಉಪವಿಭಾಗದ ಎಸಿಪಿ ಭರತ್ ಎಸ್. ರೆಡ್ಡಿ, ಬ್ಯಾಟರಾಯನಪುರದ ಹಾಲಿ ಇನ್ಸ್‌ಪೆಕ್ಟರ್‌ಗೆ 72 ಲಕ್ಷ ರೂ. ಹಣದ ಬಗ್ಗೆ ಮಾಹಿತಿ ಕೇಳಿದಾಗ, ಕಂಗಾಲಾಗಿದ್ದ ಅವರು ಹಿಂದಿನ ಇನ್ಸ್‌ಪೆಕ್ಟರ್ ಶಂಕರ್‌ನಾಯಕ್ ಹಣವನ್ನು ವಶಕ್ಕೆ ಒಪ್ಪಿಸಿಲ್ಲ ಎಂದು ಹೇಳಿದ್ದರು.
ಈ ನಡುವೆ ಫೆ.26ರಂದು ಬ್ಯಾಟರಾಯನಪುರ ಠಾಣೆಗೆ ಆಗಮಿಸಿದ್ದ ಶಂಕರ್ ನಾಯಕ್ ಗೋಣಿ ಚೀಲದಲ್ಲಿ ಹಣವನ್ನು ತಂದಿಟ್ಟು ಹೋಗಿದ್ದರು. ಠಾಣೆಯಲ್ಲಿ ಹಣದ ಚೀಲ ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೀಲ ಪರಿಶೀಲಿಸಿದಾಗ ಅದರಲ್ಲಿ 72 ಲಕ್ಷ ರೂ. ಇರುವುದು ಕಂಡುಬಂದಿತ್ತು.
ಪ್ರಕರಣದಲ್ಲಿ 31ನೇ ಎಸಿಎಂಎಂ ನ್ಯಾಯಾಲಯ ಜಪ್ತಿ ಮಾಡಿದ್ದ 72 ಲಕ್ಷ ರೂ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡುವಂತೆ ಆದೇಶಿಸಿತ್ತು. ಹೀಗಾಗಿ, ಐಟಿ ಅಧಿಕಾರಿಗಳು ಹಾಗೂ ಎಸಿಪಿ ನೇತೃತ್ವದ ಪೊಲೀಸ್ ಅಧಿಕಾರಿಗಳು, ಶಂಕರ್ ನಾಯಕ್ ತಂದಿಟ್ಟಿದ್ದ ಚೀಲ ನೋಡಿದಾಗ ಅದರಲ್ಲಿ 100, 200, 500, 2000 ರೂ. ಮುಖ ಬೆಲೆಯ 72 ಲಕ್ಷ ರೂ.ಗಳಿರುವುದು ಕಂಡುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಐಟಿ ಅಧಿಕಾರಿಗಳು ಹಣದ ಚೀಲದ ಬಗ್ಗೆ ಪರಿಶೀಲನೆ ನಡೆಸಿದಾಗ ಈ ಹಿಂದೆ ಜಪ್ತಿ ಮಾಡಿದ್ದ ಹಣದಲ್ಲಿ ಐನೂರು ರೂ. ನೋಟುಗಳ ಕಟ್ಟು ಇರಲಿಲ್ಲ. ಜತೆಗೆ ಹೊಸದಾಗಿ ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಬಂದ ನೋಟುಗಳಾಗಿದ್ದವು. ಹೀಗಾಗಿ, ಕೇಸ್‌ನಲ್ಲಿ ಜಪ್ತಿ ಮಾಡಿದ್ದ ಹಣ ದುರ್ಬಳಕೆ ಮಾಡಿಕೊಂಡು ಬೇರೆ ಹಣವನ್ನು ಶಂಕರ್ ನಾಯಕ್ ತಂದಿಟ್ಟಿರುವುದು ಸಾಬೀತಾಗಿತ್ತು. ಈ ಬಗ್ಗೆ ಎಸಿಪಿ ಸೂಚನೆಯಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
Fir filed on Byatarayanapura Police Inspector G K Shankarnayak for looting seized money of 72 lakhs. A case hae been filed at the same Byatarayanapura police station against him for looting money.
25-02-25 10:30 pm
Bangalore Correspondent
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 10:58 pm
Mangalore Correspondent
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm