ಬ್ರೇಕಿಂಗ್ ನ್ಯೂಸ್
25-11-23 10:28 pm Bangalore Correspondent ಕರ್ನಾಟಕ
ಬೆಂಗಳೂರು, ನ.25: ಬೆಂಗಳೂರು ಕಂಬಳದಲ್ಲಿ ತುಳು ಅಧಿಕೃತ ಭಾಷೆಯಾಗಬೇಕೆಂಬ ಧ್ವನಿ ನಾಲ್ಕೂರುಗಳಿಗೆ ಮಾರ್ದನಿಸಿದೆ. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷಿಗರ ಬಗ್ಗೆ ಅಭಿಮಾನ ತೋರಿದ್ದಾರೆ. ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿಸುವ ವಿಚಾರದಲ್ಲಿ ನಿಮ್ಮ ಭಾಗದವರೇ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿದ್ದರಲ್ವಾ.. ಯಾಕೆ ಮಾಡಿಲ್ಲ ಎಂದು ಕುಹುಕದ ಪ್ರಶ್ನೆಯೆತ್ತಿ ನಾವು ಆ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಉಡುಪಿ, ಮಂಗಳೂರಿನ ಇಬ್ಬರು ಎಲ್ಲೇ ಸಿಗಲಿ ಅವರು ತುಳುವಿನಲ್ಲೇ ಮಾತಾಡುತ್ತಾರೆ. ನಡುವೆ ನಾವಿದ್ದರೆ ಅವರ ಮುಖ ನೋಡುವ ಸ್ಥಿತಿ. ಬಿ.ಆರ್ ಶೆಟ್ಟಿ ಹಿಂದೆ ದುಬೈನಲ್ಲಿದ್ದರೂ ಕರಾವಳಿಯ ಯಾರೇ ಸಿಕ್ಕಿದರೂ ಅವರಲ್ಲಿ ತುಳುವಲ್ಲೇ ಮಾತಾಡುತ್ತಿದ್ದರು ಅಂತ ವೇದಿಕೆಯಲ್ಲಿದ್ದ ಶೆಟ್ಟರ ಮುಖ ನೋಡಿ ನಕ್ಕರು. ಆ ಭಾಗದವರಿಗೆ ತುಳು ಭಾಷೆ ಅಂದ್ರೆ ಅಷ್ಟೊಂದು ಪ್ರೀತಿ. ಈ ಭಾಷೆಗೆ ಸ್ವಂತ ಲಿಪಿ ಇಲ್ಲ ತಾನೇ ಎಂದು ಕೇಳಿದಾಗ, ಸೇರಿದ್ದ ಜನರು ಇದೆ, ಇದೆ ಎಂದು ಉದ್ಘೋಷ ಹಾಕಿದರು. ತುಳು ಲಿಪಿ ಇದೆಯಾ.. ಓಕೆ.. ತುಳುವನ್ನು ಹೆಚ್ಚುವರಿ ಭಾಷೆ ಮಾಡಬೇಕೆಂದು ಅಶೋಕ್ ರೈ ವಿಧಾನಸಭೆಯಲ್ಲಿ ಮಾತಾಡಿದ್ರು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರ ಕೊಟ್ಟಿದ್ರು. ಹಿಂದೆ ನಿಮ್ಮ ಭಾಗದವರೇ ಈ ಖಾತೆಯ ಸಚಿವರಾಗಿದ್ದರು. ಆಗ ಸುಲಭದಲ್ಲಿ ಮಾಡಬಹುದಿತ್ತು. ಮಾಡಿಲ್ಲ ತಾನೇ..?

ನಾವು ಆ ಪ್ರಯತ್ನ ಮಾಡುತ್ತೇವೆ. ತುಳುವನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾಡುತ್ತೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೆಸರೆತ್ತದೆ ಕಾಲೆಳೆಯುತ್ತ ವ್ಯಂಗ್ಯವಾಡಿದರು. ಅಲ್ಲದೆ, ಕಂಬಳಕ್ಕೆ ಇಷ್ಟೊಂದು ಜನ ಸೇರುತ್ತಾರೆಂದು ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿ ಕಂಬಳ ಮಾಡಿದ್ದಕ್ಕಾಗಿ ಅಶೋಕ್ ರೈಗೆ ಶಹಭಾಸ್ ಹೇಳುತ್ತೇನೆ. ಪ್ರತಿ ವರ್ಷ ಇಲ್ಲಿ ಕಂಬಳ ಮಾಡಬೇಕೆಂದು ಆಶಿಸುತ್ತೇನೆ, ಇದೊಂದು ದೊಡ್ಡ ಈವೆಂಟ್ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು.



ಕಂಬಳ ಸಮಾರಂಭದಲ್ಲಿ ಕರಾವಳಿಯ ಜನಪ್ರತಿನಿಧಿಗಳು ಹೆಚ್ಚಿನವರು ತಾವೂ ತುಳುವರೆಂದು ಹೇಳಿಕೊಳ್ಳಲು ತುಳು ಭಾಷೆಯಲ್ಲೇ ಮಾತನಾಡಿದ್ರು. ಯುಟಿ ಖಾದರ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಭಾಗವಹಿಸಿ ತುಳುವಿನಲ್ಲಿ ಮಾತಾಡಿದ್ರು. ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿದ್ದಾಗ ಕಂಬಳದ ವಿಶೇಷ ಬಗ್ಗೆ ಖಾದರ್ ಅವರೇ ಹೇಳುತ್ತಿದ್ದರು.
Bangalore Kambala, CM Siddaramaiah assures of making Tulu as official language.
21-01-26 01:31 pm
HK News Desk
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
21-01-26 11:10 am
HK News Desk
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಎಂದು ವಿಡಿಯೋ ; ನೊಂದು...
19-01-26 11:03 pm
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
21-01-26 10:55 pm
Mangalore Correspondent
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ನಿಂದ ಟ್ರಾಫಿಕ್ ಸಮ...
20-01-26 10:33 pm
21-01-26 09:35 pm
HK News Desk
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm