Bengaluru, schools get bomb threat on email: ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲವೇ ಸಾಯಲು ಸಿದ್ಧರಾಗಿ, ಅಲ್ಲಾಹನ ಹೆಸರಲ್ಲಿ ನಿಮ್ಮೆಲ್ಲರನ್ನು ಕೊಲ್ಲುತ್ತೇವೆ ; ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ 

01-12-23 03:29 pm       Bangalore Correspondent   ಕರ್ನಾಟಕ

ಬೆಂಗಳೂರಿನಲ್ಲಿ 40ಕ್ಕು ಹೆಚ್ಚು ಖಾಸಗಿ ಶಾಲೆಗಳಿಗೆ ಇಸ್ಲಾಂ ಹೆಸರಲ್ಲಿ ಬಾಂಬ್‌ ಬೆದರಿಕೆ ಹಾಕಲಾಗಿದ್ದು ಮಕ್ಕಳು, ಪೋಷಕರು ಮತ್ತು ಶಾಲಾ ಸಿಬಂದಿಯನ್ನು ಆತಂಕಕ್ಕೆ ಒಳಪಡಿಸಿದೆ. ಬೆಂಗಳೂರು ಉತ್ತರ ವಲಯ ಮತ್ತು ಬನ್ನೇರುಘಟ್ಟ ವ್ಯಾಪ್ತಿಯ 40ಕ್ಕೂ ಶಾಲೆಗಳಿಗೆ ಬೆದರಿಕೆ ಇರುವ ಇಮೇಲ್ ಬಂದಿದೆ. 

ಬೆಂಗಳೂರು, ಡಿ.1: ಬೆಂಗಳೂರಿನಲ್ಲಿ 40ಕ್ಕು ಹೆಚ್ಚು ಖಾಸಗಿ ಶಾಲೆಗಳಿಗೆ ಇಸ್ಲಾಂ ಹೆಸರಲ್ಲಿ ಬಾಂಬ್‌ ಬೆದರಿಕೆ ಹಾಕಲಾಗಿದ್ದು ಮಕ್ಕಳು, ಪೋಷಕರು ಮತ್ತು ಶಾಲಾ ಸಿಬಂದಿಯನ್ನು ಆತಂಕಕ್ಕೆ ಒಳಪಡಿಸಿದೆ. ಬೆಂಗಳೂರು ಉತ್ತರ ವಲಯ ಮತ್ತು ಬನ್ನೇರುಘಟ್ಟ ವ್ಯಾಪ್ತಿಯ 40ಕ್ಕೂ ಶಾಲೆಗಳಿಗೆ ಬೆದರಿಕೆ ಇರುವ ಇಮೇಲ್ ಬಂದಿದೆ. 

ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಸುರಕ್ಷತಾ ದೃಷ್ಟಿಯಿಂದ ಶಾಲೆಗಳಿಗೆ ರಜೆ ಸಾರಲಾಗಿದೆ. ಖಾರಿಜೈಟ್ಸ್ ಎಂಬ ಮೂಲಭೂತವಾದಿ ಸಂಘಟನೆ ಹೆಸರಲ್ಲಿ ಇ-ಮೇಲ್ ಬಂದಿದೆ. ಎಲ್ಲಾ ಶಾಲೆಗೂ ಒಂದೇ ರೀತಿಯ ಇ- ಮೇಲ್ ಬಂದಿದೆ ಎಂದು ಹೇಳಲಾಗುತ್ತಿದೆ. 

ಇ-ಮೇಲ್‍ನಲ್ಲಿ ಏನಿದೆ ಬೆದರಿಕೆ ? 

ನಿಮ್ಮನ್ನು, ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ. ತಾಜ್ ಮೇಲೆ ದಾಳಿ ಮಾಡಿದಂತೆ ದಾಳಿ ಮಾಡುತ್ತೇವೆ. ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂದು ಕೆಂಗೇರಿಯ ಚಿತ್ರಕೂಟ ಶಾಲೆಗೆ ಬಂದ ಬೆದರಿಕೆ ಇ-ಮೇಲ್‌ನಲ್ಲಿ ತಿಳಿಸಲಾಗಿದೆ. 

ಶಾಲೆಯ ಮೈದಾನದಲ್ಲಿ ಸ್ಫೋಟಕಗಳನ್ನು ಇರಿಸಿದ್ದೇವೆ. ನವೆಂಬರ್ 26ರಂದು ಅಲ್ಲಾಹನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಹತ್ಯೆ ಮಾಡಿದ್ದಾರೆ. ಲಕ್ಷಾಂತರ ಕಾಫಿರರ ಕುತ್ತಿಗೆಗೆ ಕತ್ತಿ ಹಿಡಿಯೋದರಲ್ಲಿ ಅವರು ಶಕ್ತಿಶಾಲಿಗಳಾಗಿದ್ದಾರೆ. ನೂರಾರು ಮುಜಾಹಿದ್​ಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಸಜ್ಜಾಗಿದ್ದೇವೆ. ನೀವೆಲ್ಲರೂ ಅಲ್ಲಾಹನ ಶತ್ರುಗಳು. ನಾವು ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಹತ್ಯೆ ಮಾಡುತ್ತೇವೆ. ನೀವು ನಮ್ಮ ಗುಲಾಮರಾಗದೆ ಬೇರೆ ಆಯ್ಕೆಗಳಿಲ್ಲ. ಅಲ್ಲಾಹನ ನೈಜ ಧರ್ಮವನ್ನು ಸ್ವೀಕರಿಸಿ. ದೇಗುಲಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಇನ್ಫಿನಿಟಿ ವರೆಗೆ ಸ್ಫೋಟಕಗಳೊಂದಿಗೆ ಅವರು ಬರುತ್ತಿದ್ದಾರೆ. ಬಿಸ್ಮಿಲ್ಲಾಹ್, ನಾವು ಇಡೀ ಭಾರತದಲ್ಲಿ ಅಲ್ಲಾಹನ ನೈಜ ಧರ್ಮವನ್ನು ಎಲ್ಲೆಡೆ ಹರಡಲಿದ್ದೇವೆ. ನಾವು ನಿಮ್ಮ ಮೇಲೆ ದಾಳಿಕೋರರನ್ನು ಕಳಿಸಿದ್ದೇವೆ. ಬಿಸ್ಮಿಲ್ಲಾಹ್, ನಾಳೆ ಪ್ರಪಂಚದಾದ್ಯಂತ ಸಾವಿರಾರು ಝಿಯೋನಿಸ್ಟ್​ಗಳು ಸಾಯಲಿದ್ದಾರೆ. ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಇಸ್ಲಾಂನ ಭಾರವಾದ ಖಡ್ಗಕ್ಕೆ ಸಿಲುಕಿ ಸಾಯಿರಿ. ಸತ್ಯನಿಷೇಧಿಗಳು ನಿಮ್ಮೆ ಮುಂದೆ ಸಿಕ್ಕಾಗ ಅವ್ರ ಶಿರಚ್ಛೇದ ಮಾಡಿರಿ. ಶಿರಚ್ಛೇದ ಮಾಡಿರಿ ಹಾಗೂ ಅವರ ಎಲ್ಲಾ ಬೆರಳುಗಳನ್ನೂ ಕತ್ತರಿಸಿ. ಬಹುದೇವಾರಾಧಕರು ನಿಮ್ಮ ವಿರುದ್ಧ ಹೋರಾಟ ಮಾಡುವಂತೆ ನೀವೂ ಅವರ ವಿರುದ್ಧ ಹೋರಾಡಿರಿ. ಅಲ್ಲಾಹು ಅಕ್ಬರ್ ಎಂದು ಇಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. 

ಬನ್ನೇರುಘಟ್ಟದ 7 ಶಾಲೆಗಳಿಗೆ ಹುಸಿ ಬಾಂಬ್ ಕರೆ

 • ಗ್ರೀನ್ ಹುಡ್ ಹೈಸ್ಕೂಲ್ ದಿನ್ನೇಪಾಳ್ಯ,
 • ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್
 • ರಾಯನ್ ಇಂಟರ್ನ್ಯಾಷನಲ್ ಶಾಲೆ
 • ಆಲ್ ಬಷೀರ್ ಸ್ಕೂಲ್
 • ದೀಕ್ಷಾ ಹೈ ಸ್ಕೂಲ್
 • ಕಾಂಡರ್ ಇಂಟರ್ನ್ಯಾಷನಲ್ ಸ್ಕೂಲ್
 • ಬಿವಿಎಂ ಗ್ಲೋಬಲ್ ಸ್ಕೂಲ್

ಹೆಬ್ಬಗೋಡಿಯ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ

 • ಡಿವೈನ್ ಇಂಟರ್ನ್ಯಾಷನಲ್ ಸ್ಕೂಲ್
 • ಟ್ರೀಮಿಸ್‌ ಇಂಟರ್ನ್ಯಾಷನಲ್ ಸ್ಕೂಲ್
 • ಫ್ಲಾರೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್
 • ಎಬಿನೇಜರ್ ಇಂಟರ್ನ್ಯಾಷನಲ್ ಸ್ಕೂಲ್ 

ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್,

 • ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್
 • ಓಕರಿಡ್ಜ್ ಸ್ಕೂಲ್
 • ಟಿ ಐ ಎಸ್ ಬಿ ಶಾಲೆ
 • ಇನ್ವೆಂಚರ್ ಅಕಾಡೆಮಿ ಸ್ಕೂಲ್

ಜಿಗಣಿಯ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ

 • ಅಚೀವರ್ಸ್ ಅಕಾಡೆಮಿ ಸ್ಕೂಲ್
 • ಎಂಡವರ್ ಅಕಾಡೆಮಿ ಸ್ಕೂಲ್

 

As many as 44 schools across Bengaluru received bomb threats through anonymous emails on Friday, causing panic among students, parents, and school authorities.