Kambala Bangalore, Kambala, Bangalore: ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಬೆಂಗಳೂರು ಕಂಬಳ ; ಬಹುಮಾನ ಗೆದ್ದ ಕೋಣಗಳ ವಿವರ 

27-11-23 01:35 pm       Bangalore Correspondent   ಕರ್ನಾಟಕ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ರಾಜ- ಮಹಾರಾಜ ಜೋಡುಕರೆ ಕಂಬಳ ಭಾನುವಾರ ಮಧ್ಯರಾತ್ರಿ ವೇಳೆಗೆ ಮುಕ್ತಾಯಗೊಂಡಿದೆ.‌

ಬೆಂಗಳೂರು, ನ.27: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ರಾಜ- ಮಹಾರಾಜ ಜೋಡುಕರೆ ಕಂಬಳ ಭಾನುವಾರ ಮಧ್ಯರಾತ್ರಿ ವೇಳೆಗೆ ಮುಕ್ತಾಯಗೊಂಡಿದೆ.‌ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕನ್ನಡ, ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಿ ಕರಾವಳಿಯ ಜನಪದ ಕ್ರೀಡೆ ಕಂಬಳ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವಂತಾಗಿತ್ತು. ಎರಡು ದಿನದ ಕಂಬಳದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಕೋಣಗಳ ಜೋಡಿಯ ವಿವರ ಇಂತಿದೆ. 

ಬೆಂಗಳೂರು: 'ರಾಜ - ಮಹಾರಾಜ' ಜೋಡುಕರೆ ಕಂಬಳಕ್ಕೆ ಸಂಭ್ರಮದ ತೆರೆ: ಫಲಿತಾಂಶದ ವಿವರ  ಇಲ್ಲಿದೆ | Bengaluru: Curtain of celebration for Kambal: Here are the  details of the result

ಕಂಬಳದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ 

ಕನೆಹಲಗೆ: 07 ಜತೆ
ಅಡ್ಡಹಲಗೆ: 06 ಜತೆ
ಹಗ್ಗ ಹಿರಿಯ: 21 ಜತೆ
ನೇಗಿಲು ಹಿರಿಯ: 32 ಜತೆ
ಹಗ್ಗ ಕಿರಿಯ: 31 ಜತೆ
ನೇಗಿಲು ಕಿರಿಯ: 62 ಜತೆ
ಒಟ್ಟು ಕೋಣಗಳ ಸಂಖ್ಯೆ: 159 ಜತೆ

ಕನೆಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದವರು)
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ 'ಬಿ' 
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

ಅಡ್ಡ ಹಲಗೆ: ಪ್ರಥಮ: ಎಸ್.ಎಂ. ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ 'ಸಿ'
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ ನಾಯ್ಕ್ 

ಹಗ್ಗ ಕಿರಿಯ: ಪ್ರಥಮ - ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ. ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ 'ಎ'
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್ 

ಬೆಂಗಳೂರು "ರಾಜ-ಮಹಾರಾಜ" ಜೋಡುಕರೆ ಕಂಬಳ ಕೂಟದ ಫಲಿತಾoಶ ಪಟ್ಟಿ ಇಲ್ಲಿದೆ ನೋಡಿ

ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್

ನೇಗಿಲು ಕಿರಿಯ: ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ. ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ, ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ.

Kambala bangalore, winners list of first time kambala in the history of bangalore 2023. Lakhs of people gathered at Palace Grounds on Sunday for the second and final day of Kambala, the slush track buffalo race organised by the Kambala Committee of Dakshina Kannada, Udupi and Kasaragod (Kerala) districts and the Bengaluru Kambala Committee (BKC).